ಪ್ರೊ. ನಜ್ಮಾ ಅಕ್ತರ್ ಜಾಮಿಯ ಮಿಲ್ಲಿಯ ವಿಶ್ವವಿದ್ಯಾನಿಲಯದ ಪ್ರಥಮ ಮಹಿಳಾ ವೈಸ್‍ಚಾನ್ಸಲರ್‌!

0
1183

ಹೊಸದಿಲ್ಲಿ,ಎ.12: ಇಲ್ಲಿನ ಜಾಮಿಯ ಮಿಲ್ಲಿಯ ಇಸ್ಲಾಮಿಯ ವಿಶ್ವವಿದ್ಯಾನಿಲಯಕ್ಕೆ ಪ್ರಥಮ ಉಪಕುಲಪತಿಯಾಗಿ ಪ್ರೊ. ನಜ್ಮಾ ಅಕ್ತರ್ ನೇಮಕವಾಗಿದ್ದಾರೆ. ದಿಲ್ಲಿಯ ವಿಶ್ವವಿದ್ಯಾನಿಲಯಗಳಲ್ಲಿ ಪ್ರಥಮ ಬಾರಿ ಮಹಿಳಾ ಉಪಕುಲಪತಿ ನೇಮಕವಾಗಿದೆ. ಜಾಮಿಯದ ಹದಿನಾರನೆಯ ಉಪಕುಲಪತಿಯಾಗಿ ನಜ್ಮಾ ನೇಮಕಗೊಂಡಿದ್ದಾರೆ.

ಜಾಮಿಯ ವಿಶ್ವವಿದ್ಯಾನಿಲಯ 1920ರಲ್ಲಿ ಸ್ಥಾಪನೆಯಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ ಯಾವುದೇ ಮಹಿಳೆ ಉಪಕುಲಪತಿ ಸ್ಥಾನವನ್ನು ಅಲಕಂರಿಸಿಲ್ಲ. ತಲತ್ ಅಹ್ಮದ್‍ರ ಉತ್ತರಾಧಿಕಾರಿಯಾಗಿ ನಜ್ಮಾ ನೇಮಕಗೊಂಡಿದ್ದಾರೆ. ತಲತ್ ಕಾಶ್ಮೀರ ವಿಶ್ವವಿದ್ಯಾನಿಲಯದ ಉಪಕುಲಪತಿಯಾಗಿ ಹೊಣೆ ನಿರ್ವಹಿಸುತ್ತಿದ್ದಾರೆ. ಈಗ ನಜ್ಮಾ ನ್ಯಾಶನಲ್ ಇನ್ಸಿಟಿಟ್ಯೂಟ್ ಆಫ್ ಎಜುಕೇಶನಲ್ ಪ್ಲಾನಿಂಗ್ ಆಂಡ್ ಅಡ್ಮಿಸ್ಟ್ರೇಶನ್, ಎಜುಕೇಶನ್ ಅಡ್ಮಿಸ್ಟ್ರೇಶನ್ ವಿಭಾಗದ ಮುಖ್ಯಸ್ಥೆಯಾಗಿದ್ದು ಇಲ್ಲಿ ಅವರು ಕಳೆದ ಹದಿನೈದು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.