ಮದೀನದ ಸಮೀಪ ಅಪಘಾತ: ಬಸ್‍ನಲ್ಲಿದ್ದ 30 ಕ್ಕೂ ಹೆಚ್ಚು ಮಂದಿ ಸಾವು

0
934

ಸನ್ಮಾರ್ಗ ವಾರ್ತೆ

ಜಿದ್ದ,ಅ.17: ಮದೀನ ಸಮೀಪ ತೀರ್ಥಯಾತ್ರಿಕರು ಸಂಚರಿಸುತ್ತಿದ್ದ ಬಸ್ ಮತ್ತೊಂದು ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಮೂವತ್ತಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಮದೀನಾದಿಂದ ಹೊರಟ ಬಸ್ ಅಫಘಾತಕ್ಕೊಳಗಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಇಂಡೊನೇಶಿಯದ ಯಾತ್ರಿಕರು ಬಸ್‍ನಲ್ಲಿ ಇದ್ದರು ಎಂದು ಅನಧಿಕೃತ ಮಾಹಿತಿ ಲಭಿಸಿದೆ.

ಹಿಜ್ರಾ ರಸ್ತೆಯಲ್ಲಿ ಮದೀನಾದಿಂದ 180 ಕಿಲೊ ಮೀಟರ್ ದೂರದಲ್ಲಿ ಘಟನೆ ನಡೆದಿದೆ. ಮದೀನದಿಂದ ಮಕ್ಕಕ್ಕೆ ಬಸ್ ಹೋಗುತ್ತಿದ್ದಾಗ ಇನ್ನೊಂದು ಬಸ್ ಢಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಢಿಕ್ಕಿ ಹೊಡೆದ ಕೂಡಲೇ ಇಡೀ ಬಸ್ ಪೂರ್ಣ ಸುಟ್ಟುಹೋಗಿದೆ. ಎಷ್ಟು ಮಂದಿ ಮೃತಪಟ್ಟಿದ್ದಾರೆ ಯಾವ ದೇಶದವರು ಎಂದು ಸ್ಪಷ್ಟವಾಗಿ ತಿಳಿದು ಬಂದಿಲ್ಲ.

ವಿವಿಧ ದೇಶಗಳಿಂದ ಉಮ್ರಾ ಮಾಡಲು ಬಂದವರು ಎನ್ನಲಾಗುತ್ತಿದೆ. ಬಸ್‍ನಲ್ಲಿ ಐವತ್ತು ಮಂದಿ ಇದ್ದರು. ಐದು ಮಂದಿಗೆ ಸುಟ್ಟ ಗಾಯಗಳಾಗಿವೆ. ಇವರನ್ನು ವಾದಿ ಫರಅ್, ಅಲ್‍ಹಂನ ಆಸ್ಪತ್ರೆಗೆ ದಾಖಲಿಸಲಾಗಿದ್ದು ಇವರಲ್ಲಿ ಮೂರು ಮಂದಿಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಅಪಘಾತ ನಡೆದ ಕೂಡಲೇ ಹತ್ತಿರದ ಆಸ್ಪತ್ರೆಗಳಿಗೆ ಎಚ್ಚರಿಕೆ ಮುನ್ಸೂಚನೆ ನೀಡಲಾಗಿತ್ತು. ಸಿವಿಲ್ ಡಿಫೆನ್ಸ್, ಪೊಲೀಸ್, ರಸ್ತೆ ಸುರಕ್ಷ ವಿಭಾಗ ರಕ್ಷಣಾ ಕಾರ್ಯದಲ್ಲಿ ನಿರತವಾಗಿದೆ.