ಜಮಾಅತೆ ಇಸ್ಲಾಮಿಯ ಕಾರ್ಯಕ್ರಮವಂತೆ: ಹೋಗಿ ನೋಡಿದರೆ..

0
2071

ಪದ್ಮಜಾ ಜೋಯ್ಸ್ ದರಲಗೋಡು…

ನಾಲ್ಕೈದು ದಿನಗಳ ಹಿಂದೆ ಸಂಜೆ ಮನೆಗೆ ಬಂದು ಡೋರ್ ಲಾಕ್ ತೆಗೆಯುವಾಗ ಈ ಕರಪತ್ರಗಳ ನೋಡಿ ಹೋ ಇದು ನಮ್ ಪಾರೂ ( ನನ್ನ  ಗೆಳತಿ ಫರ್ಜಾ಼ನಾ) ಕೆಲ್ಸಾ ಅಂದ್ಕೊಂಡೆ..( ಆದರೇ ಕಳ್ಸಿದ್ದು ಇನ್ನೊಬ್ಬ ಗೆಳತಿ ಗಾಯತ್ರಿ ಶೇಷಗಿರಿ ಅಂತೆ ಥ್ಯಾಂಕ್ಯೂ)

ಅದನ್ನೋದಿದಾಗ ಆಶ್ಚರ್ಯ ಕುತೂಹಲ ಆಯ್ತು.
ಪ್ರವಾದಿ ಮಹಮ್ಮದ್( ಸ ) ರವರ ಕೊಡುಗೆಗಳು — ವಿಚಾರ ಗೋಷ್ಠಿ!?
ಜಮಾಅತೆ ಇಸ್ಲಾಮೀ ಹಿಂದ್ ತೀರ್ಥಹಳ್ಳಿ
ಸದ್ಭಾವನಾ ವೇದಿಕೆ
ಸ್ವಾಗತ ಸಮಿತಿಯಲ್ಲಿನ ಹೆಸರುಗಳೂ
ಮುಖ್ಯ ಅಥಿತಿಗಳ ಹೆಸರು ಎಲ್ಲವೂ ಕೂತೂಹಲವನ್ನೇ ಹುಟ್ಟಿಸಿದ್ದಂತೂ ಸುಳ್ಳಲ್ಲ..

ಇಡೀ ಮಾನವ ಕುಲಕ್ಕೆ  ಅನ್ವಯವಾಗುವ ಪ್ರವಾದಿಗಳ ಮಾನವೀಯ ಶಿಕ್ಷಣವನ್ನು ವ್ಯಾಪಕಗೊಳಿಸಲು ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ಇದೇ ನವಂಬರ್ 16-30 ರವರೆಗೂ ಹಮ್ಮಿಕೊಂಡ ಒಂದು ರಾಜ್ಯವ್ಯಾಪೀ ಅಭಿಯಾನ, ಅದರ ಅಂಗವಾಗಿ ನೆಡೆದ ವಿಚಾರಗೋಷ್ಠಿ…

ಉದ್ದೇಶ;– ಇಂದು ನಮ್ಮ ಸಮಾಜದಲ್ಲಿ ದ್ವೇಷ , ಹಿಂಸೆ, ಸ್ವಾರ್ಥ  ಮತ್ತು ವೈರತ್ವ ವ್ಯಾಪಕವಾಗುತ್ತಿರುವ ಸಮಯದಲ್ಲಿ  ಪ್ರೀತಿ , ವಿಶ್ವಾಸ ಮತ್ತು ಮಾನವೀಯತೆಯ ಪರವಾಗಿ  ಎದ್ದು ನಿಲ್ಲೋಣಾ ಹಾಗೂ ಇವುಗಳ ಮೂಲಕ ದೇಶ ಮತ್ತು ಜಗತ್ತಿನ ಉಜ್ವಲ ಭವಿಷ್ಯವನ್ನು ನಿರ್ಮಿಸೋದು…

