ವಿದೇಶದಲ್ಲಿ ಬೇನಾಮಿ ಖಾತೆಗಳ ಸಹಿತ ಪಾಕಿಸ್ತಾನಿಯರ 150,000 ಬ್ಯಾಂಕ್ ಖಾತೆಗಳು – ಫೆಡರಲ್ ಬೋರ್ಡ್ ಆಫ್ ರೆವೆನ್ಯೂ ಹೇಳಿಕೆ

0
136

ಇಸ್ಲಾಮಾಬಾದ್,ಮಾ. 14: ಪಾಕಿಸ್ತಾನದ ಫೆಡರಲ್ ಬೋರ್ಡ್ ಆಫ್ ರೆವೆನ್ಯೂ ಪಾಕಿಸ್ತಾನಿಯರು ವಿದೇಶದಲ್ಲಿ 150,000 ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ ಎಂದು ಬಹಿರಂಗಪಡಿಸಿದೆ. ಇವುಗಳಲ್ಲಿ ಸುಮಾರು 400 ಖಾತೆಗಳು ಒಂದು ಮಿಲಿಯನ್ ಡಾಲರ್‍ಗಿಂತ ಹೆಚ್ಚು ಹಣ ಹೊಂದಿವೆ ಎಂದು ಅದು ತಿಳಿಸಿದೆ.

ನಾಲ್ನೂರು ಖಾತೆದಾರರಿಗೆ ಅದು ನೋಟಿಸು ಕಳುಹಿಸಿದೆ. ಒಂದು ಮಿಲಿಯನ್ ಡಾಲರ್‍ಗಿಂತ ಕಡಿಮೆ ಹಣವನ್ನು ಹೊಂದಿದವರಿಗೆ ಫೆಡರಲ್ ಬೋರ್ಡ್ ರೆವೆನ್ಯೂ ನೋಟಿಸು ಕಳುಹಿಸುವ ಪ್ರಕ್ರಿಯೆಯನ್ನು ಮುಂದುವರಿಸುತ್ತಿದೆ.

ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯ ಆರ್ಥಿಕ ಸ್ಥಾಯಿ ಸಮಿತಿಯ ಮುಂದೆ ವರದಿ ಸಲ್ಲಿಸಲಾಗಿದ್ದು ಈ ಖಾತೆದಾರರಿಂದ ತೆರಿಗೆಯನ್ನು ವಸೂಲು ಮಾಡಲಾಗಿದೆ ಎಂದು ಫೆಡರಲ್ ರೆವೆನ್ಯೂ ಬೋರ್ಡು(ಎಫ್‍ಬಿಆರ್) ತಿಳಿಸಿದೆ.

ಈ ವಿವರವನ್ನು ಎಫ್‍ಬಿಆರ್ ಅಧ್ಯಕ್ಷ ಮುಹಮ್ಮದ್ ಜೆಹನ್‍ಜೇಬ್ ಖಾನ್ ನೀಡಿದ್ದಾರೆ. ಆದರೆ ಎಷ್ಟು ಹಣವನ್ನು ತೆರಿಗೆಯಾಗಿ ಖಾತೆದಾರರಿಂದ ಪಡೆಯಲಾಗಿದೆ ಎಂದು ಅವರು ತಿಳಿಸಿಲ್ಲ. ಅಂದಾಜು 340 ದಶ ಲಕ್ಷ ರೂಪಾಯಿ ತೆರಿಗೆ ವಸೂಲಾಗಿದೆ ಎನ್ನಲಾಗಿದೆ.ಕೆಲವರು ಒಂದಕ್ಕಿಂತ ಹೆಚ್ಚು ಖಾತೆಯನ್ನು ಹೊಂದಿದ್ದಾರೆ ಎಂದು ಸ್ಥಾಯಿ ಸಮಿತಿಯ ಮುಂದೆ ಖಾನ್ ಹೇಳಿದ್ದಾರೆ. ಇವರಲ್ಲಿ ಹಲವಾರು ಬೇನಾಮಿ ಖಾತೆಗಳು ಇವೆ ಎಂದು ಅವರು ತಿಳಿಸಿದರು.