ಅವರನ್ನು ಕರೆದು ಪೌರತ್ವ ಕೊಡುವ ದೇಶ ಇವರನ್ನು ಓಡಿಸುತ್ತಿದೆ

0
172

ರೋಹಿಂಗ್ಯನ್ ಮುಸ್ಲಿಮರು  ಧಾರ್ಮಿಕ ದ್ವೇಷದ ಕಾರಣದಿಂದ ಶತಮಾನದಲ್ಲಿಯೇ  ಅತಿಹೆಚ್ಚು ದೌರ್ಜನ್ಯಕ್ಕೆ ತುತ್ತಾದ ಜನವಿಭಾಗವಾಗಿದ್ದಾರೆ. ಹೀಗೆಂದುದು ಬಾಂಗ್ಲಾದ ರೋಹಿಂಗ್ಯನ್ ನಿರಾಶ್ರಿತರ ಒಬ್ಬ ಯುವ ನಾಯಕ. ಭಾರತದಿಂದ ರೋಹಿಂಗ್ಯನ್ ನಿರಾಶ್ರಿತರು ದೌರ್ಜನ್ಯ  ಭೀತಿ ಯಿಂದ ಬಾಂಗ್ಲಾಕ್ಕೆ ಪಲಾಯನ ಮಾಡಿದಲ್ಲಿ ಅವರು ಹೇಳುವ ಪ್ರಕಾರ  ಮೂರು ತಿಂಗಳಲ್ಲಿ ಎರಡು ಸಾವಿರ ರೋಹಿಂಗ್ಯನ್ ನಿ ರಾಶ್ರಿತರು ಭಾರತದಿಂದ ಬಾಂಗ್ಲಾಕ್ಕೆ ಹೋಗಿದ್ದಾರೆ. ಭಾರತ  ಕೆಲವು ರೋಹಿಂಗ್ಯನ್ ಮುಸ್ಲಿಮರನ್ನು ಬರ್ಮದ ಗಡಿಯಲ್ಲಿ ಬಿಟ್ಟು ಬಂದು  ಬಳಿಕ ನಡೆದ ವಿಚಾರ ಇದು.

ಹೌದು ರೋಹಿಂಗ್ಯನ್ ಮುಸ್ಲಿಮರು ಅಲ್ಲಿಂದಿ ಲ್ಲಿಗೆ ಚೆಂಡು ಅಟ್ಟಲ್ಪಡುತ್ತಲಿದ್ದಾರೆ. ಚೀನದಲ್ಲಿ ಮುಸ್ಲಿಮರು, ಮುಸ್ಲಿಮರು ಎನ್ನುವ ಕಾರಣಕ್ಕೆ  ಆಡಳಿತಾಧಿಕಾರಿಗಳಾದ ಕಮ್ಯುನಿಸ್ಟರ ದಬ್ಬಾಳಿಕೆಗೆ ತುತ್ತಾಗಿದ್ದರೆ, ಬರ್ಮದಲ್ಲಿ ಮುಸ್ಲಿಮರು ಮುಸ್ಲಿ ಮರು ಎನ್ನುವ ಕಾರಣಕ್ಕೆ ಬೌದ್ಧರು ಮತ್ತು  ಸೇನೆಯ ಕೈಯಲ್ಲಿ ಅಟ್ಟಿಸಲ್ಪಟ್ಟು ಕೊಂದು ಹೂಳಲ್ಪಟ್ಟರು. ರೋಹಿಂಗ್ಯನ್ ಮುಸ್ಲಿಮರ ತೀರದ ದುಃಖ ಕತೆ ಇನ್ನೂ ಕೊನೆಗೊಂಡಿಲ್ಲ. ಸ್ವಂತೂರಿ ನಲ್ಲಿ ನಿಲ್ಲಲಾ ಗದ ಸ್ಥಿತಿ ಅವರನ್ನು ಹೊರದೇಶಕ್ಕೆ ಓಡಿ ಹೋಗುವಂತೆ ಮಾಡಿತು. ಭಾರತ ಬಾಂಗ್ಲಾ ದೇಶದಲ್ಲಾಗಿ ಅವರು ಬಂದು  ಸೇರಿದರು. ಭಾರತದ ನೆರೆ ರಾಷ್ಟ್ರದಲ್ಲಿ ಮುಸ್ಲಿಮರು ಮುಸ್ಲಿಮರಲ್ಲದವರನ್ನು ಹಿಂಸಿಸುತ್ತಿದ್ದಾರೆ ಎಂದು ಹೇಳಿ ಭಾರತ ಅವರಿಗೆ ಪೌರತ್ವ  ಕೊಡುತ್ತಿದೆ ಅಥವಾ ನೆರೆ ರಾಷ್ಟ್ರಗಳ ಮುಸ್ಲಿಮರಲ್ಲದವರಿಗೆ ಪೌರತ್ವ ಕೊಡುವುದಕ್ಕೆ ಕಾನೂನು ಸಂಸತ್ತಿನಲ್ಲಿ ರಚಿಸುತ್ತಿದೆ. ಇದೇ ವೇಳೆ  ದಾರುಣ ದೌರ್ಜನ್ಯ, ಕ್ರೂರ ಹತ್ಯೆ, ನಾಶ-ನಷ್ಟಗಳ ಕಾರಣದಿಂದ ದೇಶಕ್ಕೆ ಬಂದಿರುವ ರೋಹಿಂಗ್ಯನ್ ಮುಸ್ಲಿಮರು ಹೊರದೇಶಕ್ಕೆ ದಬ್ಬಲ್ಪಡುತ್ತಲೇ ಇದ್ದಾರೆ.

ವಿಶ್ವಸಂಸ್ಥೆ ರೋಹಿಂಗ್ಯನ್ ಜನರನ್ನು ಶತ ಮಾನದ ದೊಡ್ಡ ನಿರಾಶ್ರಿತ ದುರಂತ ಅಂತಲೇ ಹೇಳಿದೆ. ಬರ್ಮಕ್ಕೆ ಸತತ ತನ್ನ ಪ್ರತಿನಿಧಿಗಳನ್ನು  ಕಳುಹಿಸಿ ರೋಹಿಂಗ್ಯನ್ನರು ವಾಸವಿರುವ ರಖೇನ್ ರಾಜ್ಯದ ಅರಕಾನ್‍ನ ಪರಿಸ್ಥಿತಿಯಲ್ಲಿ ನಿಗಾ ಇರಿಸುತ್ತಲೂ ಇದೆ. ಮ್ಯಾನ್ಮಾರ್ ನಲ್ಲಿ ಸರಕಾರ ಮತ್ತು ಬುದ್ಧ ಸನ್ಯಾಸಿಗಳ ಬೆಂಬಲದಲ್ಲಿ ನಡೆದ ಸಾಮೂಹಿಕ ಹತ್ಯಾಕಾಂಡದ ನಂತರ ನಿರಾಶ್ರಿತರ ಪ್ರವಾಹವೇ ಇತರ ದೇಶಗಳೆಡೆಗೆ  ಹರಿದು ಜಗತ್ತೇ ನಿಬ್ಬೆರಗಾಯಿತು. ಸುಮಾರು ಏಳು ಲಕ್ಷ ರೋಹಿಂಗ್ಯನ್ ಮುಸ್ಲಿಮರು ಅಂದು ದೇಶ ತೊರೆದರು.

ಅದರಲ್ಲಿ ಹೆಚ್ಚು ಮಂದಿ  ಬಾಂಗ್ಲಾದೇಶ ದಲ್ಲಿ ನಿರಾಶ್ರಿತ ಜೀವನ ನಡೆಸುತ್ತಿದ್ದಾರೆ. ಸುಮಾರು ನಲ್ವತ್ತು ಸಾವಿರ ಮಂದಿ ಭಾರತಕ್ಕೂ ಬಂದಿದ್ದಾರೆ ಎಂದು ಲೆಕ್ಕ.  ಈಗಲೂ ಮ್ಯಾನ್ಮಾರಿನಲ್ಲಿ ಮುಸ್ಲಿಮ್ ದ್ವೇಷ ಕಡಿಮೆಯಾಗಿಲ್ಲ. ಸ್ಥಿತಿಗತಿ ಸಾಮಾನ್ಯವಾಗಿಲ್ಲ. ಇದೇ ವೇಳೆ ಹಿಂದೆ ಹೇಳಿದಂತೆ ಬರ್ಮದಿಂದ  ನೋವು ನಷ್ಟ ಕಷ್ಟ ಸಹಿಸಿ ಬಂದವರನ್ನು ಮತ್ತೆ ಅಲ್ಲಿಗೆ ಕಳಿಸುವ ಯತ್ನ ನಡೆಯುತ್ತಿದೆ. ರೋಹಿಂಗ್ಯನ್ ಜನರು, `ಭಾರತ ಸರಕಾರ ಇದ  ಕ್ಕಿಂತ ತಮ್ಮನ್ನು ಕೊಲ್ಲುವುದುತ್ತಮ’ ಎನ್ನುತ್ತಿದ್ದಾರೆ.

ಹಿಂದೆ ಹೇಳಿದಂತೆ ಭಾರತದಿಂದ ಹೋಗುವವರು ಬಾಂಗ್ಲಾಕ್ಕೆ ಹೋಗುತ್ತಿದ್ದಾರೆ. ಅದು ಅವ ರಿಗೆ ಭಾರತಕ್ಕಿಂತ ಸುರಕ್ಷಿತ ಎಂದು ಅಲ್ಲಿಗೆ  ಇಲ್ಲಿಂದ ಹೋದವರು ಹೀಗೆ ಹೇಳುತ್ತಿದ್ದಾರೆ. ಭಾರತದಲ್ಲಿ ನಮ್ಮನ್ನು ಭಯೋತ್ಪಾದಕರೆನ್ನುವ ದೃಷ್ಟಿಯಲ್ಲಿ ಅಧಿಕಾರಿಗಳು ನೋಡುತ್ತಿದ್ದರು  ಎನ್ನು ತ್ತಾರೆ. ನಮ್ಮ ಶಿಬಿರಗಳಿಗೆ ಆಗಾಗ ಪೊಲೀಸರು ಬರುತ್ತಾ ಹೋಗುತ್ತಾ ಇರುತ್ತಿದ್ದರು. ಭಯದ ವಾತಾವರಣ ಸೃಷ್ಟಿಸುವುದು ಅವರ  ಉದ್ದೇಶ ವಾಗಿದ್ದಿತ್ತು. ಕಾಶ್ಮಿರದಿಂದ ಬಾಂಗ್ಲಾದೇಶಕ್ಕೆ  ಹೋದ ಒಬ್ಬ ಹೇಳಿದ್ದು, ಇಲ್ಲಿಂದ ಹೊರಟು ಹೋಗದಿದ್ದರೆ ಕೊಂದು ಹಾಕುತ್ತೇವೆ  ಎನ್ನುವ ವರೆಗೂ ತಮಗೆ ಫ್ಯಾಶಿಸ್ಟ್‍ರು ಬೆದರಿಕೆಯೊಡ್ಡಿ ದ್ದಾರೆಂದು. ಸತ್ಯವೂ ಆಗಿರಬಹುದು. ಫ್ಯಾಶಿಸ್ಟರು ಎಂದೂ ಪ್ಯಾಶಿಸ್ಟರು ತಾನೆ.

ತಮ್ಮ ಕಾರಣಕ್ಕಲ್ಲದೆ ಒಂದು ಜನವಿಭಾಗ ಊರು ತೊರೆಯುವಂತಾಗಿದೆ. ಆದರೆ ಒಂದು ಜನವಿಭಾಗದ ದಮನವನ್ನು ನೋಡಿ ಸುಮ್ಮನಿರು  ವುದು ಪ್ರಜಾಪ್ರಭುತ್ವದಲ್ಲಿ ವಿರುದ್ಧ ಪ್ರಕ್ರಿಯೆ ಆಗಿ ರುತ್ತದೆ. ಹಿಂದೆಂದೂ ಕೇಳಿಸದಂತಹ ದೌರ್ಜನ್ಯ ವನ್ನು ಅವರು ಅನುಭವಿಸಿದ್ದಾರೆ. ಬ ರ್ಮಾದ ಸರಕಾರದೊಂದಿಗೆ ಮಾತಾಡಿ ಅವರಿಗೆ ಸುರಕ್ಷಿತ ಮತ್ತು ಸೂಕ್ತ ಪರಿಸ್ಥಿತಿ ನಿರ್ಮಾಣವಾಗುವಂತೆ ಮಾಡಬೇಕಾಗಿದ್ದು ವಲಯದ  ದೊಡ್ಡ ಶಕ್ತಿ ಎಂಬ ನೆಲೆಯಲ್ಲಿ ಭಾರ ತದ ಕರ್ತವ್ಯವಾಗಿತ್ತು. ಆದರೆ ಬಲಿಪಶುಗಳನ್ನು ಬೆಂಕಿಗೆಸೆಯುವ ಕಾರ್ಯ ವನ್ನು ಸರಕಾರ  ಮಾಡುತ್ತಿದೆ. ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನದ ಹಿಂದೂ ಅಲ್ಪ ಸಂಖ್ಯಾತರು ದೌರ್ಜನ್ಯಕ್ಕೆ ತುತ್ತಾಗುತ್ತಿದ್ದಾರೆ. ಅದರಿಂದ ಭಾರತ  ಅವರಿಗೆ ನಾರಿಕತ್ವ ನೀಡುತ್ತಿದೆ ಅಥವಾ ಈ ಮಸೂದೆ ಮಂಡಿಸಲು ಕಾರಣ ಅದಾಗಿದೆ. ಆದರೆ ರೋಹಿಂಗ್ಯನ್ ಮುಸ್ಲಿಮರ ಕುರಿತು ಸ್ವಲ್ಪವೂ  ಕನಿಕರ ಇಲ್ಲದಂತೆ ಸರಕಾರ ವರ್ತಿಸುತ್ತಿದೆ.

