ಅತ್ಯಾಚಾರ ಪ್ರಕರಣ ಕೃತಕ ಸೃಷ್ಟಿ: ಇಮಾಮ್ ನಿಂದ ನಿರೀಕ್ಷಣಾ ಜಾಮೀನಿಗೆ ಅರ್ಜಿ

0
273

ಕೊಚ್ಚಿ: ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣದಲ್ಲಿ ತೊಳಿಕ್ಕೋಡ್ ಮಹಲ್ಲಾದ ಮಾಜಿ ಇಮಾಮ್ ಶಫೀಕ್ ಅಲ್ ಖಾಸ್ಮಿ ಹೈಕೋರ್ಟಿನಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ತನ್ನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗಿದೆ. ದೂರು ನೀಡಿದ ಮಸೀದಿ ಅಧ್ಯಕ್ಷರು ಸಿಪಿಎಂ ಕಾರ್ಯರ್ತರು. ಎಸ್‍ಡಿಪಿಐ ವೇದಿಕೆಯಲ್ಲಿ ಭಾಷಣ ಮಾಡಿದ್ದಕ್ಕೆ ಸಿಪಿಎಂಗೆ ದ್ವೇಷವಿದೆ.

ಸಿಪಿಎಂ ರಾಜಕೀಯ ದ್ವೇಷವನ್ನು ತೀರಿಸಲು ಈ ನಾಟಕ ರಚಿಸಿದೆ ಎಂದು ಜಾಮೀನು ಅರ್ಜಿಯಲ್ಲಿ ಇಮಾಂ ಹೇಳಿದ್ದಾರೆ. ಇದೇ ವೇಳೇ ಶಫೀಕ್ ಅಲ್ ಖಾಸ್ಮಿ ಅತ್ಯಾಚಾರ ಮಾಡಿದ್ದಾರೆನ್ನಲಾದ ಬಾಲಕಿ ಚೈಲ್ಡ್‌ಲೈನ್‍ಗೂ ಪೊಲೀಸರಿಗೂ ಹೇಳಿಕೆ ನೀಡಿದ್ದಾರೆ. ತಾಯಿಗೆ ಹೆದರಿ ತಾನು ವಿವರವನ್ನು ಹೊರಗೆ ಹೇಳಿರಲಿಲ್ಲ ಎಂದು ಬಾಲಕಿಯ ಹೇಳಿಕೆಯಲ್ಲಿದೆ.

ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಗುರಿಪಡಿಸಲಾಗಿದೆ. ಆರು ಮಂದಿ ಉದ್ಯೋಗಖಾತರಿ ಯೋಜನೆಯ ಕಾರ್ಮಿಕರು ಖಾಸ್ಮಿ ವಿರುದ್ಧ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಕಾಡಿನೊಳಗಿನ ಫೋಟೊಗಳನ್ನು ಕೂಡ ಪೊಲೀಸರಿಗೆ ನೀಡಿದ್ದಾರೆ.

ಪೊಕ್ಸೊ ಪ್ರಕರಣದ ದಾಖಲಾದ ಕೂಡಲೇ ಅಡಗಿ ಕೂತಿರುವ ಖಾಸ್ಮಿ ವಿರುದ್ಧ ಪೊಲೀಸರು ಲುಕ್‍ಔಟ್ ನೋಟಿಸು ಜಾರಿಗೊಳಿಸಲಿದ್ದು ಖಾಸ್ಮಿಯ ನಿರೀಕ್ಷಣ ಜಾಮೀನಿನಲ್ಲಿ ತೀರ್ಪು ಬರುವವರೆಗೆ ಕಾಯಬೇಕಾಗಿಲ್ಲ ಎಂದು ಪೊಲೀಸರು ನಿರ್ಧರಿಸಿದ್ದಾರೆ. ಖಾಸ್ಮಿಯ ಊರಾದ ಈರಾಟ್ಟುಪೇಟೆ ಮತ್ತು ಗೆಳೆಯರ ಮನೆಯಲ್ಲಿ ತಿರುವನಂತಪುರಂ ವಿದುರ ಪೊಲೀಸರು ದಾಳಿ ಮಾಡಿ ತನಿಖೆ ಮಾಡಿದರೂ ಆರೋಪಿಯನ್ನು ಬಂಧಿಸಲು ಸಾಧ್ಯವಾಗಿಲ್ಲ.