ಬಿಜೆಪಿ 2047ರವರೆಗೆ ದೇಶವನ್ನು ಆಳಲಿದೆ- ರಾಮ್ ಮಾಧವ್

0
501

ಹೊಸದಿಲ್ಲಿ,ಜೂ.8: ದೇಶಕ್ಕೆ ಸ್ವಾತಂತ್ರ್ಯ ಲಭಿಸಿ ನೂರು ವರ್ಷವಾಗುವವರೆಗೆ ಕೇಂದ್ರದಲ್ಲಿ ಬಿಜೆಪಿ ಸರಕಾರ ಇರಲಿದೆ. ಕಾಂಗ್ರೆಸ್‍ನ ದಾಖಲೆಯನ್ನು ಮುರಿಯಲಿದೆ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಹೇಳಿದರು. ಕಾಂಗ್ರೆಸ್ ಅತಿಹೆಚ್ಚು ಕಾಲ ನಿರಂತರ ಆಳ್ವಿಕೆ ನಡೆಸಿದೆ. ಮೋದಿ ಆ ದಾಖಲೆಯನ್ನು ಮುರಿಯಲಿದ್ದಾರೆ. ಅಗರ್ತಲದಲ್ಲಿ ನಡೆದ ಕೃತಜ್ಞಾ ಸೂಚಕ ರ್ಯಾಲಿಯಲ್ಲಿ ಅವರು ಮಾತಾಡುತ್ತಿದ್ದರು.

ಬಿಜೆಪಿ ಸರಕಾರಕ್ಕೆ ದೇಶದ 75ನೆ ಸ್ವಾತಂತ್ರ್ಯಾಚರಣೆ ನಡೆಸುವ ಅವಕಾಶ ಲಭಿಸಿತು. ದೇಶದ 100ನೇ ಸ್ವಾತಂತ್ರ್ಯ ಕಾರ್ಯಕ್ರವನ್ನು ಬಿಜೆಪಿ ಸರಕಾರವೇ ಆಚರಿಸಲಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಮತದಲ್ಲಿ ಆರು ಕೋಟಿಯಷ್ಟು ಹೆಚ್ಚಳವಾಗಿದೆ. 2014 ಮೇ 17ಕೋಟಿ ಮತಗಳು ಬಿಜೆಪಿಗೆ ಸಿಕ್ಕಿತ್ತು. ಆದರೆ 17ನೇ ಲೋಕಸಭಾ ಚುನಾವಣೆಯಲ್ಲಿ 23 ಕೋಟಿ ಮತಗಳು ಸಿಕ್ಕಿವೆ ಎಂದು ರಾಮ್ ಮಾಧವ್ ಹೇಳಿದರು.

ರಾಷ್ಟ್ರೀಯತೆ ಬಿಜೆಪಿಯ ಡಿಎನ್‍ಎ ಆಗಿದೆ. ಸೇನಾ ಸಾಧನೆಗಳನ್ನು ಬಿಜೆಪಿ ಚುನಾವಣಾ ಗೆಲುವಿಗೆ ಉಪಯೋಗಿಸುವುದಿಲ್ಲ ಎಂದು ಅವರು ಹೇಳಿದರು. ಕಳೆದ ಐದು ವರ್ಷದಲ್ಲಿ ಭ್ರಷ್ಟಾಚಾರ ಮುಕ್ತ ಅಭಿವೃದ್ಧಿ- ಆರ್ಥಿಕ ಸ್ಥಿರತೆಯ ದೇಶವಾಗಿ ಭಾರತವನ್ನು ಕಟ್ಟಲು ಬಿಜೆಪಿ ಸರಕಾರಕ್ಕೆ ಸಾಧ್ಯವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.