ದೇಶದಲ್ಲಿ ಕೊರೋನಕ್ಕೆ 382 ವೈದ್ಯರು ಬಲಿಯಾಗಿದ್ದಾರೆ ಎಂದ ಐಎಂಎ: ನಮ್ಮಲ್ಲಿ ಲೆಕ್ಕವಿಲ್ಲ ಎಂದ ಕೇಂದ್ರ ಸರಕಾರ

0
83

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಸೆ.17: ದೇಶದಲ್ಲಿ ಕೊರೋನ ಪೀಡಿತರಾಗಿ 382 ವೈದ್ಯರು ಮೃತಪಟ್ಟಿದ್ದಾರೆ ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ತಿಳಿಸಿದೆ. ಇವರಲ್ಲಿ 27 ವರ್ಷ ವಯಸ್ಸಿನಿಂದ ಹಿಡಿದು 85 ವರ್ಷ ವಯಸ್ಸಿನವರೆಗಿನ ವೈದ್ಯರೂ ಸೇರಿದ್ದಾರೆ. ಆದರೂ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಭಾಷಣದ ವೇಳೆ ಕೊರೋನಕ್ಕೆ ಬಲಿಯಾದ ವೈದ್ಯರ ಕುರಿತು ಪ್ರಸ್ತಾಪಿಸದಿರುವುದು ವಿವಾದಕ್ಕೆಡೆಯಾಗಿದೆ.

ಕೇಂದ್ರ ಸರಕಾರದ ಬಳಿ ಕೊರೋನದಿಂದ ಎಷ್ಟು ವೈದ್ಯರು ಮೃತಪಟ್ಟಿದ್ದಾರೆ ಎನ್ನುವ ಸರಿಯಾದ ಲೆಕ್ಕ ಇಲ್ಲ ಎಂದು ಸಹಸಚಿವರುಗಳು ತಿಳಿಸಿದ್ದರು.

ಕೇಂದ್ರ ಸರಕಾರದ ನಿರ್ಲಕ್ಷ್ಯ ಧೋರಣೆ, ಉದಾಸಿನವನ್ನು ವಿರೋಧಿಸಿ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ರಂಗಪ್ರವೇಶಿಸಿದ್ದು, ಸರಕಾರದ ಬೇಜವಾಬ್ದಾರಿತನವು ಅಂಟುರೋಗ ಕಾನೂನು 1897, ವಿಪತ್ತು ನಿರ್ವಹಣೆ ಕಾನೂನುಗಳ ನೈತಿಕತೆಯನ್ನು ನಷ್ಟಗೊಳಿಸಲಾಗಿದೆ ಎಂದು ಮೆಡಿಕಲ್ ಅಸೋಸಿಯೇಶನ್ ಅಪಾದಿಸಿದೆ.

ಆರೋಗ್ಯ ಕಾರ್ಯಕರ್ತರ ಸೇವೆಗಳನ್ನು ಕೇಂದ್ರ ಸಚಿವರು ಹೇಳುವಾಗ ಪ್ರಾಣ ಕಳಕೊಂಡ ಆರೋಗ್ಯ ಕಾರ್ಯಕರ್ತರ ಕುರಿತು ಪ್ರಸ್ತಾವಿಸಿಲ್ಲ. ಆದರೆ ಆ ವಿವರವು ದೇಶಕ್ಕೆ ತಿಳಿಸುವುದು ಬೇಡ ಎಂದು ಸರಕಾರ ನಿರ್ಧರಿಸಿದ್ದು ಅಪಾಯಕಾರಿ. ಭಾರತದಂತೆ ಬೇರೆ ಯಾವ ದೇಶದಲ್ಲಿಯೂ ಇಷ್ಟು ಹೆಚ್ಚು ಆರೋಗ್ಯ ಕಾರ್ಯಕರ್ತರು ಪ್ರಾಣ ಕಳಕೊಂಡಿಲ್ಲ ಎಂದು ಎಂದು ಮೆಡಿಕಲ್ ಅಸೋಸಿಯೇಶನ್ ಹೇಳಿಕೆಯಲ್ಲಿ ತಿಳಿಸಿದೆ.ಆಸ್ಪತ್ರೆಗಳು ಸಾರ್ವಜನಿಕ ಆರೋಗ್ಯ ರಾಜ್ಯ ಸರಕಾರದ ಅಧೀನದಲ್ಲಿ ಬರುವುದರಿಂದ ಕೇಂದ್ರಕ್ಕೆ ವಿವರ ಲಭ್ಯವಿಲ್ಲ ಎಂದು ಕೇಂದ್ರ ಸಚಿವ ಅಶ್ವಿನಿ ಕುಮಾರ್ ಚೌಬೆ ಹೇಳಿದ್ದಾರೆ ಎಂದು ಮೆಡಿಕಲ್ ಅಸೋಸಿಯೇಶನ್ ಹೇಳಿದೆ.

ಎರಡು ದಿವಸಗಳೊಳಗೆ ಎರಡನೇ ಸಲ ನಿರ್ಣಾಯಕ ಮಾಹಿತಿ ತಮ್ಮ ಬಳಿ ಇಲ್ಲ ಎಂದು ಸರಕಾರ ಹೇಳಿರುವುದು. ಸರಕಾರದ ವರ್ತನೆಗೆ ದೇಶಾದ್ಯಂತ ಪ್ರತಿಭಟನೆ ವ್ಯಕ್ತವಾಗಿವೆ. ಲಾಕ್‍ಡೌನ್ ಕಾಲದಲ್ಲಿ ಮೃತಪಟ್ಟಿದ್ದ ವಲಸೆ ಕಾರ್ಮಿಕರ ಕುರಿತು ಸರಕಾರ ತನ್ನಲ್ಲಿ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದುದರ ವಿರುದ್ಧ ಜನರೆಡೆಯಲ್ಲಿ ಆಕ್ರೋಶ ಕೇಳಿ ಬಂದಿತ್ತು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.

LEAVE A REPLY

Please enter your comment!
Please enter your name here