ಅನಿಲ್ ಅಂಬಾನಿಗಾಗಿ ಕಾಂಗ್ರೆಸ್‍ನ ಕಪಿಲ್ ಸಿಬಲ್ ಸುಪ್ರೀಂ ಕೋರ್ಟಿನಲ್ಲಿ: ಟ್ವಿಟರ್ ನಲ್ಲಿ ಟ್ರಾಲ್‍ಗಳ ಸುರಿಮಳೆ

0
1420

ಹೊಸದಿಲ್ಲಿ: ರಫೇಲ್ ವ್ಯವಹಾರದಲ್ಲಿ ಆರೋಪಿ ಸ್ಥಾನದಲ್ಲಿರುವ ಉದ್ಯಮಿ ಅನಿಲ್ ಅಂಬಾನಿಗಾಗಿ ಸುಪ್ರೀಂ ಕೋರ್ಟಿನಲ್ಲಿ ಕಾಂಗ್ರೆಸ್ ನಾಯಕ, ವಕೀಲರಾದ ಕಪಿಲ್ ಸಿಬಲ್ ಹಾಜರಾಗಿದ್ದು, ಅವರ ವಿರುದ್ಧ ಟ್ವಿಟರ್‍ನಲ್ಲಿ ಟ್ರಾಲ್‍ನ ಸುರಿಮಳೆ ನಡೆದಿದೆ.

550 ಕೋಟಿ ರೂಪಾಯಿ ಸಾಲ ಬಾಕಿ ಉಳಿಸಿದ್ದಾರೆ ಎಂದು ಅನಿಲ್ ಅಂಬಾನಿ ವಿರುದ್ಧ ಟೆಲಿಕಾಂ ಕಂಪೆನಿಯಾದ ಎರಿಕ್ಸನ್ ಸಲ್ಲಿಸಿದ ಕೋರ್ಟು ನಿಂದೆ ಅರ್ಜಿಯಲ್ಲಿ ವಾದ ಆರಂಭವಾಗುತ್ತಿದ್ದಂತೆ ಕಪಿಲ್ ಸಿಬಲ್ ಮತ್ತು ಮುಕುಲ್ ರೋಹ್ಟಗಿ ಸುಪ್ರೀಂಕೋರ್ಟಿನಲ್ಲಿ ಹಾಜರಾಗಿದ್ದಾರೆ.

ಅನಿಲ್ ಅಂಬಾನಿಯ ವಕೀಲರಾಗಿ ಹಾಜರಾಗುವ ಮೊದಲು ಕೇಂದ್ರ ಸರಕಾರವನ್ನು ಟೀಕಿಸಲು ಅದೇ ಅಂಬಾನಿಯನ್ನು ಕಪಿಲ್ ಸಿಬಲ್ ಉಪಯೋಗಿಸಿದ್ದರು. ಇದನ್ನು ಮುಂದಿಟ್ಟು ಕಪಿಲ್ ಸಿಬಲ್ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕಾ ಪ್ರಹಾರ ನಡೆದಿದೆ. ಪಾಪರ್ ಅರ್ಜಿ ಸಲ್ಲಿಸಿ ಅನಿಲ್ ಅಂಬಾನಿಯ ರಿಲಯನ್ಸ್ ಕಮ್ಯುನಿಕೇಶನ್ ಕಂಪೆನಿ ಬಾಕಿ ಪಾವತಿಸದೆ ಸುಪ್ರೀಂಕೋರ್ಟಿನ ಆದೇಶವನ್ನು ಉಲ್ಲಂಘಿಸಿದ್ದಾರೆ ಎಂದು ಎರಿಕ್ಸನ್ ಕಂಪೆನಿ ಆರೋಪಿಸಿದೆ. ಎರಿಕ್ಸನ್ ಇಂಡಿಯದ ಪ್ರತಿನಿಧಿ ವಿಶಾಲ್ ಗಾರ್ಗ್ ಅನಿಲ್ ಅಂಬಾನಿಯ ವಿರುದ್ಧ ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ.