3 ಫೋಟೋಗಳು ಮತ್ತು ಪ್ರಬಲ‌ ಭಾರತ

0
534

ರಾಹುಲ್ ಮಸೀದಿಗೆ ಭೇಟಿ ನೀಡಿದರೆ ಅದು ಅಲ್ಪಸಂಖ್ಯಾತರ ಓಲೈಕೆ, ದೇವಸ್ಥಾನಕ್ಕೆ ಭೇಟಿ ನೀಡಿದರೆ ಅದು ಎಲೆಕ್ಷನ್ ಗಿಮಿಕ್ ಎಂದು ಬೊಬ್ಬಿಡುವ ಧರ್ಮ-ದೇವಸ್ಥಾನಗಳ ಗುತ್ತಿಗೆ ಪಡೆದಂತೆ ವರ್ತಿಸುವ ಬಿಜೆಪಿಯಂಥಹ ಪಕ್ಷಗಳು ಒಂದೆಡೆಯಾದರೆ, ರಾಹುಲ್ ಗಾಂಧಿ ದೇವಸ್ಥಾನಕ್ಕೆ ಭೇಟಿ ನೀಡಿದಾಗ ಏನು ತಪ್ಪು ಮಾಡ್ತಾರೆ, ಏನು ತಿಂತಾರೆ, ಎಂಬುವುದನ್ನೇ ಮೈಕ್ರೋಸ್ಕೋಪ್  ಹಿಡಿದುಕೊಂಡು ಹುಡುಕುವ ಬಿಜೆಪಿಯ ಟೀಂ-M ಗಳು ಇನ್ನೊಂದು ಕಡೆ.

ದೇವಸ್ಥಾನ, ದರ್ಗಾ ಹಾಗೂ ಚರ್ಚ್’ಗಳಿಗೆ ಭೇಟಿ ನೀಡಿರುವ ರಾಹುಲ್ ನಡೆಯನ್ನು ರಾಜಕಾರಣಿಗಳು ತಮಗೆ ಬೇಕಾದಂತೆ ವಿಶ್ಲೇಷಿಸಬಹುದು. 

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕರಾವಳಿ ಕರ್ನಾಟಕದ ಪ್ರವಾಸದಲ್ಲಿದ್ದಾಗ ತೆಗೆಯಲಾದ‌ 3 ಫೋಟೋಗಳಿವು.


ಮೂರು ಸಮುದಾಯಗಳ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಮೂಲಕ ರಾಹುಲ್ ಗಾಂಧಿ ಒಂದು ದೊಡ್ಡ ಸಂದೇಶವನ್ನು ರವಾನಿಸಿದ್ದಾರೆ.

ವಿಶ್ವದಲ್ಲಿ ಅತ್ಯಂತ ಜನಪ್ರಿಯ ಪ್ರಧಾನಿಯೆಂದೂ, ತಮ್ಮದು ಜಗತ್ತಿನಲ್ಲಿ ಅತೀ ದೊಡ್ಡ ಪಕ್ಷವೆಂದೂ,  ತಮ್ಮ ಸಂಘಟನೆ ಆಲ್ ಇಂಡಿಯಾ ರೇಡಿಯೋಗಿಂತ ಹೆಚ್ಚು ಜನರ ಬಳಿಗೆ ತಲುಪುತ್ರದೆ ಎಂದೂ ಹೇಳಿಕೊಳ್ಳುವವರಿಗೂ ಚರ್ಚ್, ಮಸೀದಿಗಳಿಗೆ ಭೇಟಿ ನೀಡಲು ಸಾಧ್ಯವಾಗುತ್ತಿಲ್ಲ. ಅದೆಂತಹ ಜನಪ್ರಿಯತೆಯೋ, ಅದೆಂತಹ ಒಳಗೊಳ್ಳುವಿಕೆಯೋ??…. ಆದರೆ ರಾಹುಲ್ ಗಾಂಧಿಯ ಭೇಟಿ ವೈವಿಧ್ಯಮಯಲ್ಲಿ ಏಕತೆಯ, ಸೌಹಾರ್ದತೆಯ, ಪ್ರೀತಿ-ವಿಶ್ವಾಸದ ಸಂದೇಶವನ್ನು ರವಾನಿಸಿರುವುದು ಸತ್ಯ.

ಬಿಜೆಪಿ, ಬಿಜೆಪಿಯ ಟೀಂ- M ಗಳು ಧಾರ್ಮಿಕ ಸ್ಥಳಗಳ ಭೇಟಿಯನ್ನು ವರದಿ ಮಾಡಿದರೂ, ಅದರ ಹಿಂದಿನ ಸಂದೇಶವನ್ನು ತಿರುಚಿದರೂ, ಜನಸಾಮಾನ್ಯರು ರಾಹುಲ್ ನಡೆಯನ್ನು ಗ್ರಹಿಸಿದ್ದಾರೆ

@ಶರಣ ಉಡುಪಿ