    ಇದೇನು ಇಸ್ಲಾಂನಲ್ಲಿ ಇಂತಹ ಕಾರ್ಯಕ್ರಮಗಳನ್ನ ನಾನೆಂದೂ ನೋಡಿಲ್ಲ ಕೇಳಿಲ್ಲ…  ಇರಲಿ ನೋಡೋಣಾಂತ ಅಂದ್ಕೊ಼ಂಡೇ ಮಾಮೂಲಿ ಖಾಯಿಲೆ ಮರೆತೂ ಬಿಟ್ಟೆ… ಭಾನುವಾರ ಸಂಜೆ ಪಾರೂ ಹೊರಟಿದೀರಾ ಅಂತ ಫೋನು ಮಾಡಿದಾಗಲೇ ನೆನಪು ಅಯ್ಯೋ ಪಾರೂ ಆಗಲೇ ಸ್ಟಾರ್ಟ್ ಆಗಿದ್ಯಲ್ಲ ಬಿಡಿ…… ಅಂದೆ ಆದರೂ ನಾ ಕರೆದೆಡೋಗೆಲ್ಲಾ ಓಡಿ ಬರುವ ಗೆಳತಿಯ ಕಮ್ಯೂನಿಟೀಲಿ ಮೊದಲ ಬಾರಿಗೆ ಹೀಗೊಂದು ವಿಶೇಷ ಕಾರ್ಯಕ್ರಮ ಹೋಗದಿದ್ದರೇ ಪ್ರೀತಿಯ ಗೆಳತೀ ನನ್ನ  ಪ್ರೀತಿಸುವ ಅವಳ ಕುಟುಂಬ ಎಲ್ಲರ ಮನಸ್ಸೂ ಚಿಕ್ಕದಾಗತ್ತೆ.. ಅಂತ ಹೊರಟ್ಬಿಟ್ಟೆ, ನಾ ಹೋಗೋವಾಗಲೇ ಮುಖ್ಯ ಅಥಿತಿಗಳಿಬ್ಬರ ಭಾಷಣವೂ ಮುಗಿದಿತ್ತಾದ್ದರಿಂದ ನಂಗೆ ಮಿಸ್ಸಾಯ್ತು ಯಾಕೆಂದರೇ ಅಧ್ಯಕ್ಷರ ಭಾಷಣದ ಬಗ್ಗೆ ಬಹಳ ಮೆಚ್ಚುಗೆ ಮಾತುಗಳು ಕೇಳಿಬಂದವು.
ಕುರಾನ್ ಬಗ್ಗೆ ಪ್ರಬಂಧ ಬರೆದು ಬಹುಮಾನ ಗಿಟ್ಟಿಸಿದ ಅದರಲ್ಲೂ ಧರ್ಮಗಳ ಹಂಗಿಲ್ಲದೇ ಬರೆದ ಮಕ್ಕಳಿಗೂ ಅಭಿನಂದನೆಗಳು.

  ನಾನು ಕೇಳಿದ್ದು;– “” ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮುಖ್ಯ ವಿಷಯ ಮಂಡಿಸಿದವರೂ ಆದ “ಜನಾಬ್ ಅಕ್ಬರ್ ಅಲಿ” ಯವರು  ವಿಚಾರ ಗೋಷ್ಠಿಯ ವಿಷಯ ಪ್ರಸ್ತುತ ಪಡಿಸುತ್ತಾ ಹೋದಂತೆ ನಿಜಕ್ಕೂ ಅಚ್ಚರಿಯಾಯ್ತು….. ಯಾವ ಧರ್ಮದ ಮೂಲಗಳೂ ಸಾರುವುದು ಮಾನವೀಯತೆಯ ಸೆಲೆಯನ್ನೇ..  ಭಾವೈಕ್ಯತೆಯನ್ನೇ.. ಸೌಹಾರ್ದ ಸುವ್ಯವಸ್ಥಿತ ಸಮಾಜವನ್ನೇ …ಮಹಿಳಾ ಔನ್ಯತ್ಯವನ್ನೇ ಅಂದಮೇಲೆ ಈ ಭೇಧಭಾವ ತಾರತಮ್ಯಗಳು ಹುಟ್ಟುವುದೆಲ್ಲಿಂದ ?? ಕೋಮುವಾದ ಜಾತಿಧರ್ಮ ಸಂಘರ್ಷಗಳ ರಣ ಕಹಳೆ ಮೊಳಗುವುದೆಲ್ಲಿಂದ ಬಹುಶಃ ಅಧಿಕಾರಶಾಹಿ ಬಂಡವಾಳ ಶಾಹಿ ಆಡಳಿತಗಾರರಿಂದ !!!???? ಮತ್ತದೇ ಬ್ರಿಟೀಶರು ಕಲಿಸಿ ಹೋದ ಡಿವೈಡ್ ಅಂಡ್ ರೂಲ್ !!!??? ಹೇ ಭಗವಂತಾ ಇದನ್ನೆಲ್ಲಾ ಎಂದಾದರೂ ಸ್ವಚ್ಛಗೊಳಿಸಲಾದೀತೆ ??

