ಅಸ್ಸಾಂ ಪೌರತ್ವ ವಿವಾದ: ಒಂದೂವರೆ ಲಕ್ಷಕ್ಕೂ ಅಧಿಕ ಜನರಿಗೆ ಪೌರತ್ವ ಸರ್ಟಿಫಿಕೇಟ್ ಒದಗಿಸುವಲ್ಲಿ ಸಫಲತೆ ಸಾಧಿಸಿದ ಎಪಿಸಿಆರ್ ತಂಡ

0
1752

ಹ್ಯೂಮನ್ ವೆಲ್ಫೇರ್ ಅಸೋಸಿಯೇಷನ್ ವಿಷನ್ 2026 ಅಂಗವಾಗಿ ಉತ್ತರ ಅಸ್ಸಾಮಿನ ಹಾಗೂ ದಕ್ಷಿಣ ಅಸ್ಸಾಮಿನ 11 ಜಿಲ್ಲೆಗಳಲ್ಲಿ APCR ತಂಡವು ಎರಡು ತಿಂಗಳಿನಿಂದ ನಿರಂತರವಾಗಿ ಕಾರ್ಯನಿರಗವಹಿಸಿದುದದರ ಪರಿಣಾಮವಾಗಿ ಭಾರತೀಯ ಪೌರತ್ವ ನಿರಾಕರಿಸಲ್ಪಟ್ಟಿದ್ದ 1,42,006 ಮಂದಿಗೆ ಪೌರತ್ವ ಸರ್ಟಿಫಿಕೇಟ್ ಒದಗಿಸುವಲ್ಲಿ ಸಫಲವಾಗಿದೆ.

ಇದಕ್ಕಾಗಿ APCR(Association For Protection Of Civil Rights) ಒಟ್ಟು 215 NRC ಹೆಲ್ಪ್ ಡೆಸ್ಕ್ ಗಳನ್ನು ಸ್ಥಾಪಿಸಿತ್ತು. ಅಸ್ಸಾಮಿನ ಉತ್ತರ ಜಿಲ್ಲೆಗಳಿಂದ 91334 ಜನರಿಗೆ ಮತ್ತು ದಕ್ಷಿಣ ಜಿಲ್ಲೆಯಿಂದ 50672 ಜನರಿಗೆ ಪೌರತ್ವ ಸರ್ಟಿಫಿಕೇಟ್ ಮಾಡಿಸಿ ಕೊಡುವಲ್ಲಿ ಈ ತಂಡವು ಪ್ರಮುಖ ಪಾತ್ರ ವಹಿಸಿತು. ಎಪಿಸಿಆರ್ ನ ಪ್ರಧಾನ ಕಾರ್ಯದರ್ಶಿಯಾದ ಟಿ. ಆರೀಫ್ ಅಲಿ, ಹ್ಯೂಮನ್ ವೆಲ್ಫೇರ್ ಅಸೋಸಿಯೇಷನಿನ ವೈಸ್ ಚಾನ್ಸಲರ್ ಆದ ಮಮ್ಮೂಟಿ ಮೌಲವಿ, ಇತರ ಸಹಚರರು ಹಾಗೂ ಎಸಿಪಿಆರ್ ನ ಸ್ವಯಂಸೇವಕ ತಂಡವನ್ನು ಚಿತ್ರದಲ್ಲಿ ಕಾಣಬಹುದು.