ರೋಹಿಂಗ್ಯನ್ ಮುಸ್ಲಿಮರಿಗೆ ಸೌಕರ್ಯ ಮಾಡಿಕೊಡಲು ಹಲವರು ಮುಂದೆ ಬಂದಿದ್ದರು. ಹಲವು ಝಕಾತ್ ಕಮಿಟಿಗಳು ಮುಂದೆ ಬಂದರೂ ಅಧಿಕಾರಿಗಳ ಕಡೆಯಿಂದ ವಿರೋಧ ಇದ್ದುದರಿಂದ ಏನೂ ಮಾಡಲಾಗಿಲ್ಲ. ವರ್ಷ ಗಳಿಂದ ನಿರಾಶ್ರಿತ ಶಿಬಿರಗಳಲ್ಲಿರುವ ಮಕ್ಕಳಿಗೆ  ಆಧಾರ್ ಕಾರ್ಡಿಲ್ಲ ಎಂಬ ಕಾರಣದಿಂದ ಶಾಲೆಗೆ ಹೋಗಲು ಆಗಿಲ್ಲ. ಶಿಬಿರದಿಂದ ಹೊರಗೆ ಹೋಗಲು ಆಗುವುದಿಲ್ಲ. ಕೆಲಸ ಮಾಡಿ  ಗೌರವ ದಿಂದ ಜೀವಿಸಲು ಸಾಧ್ಯವಾಗಿಲ್ಲ. ಇದೇ ವೇಳೆ ಯಾವ ಸಮಯದಲ್ಲಿಯೂ ಹೊರದಬ್ಬಲ್ಪಡುವ ಸಾಧ್ಯತೆ ಮತ್ತು ಭಯ ಅವರನ್ನು  ಕಾಡುತ್ತಿದೆ.

ಬಾಂಗ್ಲಾದೇಶ-ಬರ್ಮ ಗಡಿಯಲ್ಲಿ ಈಗಲೂ ಲಕ್ಷಾಂತರ ನಿರಾಶ್ರಿತರು ಅತಂತ್ರ ರೀತಿಯಲ್ಲಿ ಜೀವಿಸುತ್ತಿದ್ದಾರೆ. ವಿಶ್ವಸಂಸ್ಥೆ ಅಲ್ಲಿ ಅವರ ಮೇಲ್ನೋಟ ವಹಿಸುತ್ತಿದೆ. ಭಾರತ ದಿಂದಲೂ ಹಲವು ರೀತಿಯ ಬೆದರಿಕೆಯಿಂದ ಹೊರಟು ಹೋದ ನಿರಾಶ್ರಿತರು ಬಾಂಗ್ಲಾದೇಶದಲ್ಲಿ ಇದ್ದಾರೆ.  ಆಧುನಿಕ ಕಾಲದಲ್ಲಿ ಜನರು ಪಲಾಯನ ಮಾಡುತ್ತಿದ್ದಾರೆ ಎಂಬುದೊಂದು ದುರಂತವಲ್ಲವೇ? ಹುಟ್ಟಿದ, ಬೆಳೆದ ಊರಿನಲ್ಲಿ ಜೀವಿಸಲಾಗದ  ಪರಿಸ್ಥಿತಿ ಇತರರ ಕರುಣೆಯಲ್ಲಿ ಜೀವಿಸಬೇಕಾದ ಅವಸ್ಥೆ ಇನ್ನೂ ದೊಡ್ಡ ದುರಂತವಾಗಿದೆ. ವಿಭಜನೆಯ ಕಾಲದಲ್ಲಿ ನಿರಾಶ್ರಿತರ ಇತಿಹಾಸ  ನೇರವಾಗಿ ಅರಿತ ನಾವು ಅದರ ಕಷ್ಟ ಕಾರ್ಪಣ್ಯ ಗಳನ್ನು ತಿಳಿದವರು. ನಿರಾಶ್ರಿತರು ದೌರ್ಜನಕ್ಕೆ ತುತ್ತಾಗುವ ಮನುಷ್ಯರು. ಹೀಗಿದ್ದೂ ಅವರ  ಅಳು ನಮ್ಮ ಕಿವಿಗೆ ಮುಟ್ಟದಾಯಿತೆ?

LEAVE A REPLY

Please enter your comment!
Please enter your name here