ಇರಾನನ್ನು ಎದುರಿಸುವುದಕ್ಕಾಗಿ ಅರಬ್ ರಾಷ್ಟ್ರಗಳೊಂದಿಗೆ ಸಂಬಂಧ ಬೆಳೆಸುವ ತಂತ್ರದೊಂದಿಗೆ ಇಸ್ರೇಲ್ ಅಖಾಡಕ್ಕೆ

0
499

ಚಾಡ್ ಗಣರಾಜ್ಯದ ಅಧ್ಯಕ್ಷ ಅಧ್ಯಕ್ಷ ಇದ್ರಿಸ್ ರವರು   ಜೆರುಸಲೇಮ್ ಗೆ ಅಘೋಷಿತ  ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿ ಬೆಂಜಮಿನ್ ನೇತನ್ಯಾಹು ಬಹರೇನ್ ನೊಂದಿಗೆ  ರಾಜತಾಂತ್ರಿಕ ಸಂಬಂಧಗಳನ್ನು ಬೆಸೆಯುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಇಸ್ರೇಲಿ ಚಾನಲ್ 2 ಹೇಳಿದೆ.

ಇಸ್ರೇಲ್ ಬಗ್ಗೆ  ಕೆಲವು ಅರಬ್ ದೇಶಗಳ  ಬದಲಾಗುತ್ತಿರುವ ವರ್ತನೆಗಳನ್ನು ಪತ್ರಿಕಾಗೋಷ್ಠಿಯಲ್ಲಿ ನೆತನ್ಯಾಹು ಚರ್ಚಿಸಿದ್ದಾರೆ ಎಂದು ವರದಿ ಹೇಳಿದೆ.

”ನನ್ನ ಓಮನ್ ಪ್ರವಾಸದ ವೇಳೆ ಇದು ಸ್ಪಷ್ಟವಾಗಿದೆ ” ಎಂದು  ಸುಲ್ತಾನ್ ಸಯಿದ್ ಖಬೂಸ್ ರನ್ನು ಭೇಟಿಯಾದ ಅನುಭವದ ಆಧಾರದಲ್ಲಿ ಇದ್ರಿಸ್ ಅವರು ಪತ್ರಿಕಾಗೋಷ್ಠಿಯಲ್ಲಿ  ಹೇಳಿರುವರೆಂದು ವರದಿ ತಿಳಿಸಿದೆ. .

ಶೀಘ್ರದಲ್ಲೇ ಅರಬ್ ದೇಶಗಳಿಗೆ ಇಂತಹ ಭೇಟಿಗಳು ನಡೆಯಲಿದೆ” ಎಂದು ಇಸ್ರೇಲಿ ಪ್ರಧಾನ ಮಂತ್ರಿ ತಿಳಿಸಿದ್ದಾರೆ.

ಈ ತಿಂಗಳ ಆರಂಭದಲ್ಲಿ ಒಮಾನ್ ನಲ್ಲಿ  ನಡೆದ ಅಂತಾರಾಷ್ಟ್ರೀಯ ಸಾರಿಗೆ ಸಮ್ಮೇಳನದಲ್ಲಿ ಇಸ್ರೇಲ್ ಸಾರಿಗೆ ಮತ್ತು ಗುಪ್ತಚರ ಮಂತ್ರಿ ಯಿಸ್ರೇಲ್ ಕಾಟ್ಜ್ ಹಾಜರಿದ್ದರು.  ಅವರು ಗಲ್ಫ್ ರಾಷ್ಟ್ರಗಳನ್ನು ಇಸ್ರೇಲ್ ಮೂಲಕ ಮೆಡಿಟರೇನಿಯನ್ ಗೆ  ಸಂಪರ್ಕಿಸುವ ರೈಲ್ವೆ ಯೋಜನೆಯನ್ನು ಪ್ರಸ್ತಾಪಿಸಿದ್ದಾರೆ.

“ಬಹ್ರೇನ್ ರಾಷ್ಟ್ರವು  ನೆತನ್ಯಾಹುರವರ  ಮುಂದಿನ ತಾಣವಾಗಿದೆ, ಇಸ್ರೇಲ್ ಗೆ  ಅರಬ್ ಪ್ರಪಂಚವು ಬೃಹತ್ತಾಗಿ ಕಾಣುತ್ತಿದೆ, ವೈವಿಧ್ಯಮಯ ಮತ್ತು  ಮಾನವ ಸಾಮರ್ಥ್ಯ ಮತ್ತು ವೈಜ್ಞಾನಿಕ ಮತ್ತು ಶೈಕ್ಷಣಿಕ ಮಟ್ಟದಲ್ಲಿ ಅದರೊಂದಿಗೆ ಉತ್ತಮ ಸಂಬಂಧಗಳನ್ನು ಸ್ಥಾಪಿಸಲು ಬಯಸಿದೆ” ಎಂದು ಅವರು ಹೇಳಿದರು.

ಈ ನಡುವೆ ,  ಮುಂದಿನ ಏಪ್ರಿಲ್ ನಲ್ಲಿ ನಡೆಯುವ ವಿಶ್ವ ಬ್ಯಾಂಕ್ ಆಯೋಜಿಸಿರುವ   ಆರ್ಥಿಕ ಸಮ್ಮೇಳನಕ್ಕೆ ಬಹ್ರೇನ್ ಇಸ್ರೇಲ್ ನ  ಅರ್ಥ ಸಚಿವ  ಎಲಿ ಕೋಹೆನ್ ಅವರನ್ನು ಬಹ್ರೇನ್ ಆಮಂತ್ರಿಸಿದೆ.

ಸಧ್ಯ ಅರಬ್ ರಾಷ್ಟ್ರಗಳ ಪೈಕಿ ಈಜಿಪ್ಟ್ ಮತ್ತು ಜೋರ್ಡಾನ್ ಜೊತೆ ಮಾತ್ರ  ಇಸ್ರೇಲ್ ರಾಜತಾಂತ್ರಿಕ ಸಂಬಂಧವನ್ನು ಹೊಂದಿದೆ – ಆದರೆ ನೇತನ್ಯಾಹು ಅವರು ಗಲ್ಫ್ ರಾಜ್ಯಗಳೊಂದಿಗೆ ಸುಧಾರಿತ ಸಂಬಂಧಗಳ ಸುಳಿವು ನೀಡಿದ್ದಾರೆ, ಇದನ್ನು ಅವರ  ದೇಶವು ಇರಾನನ್ನು   ಎದುರಿಸುವ  ನೈಸರ್ಗಿಕ ಮೈತ್ರಿಕೂಟವಾಗಿ   ಪರಿಗಣಿಸುತ್ತದೆ ಎಂದು ಹೇಳಲಾಗುತ್ತಿದೆ.