   “” ಭೌದ್ಧಿಕ, ನೈತಿಕ  ಪ್ರಜ್ಞೆ  ಮತ್ತು ಆಯ್ಕೆಯ  ಸ್ವಾತಂತ್ರ್ಯಗಳಂತಹ ಸಾಮರ್ಥ್ಯವನ್ನು ಪಡೆದ ಮಾನವ ವಿಶ್ವದ ಅತ್ಯುತ್ತಮ ಸೃಷ್ಟಿ , ಮಾನವ ತನ್ನ ಜೀವನವನ್ನು ಅರ್ಥಪೂರ್ಣವಾಗಿ ನಿರ್ವಹಿಸಲು ಮತ್ತು ಆನಂದಿಸಲು ಸಾಧ್ಯವಾಗುವ ರೀತಿಯಲ್ಲಿ ನಿಸರ್ಗದ  ಸರ್ವ ಶಕ್ತಿಗಳು ಮಾನವನ ಸೇವೆಯಲ್ಲಿ ತೊಡಗಿವೆ, ಮಾನವನು ಈ ಲೋಕದಲ್ಲಿ ತನ್ನ ಪ್ರಭುವಿನ ಪ್ರತಿನಿಧಿಯೆಂಬ ತನ್ನ ನೈಜ ಸ್ಥಾನಮಾನವನ್ನು ಅರಿತು, ಅದರ ಹೊಣೆಗಾರಿಕೆಯನ್ನು  ದೇವನ ಇಚ್ಛೆಯಂತೆ ನಿರ್ವಹಿಸುವುದರಲ್ಲಿಯೇ ಅವನ ಯಶಸ್ಸು ಅಡಕವಾಗಿದೆ…

ಇದನ್ನ ನೋಡಿ ನಾವು ಆತ್ಮ ಪರಮಾತ್ಮನ ಅಂಶ ಅಂತೀವಿ ಹೇಳೋ ರೀತಿಯಲ್ಲಿ ಭಾಷೆಯಲ್ಲಷ್ಟೇ ವ್ಯತ್ಯಾಸವೇ ಹೊರತು ತತ್ವದಲ್ಲಲ್ಲ…
ಅವರು ಪ್ರಸ್ತುತ ಪಡಿಸಿದ  ರೀತಿ ಭಾಷೆ ನಿಜಕ್ಕೂ ಸ್ವಾಗತಾರ್ಹ
ಮುಸ್ಲಿಂಸ್ ಮಾತಾಡ್ತಾರಂದ್ರೇ ಅರ್ಥವಾಗೋದು ಸ್ವಲ್ಪ ಕಷ್ಟವೇ ಅನ್ನೋ ವಾತಾವರಣದಲ್ಲಿ ಎಲ್ಲೋ ಕೆಲವು ಬಿಟ್ಟು ಬಹಳಷ್ಟನ್ನು ಸ್ಪುಟವಾಗೇ ಪ್ರಸ್ತುತ ಪಡಿಸಿದ್ದು ಖುಷಿಯೆನಿಸಿತು.

