ಜೆಡಿಎಸ್ ನಾಯಕ ಡ್ಯಾನಿಶ್ ಅಲಿ ಬಿಎಸ್‌ಪಿಗೆ ಸೇರ್ಪಡೆ

0
130

ಬೆಂಗಳೂರು,ಮಾ. 16: ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಡ್ಯಾನಿಶ್ ಅಲಿ ಬಿಎಸ್‍ಪಿಗೆ ಸೇರ್ಪಡೆಯಾಗಿದ್ದಾರೆ. ಉತ್ತರಪ್ರದೇಶದಲ್ಲಿ ಜೆಡಿಎಸ್‍ಗೆ ದೊಡ್ಡ ಪ್ರಭಾವವಿಲ್ಲ. ನನ್ನ ಜನ್ಮಭೂಮಿ, ನನ್ನ ಕರ್ಮ ಭೂಮಿಯಾಗಿದೆ. ಸಂವಿಧಾನಕ್ಕೆ ಬೆದರಿಕೆ ಇರುವ ಕಾಲದಲ್ಲಿ ಬಲಿಷ್ಠವಾದ ಪಾರ್ಟಿಯೊಂದಿಗೆ ಇರುವುದು ಅಗತ್ಯವಾಗಿದೆ ಎಂದು ಬಿಎಸ್‍ಪಿಗೆ ಸೇರ್ಪಡೆಯಾದ ಬಳಿಕ ಡ್ಯಾನಿಶ್ ಅಲಿ ಹೇಳಿದರು.

ಜೆಡಿಎಸ್‍ನಲ್ಲಿ ಕೆಲಸ ಮಾಡುವಾಗ ಸ್ಥಾನಮಾನವನ್ನು ಬಯಸಿರಲಿಲ್ಲ. ದೇವೆಗೌಡರು ತನ್ನನ್ನು ಆಯ್ಕೆ ಮಾಡಿದರು. ಕೆಲಸ ಮಾಡಲು ಹೇಳಿದರು. ಅವರ ಆಶೀರ್ವಾದದಲ್ಲಿಯೇ ಬಿಎಸ್ಪಿಗೆ ಸೇರ್ಪಡೆಯಾಗಿರುವೆನು. ಮಾಯಾವತಿ ವಹಿಸಿಕೊಡುವ ಕರ್ತವ್ಯವವನ್ನು ಪೂರ್ಣ ಜವಾಬ್ದಾರಿಯಿಂದ ನಿರ್ವಹಿಸುವೆ ಎಂದು ಅವರು ಹೇಳಿದರು.

ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಸಖ್ಯಕ್ಕಾಗಿ ಶ್ರಮವಹಿಸಿದ ಪ್ರಮುಖರಲ್ಲಿ ಡ್ಯಾನಿಶ್ ಕೂಡಾ ಒಬ್ಬರು. ಲೋಕಸಭಾ ಚುನಾಣೆಯಲ್ಲಿ ಸೀಟು ಹಂಚಿಕೆ ವಿಷಯದಲ್ಲಿ ಅವರು ಸಕ್ರಿಯವಾಗಿ ಪಾಲ್ಗೊಂಡಿದ್ದರು.