ಪತ್ರಕರ್ತನ ಮೇಲೆ ಹಲ್ಲೆ: ಬಿಜೆಪಿ ನಾಯಕರೊಂದಿಗೆ ಸಂದರ್ಶನ ನಡೆಸಲು ಹೆಲ್ಮೆಟ್ ಧರಿಸಿ ಪ್ರತಿಭಟನೆ ನಡೆಸಿದ ಪತ್ರಕರ್ತರು!

0
932

ರಾಯ್ ಪುರ: ಪತ್ರಕರ್ತನ ಮೇಲೆ ಬಿಜೆಪಿ ಕಾರ್ಯಕರ್ತರು ನಡೆಸಿದ ದಬ್ಬಾಳಿಕೆ ಮತ್ತು ಹಲ್ಲೆಯನ್ನು ಖಂಡಿಸಿ ರಾಯ್ ಪುರ ಪತ್ರಕರ್ತರ ಗುಂಪೊಂದು ಹೆಲ್ಮೆಟ್ ಧರಿಸುವ ಮೂಲಕ ಬಿಜೆಪಿ ನಾಯಕರ ಸಂದರ್ಶನ ನಡೆಸಿ ಪ್ರತಿಭಟಿಸಿದ ಘಟನೆಯು ನಿನ್ನೆ (ಫೆ. 6) ಬುಧವಾರ ನಡೆದಿದ್ದು ಪತ್ರಕರ್ತರರ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯನ್ನು ಎತ್ತಿ ಹಿಡಿದಿದೆ.

ಬಿಜೆಪಿ ಜಿಲ್ಲಾ ಮಟ್ಟದ ನಾಯಕರ ಸಮಾವೇಶ ಕಾರ್ಯಕ್ರಮದಲ್ಲಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಸುಮನ್ ಪಾಂಡ್ಯೆ ಎಂಬ ಪತ್ರಕರ್ತನ ಮೇಲೆ ಬಿಜೇಪಿ ನಾಯಕರು ಹಲ್ಲೆ ನಡೆಸಿದ ಪರಿಣಾಮವಾಗಿ ತಲೆಗೆ ಗಂಭೀರ ಗಾಯವಾಗಿತ್ತು. ಪತ್ರಕರ್ತರ ಸ್ವಾತಂತ್ರ್ಯಕ್ಕೆ ಧಕ್ಕೆಯುಂಟು ಮಾಡಿದ ಬಿಜೆಪಿ ಕಾರ್ಯಕರ್ತರ ಗೂಂಡಾಗಿರಿಯನ್ನು ಖಂಡಿಸಿ ಪತ್ರಕರ್ತರು ಪ್ರತಿಭಟನೆ ನಡೆಸಿದ್ದರಾದರೆ ಯಾವುದೇ ರೀತಿಯ ಕ್ರಮಗಳನ್ನು ಕೈಗೊಂಡಿರಲಿಲ್ಲ. ಆದರೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸದೇ ಇದ್ದುದರಿಂದ ಪತ್ರಕರ್ತರು ನೂತನ ರೀತಿಯ ಪ್ರತಿಭಟನೆಯನ್ನು ನಡೆಸಿದ್ದು ಬಿಜೆಪಿ ನಾಯಕರ ಹಾಗೂ ಕಾರ್ಯಕ್ರಮಗಳ ವರದಿಗಾರಿಕೆಯ ವೇಳೆ ಹೆಲ್ಮೆಟ್ ಧರಿಸಿ ಕ್ಯಾಮರ ಮತ್ತು ಮೈಕ್ ಗಳನ್ನು ಹಿಡಿದು ಬಿಜೆಪಿಯಿಂದ ಪತ್ರಕರ್ತರಿಗೆ ಅಪಾಯವಿದೆ ಎಂಬ ಸಂದೇಶವನ್ನು ಸಾರಿರುವುದು ಇದೀಗ ಸಾಮಾಜಿಕ ಜಾಲತಾಣದ ಗಮನವನ್ನು ಸೆಳೆದಿದೆ.

ಬಿಜೆಪಿಯು ರಾಯ್ ಪುರ ಜಿಲ್ಲಾ ಮಟ್ಟದ ಸಭೆಯೊಂದನ್ನು ಫೆಬ್ರವರಿ 2 ರಂದು ಹಮ್ಮಿಕೊಂಡಿತ್ತು. ಈ ಸಂದರ್ಭದಲ್ಲಿ ಪತ್ರಕರ್ತ ಸುಮನ್ ಪಾಂಡ್ಯೆ ತಮ್ಮ ಮೊಬೈಲ್ ಫೋನ್ ನಲ್ಲಿ ಕಾರ್ಯಕ್ರಮದ ವಿಡಿಯೋ ಚಿತ್ರಿಕರಣ ನಡೆಸುತ್ತಿದ್ದರು. ಸಭೆಯಲ್ಲಿ ಸದಸ್ಯರ ನಡುವೆಯೇ ಮಾತಿನ ಚಕಮಕಿ ನಡೆದಿದ್ದು ಈ ಸಂದರ್ಭದಲ್ಲಿ ವಿಡಿಯೋವನ್ನು ಡಿಲೀಟ್ ಮಾಡುವಂತೆ ರಾಜೀವ್ ಅಗರ್ ವಾಲ್ ಹಾಗೂ ಉತ್ಕರ್ಷ್ ತ್ರಿವೇದಿ, ಪತ್ರಕರ್ತ ಸುಮನ್ ಪಾಂಡ್ಯೆಯವರ ಮೇಲೆ ಒತ್ತಡ ಹಾಕತೊಡಗಿದರು. ವಿಡಿಯೋ ಡಿಲೀಟ್ ಮಾಡಲು ಪಾಂಡ್ಯೆ ಒಪ್ಪದ ಕಾರಣಕ್ಕಾಗಿ ಪತ್ರಕರ್ತನನ್ನು ಹಿಗ್ಗಾಮುಗ್ಗಾ ಥಳಿಸಿದ ಪರಿಣಾಮವಾಗಿ ಪಾಂಡ್ಯೆ ತಲೆ ಗಂಭೀರ ಗಾಯವಾಗಿತ್ತು.