“”ನಮ್ ಜೀವನ ಇಂದು ಜ್ಞಾನಾರ್ಜನೆಯ ಹೊರತಾಗಿಯೂ ಅಂಧಕಾರದಲ್ಲಿ ಮುಳುಗಿದಂತೆನಿಸುತ್ತದೆ. ವಿಜ್ಞಾನ, ತಂತ್ರಜ್ಞಾನ ಮತ್ತು ನಾಗರೀಕತೆಯಲ್ಲಿ ಹಲವು ಔನ್ನತ್ಯಗಳನ್ನು ಸಾಧಿಸಿದ್ದರೂ ನೈತಿಕವಾಗಿ ಮಾನವರಂತೆ ಜೀವಿಸಲು ನಮಗೆ ತುಂಬಾ ಕಷ್ಟವಾಗಿದೆ. ಸ್ವಾರ್ಥ ಕಾಪಟ್ಯ ಉಗ್ರ ರಾಷ್ಟ್ರೀಯತೆ, ಆರ್ಥಿಕ ಶೋಷಣೆ, ಸಾಮಾಜಿಕ ತಾರತಮ್ಯ, ಇತ್ಯಾದಿಗಳು ದಿನಚರಿಗಳಾಗಿವೆ.

ನಮ್ಮ ದೇಶದಲ್ಲಿ ಫ್ಯಾಸಿಸ್ಟ್ ಮತ್ತು  ಕೋಮುವಾದಿ ಶಕ್ತಿಗಳು ದ್ವೇಷ ಮತ್ತು ವರ್ಗೀಯ ಸಂಘರ್ಷಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ, ಅನ್ಯಾಯ ಹಿಂಸೆ, ದೌರ್ಜನ್ಯ ಅರಾಜಕತೆ ಗುಂಪು ಹತ್ಯೆ ಭ್ರಷ್ಟಾಚಾರ ಅತ್ಯಾಚಾರ ಬಡವರ ಹಾಗೂ ದುರ್ಬಲರ ಶೋಷಣೆ ದೈನಂದಿನ ಸುದ್ದಿಗಳಾಗಿದೆ… ಆಚಾರ ವಿಚಾರದಲ್ಲಿ ನೈಜ ನಾಯಕತ್ವದ ಕೊರತೆ ಕಂಡು ಬರುತ್ತಿದೆ , ಮಾನವೀಯತೆ ವಿನಾಶದ ಅಂಚಿನಲ್ಲಿದ್ದು ಭವಿಷ್ಯ ಕರಾಳವಾಗಿ ಕಾಣುತ್ತಿದೆ….”

ಯೆಸ್. ಪ್ರೀತಿ ವಿಶ್ವಾಸ ಮತ್ತು ಮಾನವೀಯತೆಯ ಪರವಾಗಿ ಎದ್ದು ನಿಲ್ಲೋಣ, ಇವುಗಳ ಮೂಲಕ ದೇಶದ ಭವಿಷ್ಯ ಉಜ್ವಲವಾಗಿಸೋಣಾ… ಉದ್ದೇಶ ಒಳ್ಳೇದಾದರೇ ಪ್ರಯತ್ನ ಸಮರ್ಪಕವಾಗಿದ್ದರೇ , ಕಾರ್ಯ ನಿಷ್ಕಲ್ಮಶವಾದುದಾದರೇ ಪರಮಾತ್ಮನೂ ಸಾಥ್ ನೀಡುತ್ತಾನೆ….

ಕರ್ಮ ನಮ್ಮದು ಫಲಾಫಲ ಭಗವ಼ಂತನದು…
ಥ್ಯಾ಼ಂಕ್ಯೂ ಪಾರೂ ಬರದಿದ್ರೇ ಮಿಸ್ಸಾಗ್ತಿದ್ದೆ.
ಈ ಪ್ರಯತ್ನ ನಿರ಼ಂತರವಾಗಿರಲೀ.. ಶುಭವಾಗಲಿ ಧನ್ಯವಾದಗಳು…
ಮುಖ್ಯ ಅತಿಥಿಗಳ ಮಾತುಗಳನ್ನ ನಾನು ಕೇಳಲಿಲ್ಲವಾಗಿ ಇಲ್ಲಿ ನಮೂದಿಸಲಾಗಿಲ್ಲ.. ಅದಕ್ಕೆ  ಬೇರಾವ ಉದ್ದೇಶವಿಲ್ಲ ಕ್ಷಮೆ ಇರಲೀ….