ಜಿಯಾ ಅನಾಥಾಶ್ರಮ ಟ್ರಸ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಬಾಂಗ್ಲಾ ಮಾಜಿ ಪ್ರಧಾನಿ ಖಾಲಿದಾ ಜಿಯಾ

0
123

ಢಾಕಾ,ಮಾ.14: ಬಾಂಗ್ಲಾದೇಶದ ನ್ಯಾಶನಲ್ ಪಾರ್ಟಿ ಅಧ್ಯಕ್ಷೆ ಖಾಲಿದ ಜಿಯಾ, “ಜಿಯಾ ಅನಾಥಾಲಯ ಟ್ರಸ್ಟ್ ಹಣ ದುರುಪಯೋಗ ಪ್ರಕರಣ”ದ ಕುರಿತು ಹೈಕೋರ್ಟ್ನೀಡಿದ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿನಲ್ಲಿ ಗುರುವಾರ ಅರ್ಜಿ ಸಲ್ಲಿಸಿದ್ದಾರೆ.

ಬಾಂಗ್ಲಾದ ಮಾಜಿ ಪ್ರಧಾನಿಯ ವಕೀಲ ಕೈಸರ್ ಕಮಲ್ ಸುಪ್ರೀಂಕೋರ್ಟಿನಲ್ಲಿ ಬೆಳಗ್ಗೆ ಅರ್ಜಿ ಸಲ್ಲಿಸಿದರು. ಈಗಾಗಲೇ ಅವರು ತನ್ನ ಶಿಕ್ಷೆಯ ವಿರುದ್ಧ ತಡೆಯಾಜ್ಞೆ ಮತ್ತು ಜಾಮೀನು ಪಡೆದಿದ್ದಾರೆ. ಈ ಪ್ರಕರಣದಲ್ಲಿ ಖಾಲಿದಾರಿಗೆ ಕೆಳಕೋರ್ಟು ಐದು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಆದರೆ ಹೈಕೋರ್ಟು ಜೈಲು ಶಿಕ್ಷೆಯನ್ನು ದ್ವಿಗುಣಗೊಳಿಸಿತು. ಆದರೆ ನಾವು ಅವರಿಗೆ ಜಾಮೀನು ಮತ್ತು ಶಿಕ್ಷೆಗೆ ತಡೆಯಾಜ್ಞೆ ವಿಧಿಸುವಂತೆ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದೇವೆ ಎಂದು ವಕೀಲ ಕೈಸರ್ ಕಮಲ್ ಹೇಳಿದರು. ಕಳೆದ ಜನವರಿ 28ರಂದು ಕೆಳ ಕೋರ್ಟು ಐದು ವರ್ಷ ಜೈಲು ಶಿಕ್ಷೆ ವಿಧಿಸಿದ್ದನ್ನು ದುಪ್ಪಟ್ಟುಗೊಳಿಸಿ ಹೈಕೋರ್ಟು ತೀರ್ಪು ನೀಡಿತ್ತು. 2018 ಫೆಬ್ರುವರಿ ಎಂಟರಂದು ವಿಶೇಷ ಕೋರ್ಟು ಖಾಲಿದಾ ಜಿಯರಿಗೆ ಐದುವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.

ಪ್ರಕರಣದಲ್ಲಿ ಅವರ ಪುತ್ರ ಬಿಎನ್‍ಪಿಯ ಹಿರಿಯ ಉಪಾಧ್ಯಕ್ಷ ತಾರಿಕ್‍ರಹ್ಮಾನ್ ಸಹಿತ ಇತರ ಐದು ಮಂದಿ ಆರೋಪಿಗಳಿದ್ದಾರೆ. ಎಲ್ಲರಿಗೂ ಹತ್ತುವರ್ಷ ಜೈಲು ಶಿಕ್ಷೆ ಮತ್ತು 2.10ಟಾಕ ದಂಡವನ್ನು ಕೋರ್ಟು ವಿಧಿಸಿತ್ತು.