‘ಅಲ್‍ ಅಕ್ಸಾ ಟಿವಿ’ ಭಯೋತ್ಪಾದಕ ಸಂಘಟನೆಗೆ ಸೇರಿದ್ದೆಂದು ಘೋಷಿಸಿದ ನೆತನ್ಯಾಹು

0
1266

ಟೆಲ್‌ಅವೀವ್: ಇಸ್ರೇಲಿನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಪೆಲಸ್ತೀನಿನ ಅಲ್ ಅಕ್ಸಾ ಟಿವಿಯನ್ನು ಭಯೋತ್ಪಾದನಾ ಸಂಘಟನೆಗೆ ಸೇರಿದ್ದೆಂಬ ಆದೇಶಕ್ಕೆ ಸಹಿ ಹಾಕಿದ್ದಾರೆ. ಪೆಲಸ್ತೀನಿನ ಹಮಾಸ್‍ ಸಹಿತ ಭಯೋತ್ಪಾದಕ ಸಂಘಟನೆಗಳ ಟಿವಿಯ ಹಿಂದೆ ಕಾರ್ಯಾಚರಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಇಸ್ರೇಲಿನ ಆಂತರಿಕ ಸುರಕ್ಷಾ ಸಂಸ್ಥೆ ಶಿನ್‍ಬಿಟ್ ಮತ್ತು ರಕ್ಷಣಾ ಸಚಿವಾಲಯದ ಕೌಂಟರ್ ಟೆರರ್ ಫೈನಾನ್ಸಿಂಗ್ ರಾಷ್ಟ್ರೀಯ ಬ್ಯೂರೊ ಶಿಫಾರಸ್ಸಿನ ನಂತರ ಇಸ್ರೇಲ್ ಪ್ರಧಾನಿ ಅಲ್ ಅಕ್ಸಾ ಟಿವಿಯನ್ನು ಭಯೋತ್ಪಾದಕ ಸಂಘಟನೆ ಎಂದು ಘೋಸಿಸಿದ್ದಾರೆ. ಅವರೆಡೂ ಅಲ್ ಅಕ್ಸಾ ಟಿವಿಯನ್ನು ಹಮಾಸ್ ಉಪಯೋಗಿಸುತ್ತಿದೆ ಎಂದು ವರದಿ ನೀಡಿತ್ತು.

ಚ್ಯಾನೆಲ್‍ನ್ನು ಪ್ರಸಾರ ಮಾಡುವವವರು ಪವಿತ್ರ ಕುರ್‍ಆನ್‍ನ ವಚನಗಳನ್ನು ಉದ್ಧರಿಸುತ್ತಿದಾರೆ. ಜೊತೆಗೆ ಸನ್ನೆ ಭಾಷೆಯಲ್ಲಿ ಆಕ್ರಮಿತ ವೆಸ್ಟ್ ಬ್ಯಾಂಕ್ ಮತ್ತು ಜೆರುಸಲೇಮಿನಲ್ಲಿ ಹಮಾಸ್ ಕಾರ್ಯಕರ್ತರನ್ನು ನೇಮಕಗೊಳಿಸಲು ಸೂಚನೆ ನೀಡುತ್ತಿದ್ದಾರೆ ಎಂದು ಶಿನ್‍ಬೆಟ್ ಆರೋಪಿಸಿದೆ. ಇಸ್ರೇಲಿನ ಯುದ್ಧ ವಿಮಾನಗಳು 2000 ಇಸವಿಯಲ್ಲಿ ಅಲ್ ಅಕ್ಸಾ ಟಿವಿ ಕಚೇರಿಗೆ ಬಾಂಬು ಸುರಿಮಳೆಗೈದು ಧ್ವಂಸ ಮಾಡಿತ್ತು. ಕೆಲವು ವರ್ಷಗಳ ನಂತರ ಅಲ್ ಅಕ್ಸಾ ಟಿವಿ ಪುನರಾರಂಭಗೊಂಡಿತ್ತು. ಆದರೆ ಪೆಲಸ್ತೀನ್ ಪ್ರಾಧಿಕಾರ ಅದರ ಮೇಲೆ ನಿಷೇಧ ವಿಧಿಸಿತ್ತು.

2018 ನವೆಂಬರ್‍ನಲ್ಲಿ ಇಸ್ರೇಲಿ ನಾಗರಿಕರ ವಿರುದ್ಧ ಅಪಪ್ರಚಾರ ನಡೆಸುತ್ತಿದೆ ಎಂದು ಆರೋಪಿ ಇಸ್ರೇಲಿ ಯುದ್ಧ ವಿಮಾನಗಳು ಅದರ ಮುಖ್ಯ ಕಚೇರಿಗೆ ಪುನಃ ಬಾಂಬು ದಾಳಿ ಮಾಡಿತು. ನೆತನ್ಯಾಹು ಘೋಷಣೆಯನ್ನು ಅಲ್ ಅಕ್ಸಾ ಟಿವಿ ಚ್ಯಾನೆಲ್ ಖಂಡಿಸಿದ್ದು ಮಾಧ್ಯಮ ಸಂಸ್ಥೆಗೆ ದಾಳಿ ಮಾಡಲು ಮತ್ತು ಸೌಹಾರ್ದ ಧ್ವನಿಯನ್ನು ದಮನಿಸಲು ನೆತನ್ಯಾಹು ಫ್ರೋತ್ಸಾಹಿಸುತ್ತಿದ್ದಾರೆ ಎಂದು ಆರೋಪಿಸಿದೆ.

2010ರಲ್ಲಿ ಅಲ್‍ಅಕ್ಸಾ ಟಿವಿಯನ್ನು ಅಮೆರಿಕ ಕಪ್ಪುಪಟ್ಟಿಗೆ ಸೇರಿಸಿದೆ. ನೆತನ್ಯಾಹುರ ಘೋಷಣೆಯನ್ನು ಪೆಲಸ್ತೀನಿನ ಮಾಧ್ಯಮ ಸಂಘಟನೆಗಳು ಕೂಡ ಖಂಡಿಸಿವೆ. ಅಲ್ ಅಕ್ಸಾದಲ್ಲಿ ಫೆಲೆಸ್ತೀನಿಯರ ವಿರುದ್ಧ ನಡೆಸುತ್ತಿದ್ದ ಇಸ್ರೇಲಿನ ದಾಂಧಲೆಯನ್ನು ಅಲ್ ಅಕ್ಸಾ ವರದಿ ಮಾಡುತ್ತಿತ್ತು. ಇದು ಜಗತ್ತಿನ ಮುಂದೆ ವರದಿಯಾಗುವುದನ್ನು ಬಯಸುತ್ತಿಲ್ಲ ಎಂದು ಪತ್ರಕರ್ತರ ಸಂಘ ಹೇಳಿದೆ. ಇಸ್ರೇಲ್ ಅಲ್ ಅಕ್ಸಾ ಟಿವಿಯನ್ನು ಭಯೋತ್ಪಾದಕ ಸಂಘಟನೆಯೆಂದು ಘೋಷಿಸಿ ಅದರ ಕತ್ತು ಹಿಚುಕಲು ನೋಡುತ್ತಿದೆ. ಆದರೆ. ಅಲ್ ಅಕ್ಸಾ ಇಸ್ರೇಲಿನ ಕ್ರೂರ ಹಿಂಸೆ ದಮನಕ್ಕೊಳಗಾದ ಫೆಲಸ್ತೀನಿಯರ ಧ್ವನಿಯಾಗಿದೆ ಎಂದು ಪತ್ರಕರ್ತರ ಸಂಘ ಹೇಳಿದೆ.