ವಕ್ಫ್ ಆಡಳಿತದಿಂದ ಮಸೀದಿ ದಫನ ಭೂಮಿ ಮಾಹಿತಿ ಸಂಗ್ರಹಕ್ಕೆ ಸೂಚನೆ

0
600

ಮಂಗಳೂರು: ರಾಜ್ಯ ವಕ್ಫ್ ಮಂಡಳಿಯ ಆಡಳಿತಾಧಿಕಾರಿ ಎ.ಬಿ.ಇಬ್ರಾಹೀಂರ ನಿರ್ದೇಶನದಂತೆ ದ.ಕ.ಜಿಲ್ಲೆಯ ಪ್ರತಿಯೊಂದು ಗ್ರಾಮಗಳಲ್ಲಿರುವ ಮಸೀದಿಗೆ ಸಂಬಂಧಪಟ್ಟ ದಫನ ಭೂಮಿಯ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ.

ಹಾಗಾಗಿ ಮಸೀದಿಗೆ ದಫನ ಭೂಮಿ ಇದೆಯೋ, ಇಲ್ಲವೋ, ದಫನ ಭೂಮಿ ಇದ್ದರೂ ಸೂಕ್ತ ದಾಖಲೆ ಪತ್ರಗಳಿಲ್ಲದ ಮಸೀದಿಗಳ ವಿವರಗಳನ್ನು ಹೆಸರು ಮತ್ತು ವಿಳಾಸ, ಗ್ರಾಮ ಮತ್ತು ಸರ್ವೇ ನಂಬ್ರ ಇತ್ಯಾದಿ ಮಾಹಿತಿಯನ್ನು ಜಿಲ್ಲಾ ವಕ್ಫ್ ಕಚೇರಿಗೆ ಕಳುಹಿಸಬೇಕು.

ಹೆಚ್ಚಿನ ಮಾಹಿತಿಗೆ ವಕ್ಫ್ ಕಚೇರಿಯ ದೂ.ಸಂ. 0824-2420078 ನ್ನು ಸಂಪರ್ಕಿಸಬಹುದು ಎಂದು ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಹಾಜಿ ಯು.ಕೆ.ಮೋನು ಕಣಚೂರು ತಿಳಿಸಿದ್ದಾರೆ.