ಎಚ್ಚರ! ಭಾರತದಲ್ಲಿ ಮಾರಣಾಂತಿಕ ಫಂಗಸ್ ಹರಡುತ್ತಿದೆ; ಸ್ಪರ್ಶವಾದರೆ 90 ದಿವಸದ ನಂತರ ಸಾವು

0
4491

ಹೊಸದಿಲ್ಲಿ,ಎ.9: ಜಗತ್ತಿನಾದ್ಯಂತ ಗೊತ್ತಾಗದಂತೆ ಫಂಗಸ್‍ವೊಂದು ಹರಡುತ್ತಿದ್ದು ಇದಕ್ಕೆ ಯಾವುದೇ ಔಷಧವಿಲ್ಲ. ಈ ಫಂಗಸ್‍ನ ಅಚ್ಚರಿಯೇನೆಂದರೆ ಮನುಷ್ಯ ಸತ್ತ ಬಳಿಕವೂ ಇದು ನಾಶವಾಗುವುದಿಲ್ಲ. ಅಮೆರಿಕ ಮತ್ತು ಯುರೋಪ್‍ಗಳಲ್ಲಿ ಹಾವಳಿ ನಡೆಸಿದ ಬಳಿಕ ಭಾರತ, ಪಾಕಿಸ್ತಾನ,ದಕ್ಷಿಣ ಆಫ್ರಿಕಗಳಲ್ಲಿ ಹಬ್ಬುತ್ತಿದೆ ಎಂದು ವರದಿಯಾಗಿದೆ.

ಈ ಅಪಾಯಕಾರಿ ಫಂಗಸ್‍ನ್ನು ಕ್ಯಾಂಡಿಡ್ ಆರಿಸ್ ಎಂದು ಗುರುತಿಸಲಾಗಿದೆ. ವರದಿಯೊಂದರ ಪ್ರಕಾರ ಇದಕ್ಕೆ ಹಲವು ಮಂದಿ ಈಗಾಗಲೇ ಮೃತಪಟ್ಟಿದ್ದಾರೆ. ಇಮ್ಯೂನ್ ಸಿಸ್ಟಂ ದುರ್ಬಲವಾಗಿರುವವರ ಮೇಲೆ ದಾಳಿ ನಡೆಸುತ್ತದೆ. ಫಂಗಸ್‍ನಿಂದಾಗಿ ಬ್ರಿಟಿಶ್ ಮೆಡಿಕಲ್ ಸೆಂಟರ್ ತನ್ನ ಇಂಟೆನ್ಸಿವ್ ಕೇರ್ ವಿಭಾಗವನ್ನೆ ಮುಚ್ಚಬೇಕಾಯಿತು ಎಂದು ವರದಿ ತಿಳಿಸಿದೆ.

ಕಳೆದ ವರ್ಷ ಮೇ ತಿಂಗಳಲ್ಲಿ ಕ್ಯಾಂಡಿಡ್ ಆರಿಸ್‍ನ ಮೊದಲ ರೋಗಿ ಬ್ರೂಕ್‍ಲಿನ್‍ನಲ್ಲಿ ಪತ್ತೆಯಾಗಿದ್ದರು. ಮೌಂಟ್ ಸಿನಾಯಿ ಆಸ್ಪತ್ರೆಯಲ್ಲಿ ಓರ್ವ ಹಿರಿಯ ವ್ಯಕ್ತಿ ಚಿಕಿತ್ಸೆಗೆ ದಾಖಲಾಗಿದ್ದರು. ಅವರ ರಕ್ತ ಪರೀಕ್ಷೆಯಲ್ಲಿ ಈ ಫಂಗಸ್‍ನಿಂದ ಬಳಲುವುದು ಗೊತ್ತಾಯಿತು. ರಕ್ತದ ಪರೀಕ್ಷಾ ಫಲಿತಾಂಶದ ಬಳಿಕ ವೈದ್ಯರು ರೋಗಿಯನ್ನು ಇಂಟೆನ್ಸಿವ್ ಕೇರ್ ವಿಭಾಗಕ್ಕೆ ಸ್ಥಳಾಂತರಿಸಿದರು. ವರದಿಯ ಪ್ರಕಾರ ಕ್ಯಾಂಡಿಡ್ ಆರಿಸ್ ರೋಗಕ್ಕೆ ತುತ್ತಾದವರಲ್ಲಿ ಅರ್ಧಾಂಶ ರೋಗಿಗಳು ತೊಂಬತ್ತು ದಿವಸಗಳಲ್ಲಿ ಮೃತಪಟ್ಟಿದ್ದಾರೆ. ಇದೇ ವೇಳೆ ಈ ಫಂಗಸ್ ಉಗಮ ಎಲ್ಲಿಂದ ಎಂದು ವೈದರಿಗೆ ಗೊತ್ತಾಗಿಲ್ಲ ಮತ್ತು ಇದಕ್ಕೆ ಯಾವುದೇ ಚಿಕಿತ್ಸೆ ಇಲ್ಲ. ಅಮೆರಿಕದಲ್ಲಿ ಕ್ಯಾಂಡಿಡ್ ಆರಿಸ್‍ನ 587 ಪ್ರಕರಣಗಳು ಪತ್ತೆಯಾಗಿವೆ. ಈ ಫಂಗಸ್ ಆಸ್ಪತ್ರೆಯಲ್ಲಿರುವ ಜನರಿಗೆ ಕೈ, ಅಲ್ಲಿನ ವಸ್ತುಗಳು, ಆಹಾರ ಇತ್ಯಾದಿಗಳ ಮೂಲಕ ಹರಡುತ್ತದೆ.