ಪಶ್ಚಿಮ ದಂಡೆ: ಇಸ್ರೇಲಿ ವಸಾಹತು ಕಾರ್ಖಾನೆಯ ಒಳಗೆ ಸೌದಿ ಉತ್ಪನ್ನಗಳು

0
185

ಪಶ್ಚಿಮ ದಂಡೆಯಲ್ಲಿರುವ ಇಸ್ರೇಲಿ ಆಕ್ರಮಿತ ಬರ್ಕನ್ ವಸತಿ ಪ್ರದೇಶದಲ್ಲಿರುವ ಕಾರ್ಖಾನೆಯೊಳಗೆ ಸೌದಿ ಉತ್ಪನ್ನಗಳಿರುವುದನ್ನು ತೋರಿಸುತ್ತ ಫೆಲೆಸ್ತೀನ್ ಯುವಕನೋರ್ವ ಮಾಡಿದ ವೀಡಿಯೊವನ್ನು ಚಳುವಳಿಗಾರರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿದ್ದಾರೆ.

ಈ ವೀಡಿಯೊವು ಸೌದಿ ಅರೇಬಿಯಾದ ಪ್ರಮುಖ ರಾಸಾಯನಿಕ ಕಂಪನಿಗಳಲ್ಲಿ ಒಂದಾದ ಸಬಿಕ್ (ಎಸ್ ಎ ಬಿ ಐ ಕ್ ) ಉತ್ಪನ್ನಗಳನ್ನು ಒಳಗೊಂಡಿದೆ.

ಸಬಿಕ್ ರಾಸಾಯನಿಕ ಉತ್ಪನ್ನಗಳನ್ನು ತಯಾರಿಸುತ್ತದೆ ಮತ್ತು ಪ್ಲಾಸ್ಟಿಕ್ ಗಳು, ರಸಗೊಬ್ಬರಗಳು, ಪಾಲಿಮರ್ ಗಳು ಮತ್ತು ಲೋಹಗಳ ಉತ್ಪಾದನೆಯಲ್ಲಿ ಪರಿಣತಿ ಪಡೆದಿದೆ ಮತ್ತು ಪ್ರಪಂಚದಾದ್ಯಂತ ಅನೇಕ ದೇಶಗಳಿಗೆ ಸರಕುಗಳನ್ನು ರಫ್ತು ಮಾಡುತ್ತದೆ.

ಇಸ್ರೇಲ್ ಭದ್ರತೆಯಲ್ಲಿ ಸೌದಿಯ ಭಾಗೀಧಾರಿಕೆಯ ಮಹತ್ವದ ಕುರಿತು ಅಮೆಕದ ಅಧ್ಯಕ್ಷ ಟ್ರಂಪ್ ಮಾತನಾಡಿದ ನಂತರ ಇವೆರಡೂ ರಾಷ್ಟ್ರಗಳ ನಡುವಿನ ಸಂಬಂಧ ಸುಧಾರಿಸುತ್ತಿದೆ ಎಂದು ವರದಿಯಿದೆ.

ಇಸ್ರೇಲ್ ನಿಂದ 2015 ರಲ್ಲಿ ಬೇಹುಗಾರಿಕೆ ತಂತ್ರಾಂಶವನ್ನು ಖರೀದಿಸಲು ಸೌದಿ ಪ್ರಯತ್ನಿಸಿದ ಬಗ್ಗೆ ಮತ್ತು ಈ ಬಗ್ಗೆ ಇಸ್ರೇಲಿ ನಿರಾಕರಿಸಿದ್ದು, ಸೌದಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಮತ್ತು ಮಾಜಿ ಇಸ್ರೇಲಿ ಪ್ರಧಾನಿ ಎಹುದ್ ಬರಾಕ್ ನಡುವಿನ ವ್ಯಾವಹಾರಿಕ ಒಪ್ಪಂದದ.ಕುರಿತು ಇಸ್ರೇಲಿ ಪತ್ರಿಕೆ ಹಾರಿಟ್ಜ್ ಈ ಹಿಂದೆ ವರದಿ ಮಾಡಿತ್ತು.