ಜಮ್ಮುವಿನಲ್ಲಿ ಬಸ್ ಕಂದಕಕ್ಕೆ ಉರುಳಿ 25 ಸಾವು

0
520

ಶ್ರೀನಗರ, ಜು.1: ಜಮ್ಮುಕಾಶ್ಮೀರ ಕಿಶ್ತೂರ್ ಜಿಲ್ಲೆಯಲ್ಲಿ ಮಿನಿ ಬಸ್ ಕಂದರಕ್ಕೆ ಉರಳಿಬಿದ್ದು 25 ಮಂದಿ ಮೃತಪಟ್ಟಿದ್ದಾರೆ. ಅಪಘಾತದಲ್ಲಿ 13 ಮಂದಿ ಗಾಯಗೊಂಡಿದ್ದಾರೆ.

ಜಮ್ಮುವಿನಿಂದ 230 ಕಿಲೊಮೀಟರ್ ದೂರವಿರುವ ಕಿಶ್ತರ್ ಕೊಶ್ವಾನ್ ಎಂಬಲ್ಲಿ ಬೆಳಗ್ಗೆ ಏಳು ಗಂಟೆಗೆ ಅಪಘಾತ ನಡೆದಿದೆ. ಸ್ಥಳೀಯರೇ ರಕ್ಷಣಾ ಕಾರ್ಯ ನಡೆಸಿದ್ದಾರೆ. ಗಾಯಾಳುಗಳನ್ನು ಕಿಶ್ತರ್ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ.

ಮಿನಿಬಸ್‍ನಲ್ಲಿ ಪ್ರಯಾಣಿಕರ ಜಂಗುಳಿಯಿತ್ತು ಎಂದು ಪೊಲೀಸರು ತಿಳಿಸಿದರು. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಳಗೊಳ್ಳುವ ಸಾಧ್ಯತೆಯಿದೆ.