ಇರಾನಿನ ಮಾನವಹಕ್ಕು ವಕೀಲೆ ನಸ್ರೀನ್ ಸೊಟೊಡೆಗೆ 33 ವರ್ಷ ಜೈಲು ಶಿಕ್ಷೆ

0
136

ಟೆಹ್ರಾನ್: ಇರಾನಿನ ಮಾನವಹಕ್ಕು ವಕೀಲೆಯೊಬ್ಬರಿಗೆ 33 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ನಸ್ರೀನ್ ಸೊಟೊಡೆಯನ್ನು ಅವರ ಮನೆಯಿಂದ ಎಂಟು ತಿಂಗಳ ಹಿಂದೆ ಬಂಧಿಸಲಾಗಿತ್ತು. ಅವರ ಬಂಧನಕ್ಕೆ ಸರಕಾರ ಯಾವುದೇ ಕಾರಣವನ್ನು ನೀಡಿರಲಿಲ್ಲ. ಆದರೆ ಅವರು ಶಿರ ವಸ್ತ್ರವನ್ನು ಬಹಿರಂಗವಾಗಿ ಎಸೆದ ಅಪರಾಧದಡಿಯಲ್ಲಿ ಬಂಧನಕ್ಕೊಳಗಾಗಿದ್ದ ಮಹಿಳಾ ಪ್ರತಿಭಟನಾಕಾರ ಪರ ಕೆಲಸ ಮಾಡುತ್ತಿದ್ದರು. ಮಾರ್ಚ್ ಹನ್ನೊಂದರಂದು ಅವರ ಪತಿ ರೇಝಾ ಖಾನ್ದಾನ್ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿದ್ದು ತನ್ನ ಪತ್ನಿಗೆ ಜೈಲು ಶಿಕ್ಷೆಯಾಗಿರುವುದನ್ನು ಬಹಿರಂಗಪಡಿಸಿದ್ದಾರೆ.

ನಸ್ರೀನ್‍ರ ವಿರುದ್ಧ ಇರಾನಿನ ಸುರಕ್ಷತೆ ಅಪಾಯಕ್ಕೀಡು ಮಾಡಿದ ಮತ್ತು ಇರಾನ್ ವಿರುದ್ಧ ಬೇಹುಗಾರಿಕೆ ನಡೆಸಿದ ಪ್ರಕರಣಗಳು ದಾಖಲಿಸಲಾಗಿದೆ. ತನ್ನ ವಿರುದ್ಧ ದಾಖಲಾದ ಪ್ರಕರಣವನ್ನು ವಿರೋಧಿಸಿ ಆಗಸ್ಟ್ 23ರಿಂದ ತನ್ನ ಜೈಲು ಕೋಣೆಯಲ್ಲಿಯೇ ನಸ್ರೀನ್ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ನಸ್ರೀನ್‍ 2012ರಲ್ಲಿ ಯುರೋಪಿಯನ್ ಯೂನಿಯನ್‍ನ ಮಾನವಹಕ್ಕು ಪುರಸ್ಕಾರಕ್ಕೆ ಪಾತ್ರರಾಗಿದ್ದರು. ನಸ್ರೀನ್‍ರವರ ಜೈಲು ಶಿಕ್ಷೆಯನ್ನು ರದ್ದು ಪಡಿಸಿ ತಕ್ಷಣ ನಿಶ್ಶರ್ತವಾಗಿ ಬಿಡುಗಡೆಗೊಳಿಸಬೇಕೆಂದು ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾ ಆಮ್ನೆಸ್ಟಿ ಇಂಟರ್‍ನ್ಯಾಶನಲ್‍ನ ನಿದೇರ್ಶಕ ಫಿಲಿಪ್ ಲೂಥರ್ ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here