ಹಿರಿಯ ವಿದ್ಯಾರ್ಥಿಗಳಿಂದ ರ‌್ಯಾಗಿಂಗ್‌; ಮಧುರೈಯಲ್ಲಿ ಇಬ್ಬರು ವಿದ್ಯಾರ್ಥಿಗಳ ಆತ್ಮಹತ್ಯೆ!

0
792

ಮಧುರೈ,ಮಾ.18: ತಮಿಳುನಾಡಿನ ಮಧುರೈಯ ಖಾಸಗಿ ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿಗಳ ರ‌್ಯಾಗಿಂಗ್‌ಗೆ ತುತ್ತಾದ ಇಬ್ಬರು ವಿದ್ಯಾರ್ಥಿಗಳು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಥಮ ವರ್ಷದ ಬಿಎ ಇಕಾನಮಿಕ್ಸ್ ವಿದ್ಯಾರ್ಥಿಗಳಾಗಿದ್ದು ವಿಷ ಸೇವಿಸಿದ ನಂತರ ಇಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಇದರಲ್ಲಿ ಓರ್ವ ವಿದ್ಯಾರ್ಥಿ ನಾಲ್ಕು ದಿವಸ ಮೊದಲು ಮೃತಪಟ್ಟಿದ್ದಾನೆ. ಇನ್ನೋರ್ವ ಶನಿವಾರ ಮೃತಪಟ್ಟಿದ್ದಾನೆಂದು ಪೊಲೀಸರು ತಿಳಿಸಿದ್ದು, ರ‌್ಯಾಗಿಂಗ್‌ ನಡೆಸಿದ ಜೈಶಕ್ತಿ ಎಂಬ ವಿದ್ಯಾರ್ಥಿಯನ್ನು ಪೊಲೀಸರು ಹುಡುಕುತ್ತಿದ್ದಾರೆ. ಈಗಾಗಲೇ ಅವನ ವಿರುದ್ಧ ಲುಕ್ ಔಟ್ ನೋಟಿಸು ಜಾರಿಗೊಳಿಸಲಾಗಿದ್ದು ತನಿಖೆ ನಡೆಯುತ್ತಿದೆ ಎಂದು ಕಾಲೇಜಿನ ಅಧಿಕಾರಿಗಳು ತಿಳಿಸಿದರು.