ಮಾನಂದವಾಡಿ ತಲುಪಿದ ಪ್ರಿಯಾಂಕಾ ಗಾಂಧಿ

0
148

ಕಲ್ಪಟ್ಟ,ಎ. 20: ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ಎರಡನೆ ಹಂತದ ಚುನಾವಣಾ ಪ್ರಚಾರಕ್ಕಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮಾನಂದವಾಡಿಗೆ ತಲುಪಿದ್ದಾರೆ. ರಾಹುಲ್ ಗಾಂಧಿಗೆ ಮತ ಯಾಚಿಸಲಿಕ್ಕಾಗಿ ಪ್ರಿಯಾಂಕ ಗಾಂಧಿ ಕೇರಳಕ್ಕೆ ಬಂದಿದ್ದಾರೆ. ಈ ಹಿಂದೆ ಕ್ಷೇತ್ರದಲ್ಲಿ ಯುಡಿಎಫ್ ಅಭ್ಯರ್ಥಿಯಾಗಿ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಸುವ ಸಮಯದಲ್ಲಿ ಬಂದಿದ್ದ ಪ್ರಿಯಾಂಕಾ ಕ್ಷೇತ್ರದಲ್ಲಿ ಐದು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.

ಬೆಳಗ್ಗೆ ಕಣ್ಣೂರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿದ ಪ್ರಿಯಾಂಕಾ ಹೆಲಿಕಾಪ್ಟರ್ ಮೂಲಕ ವಯನಾಡಿಗೆ ಬಂದರು.11:45ಕ್ಕೆ ವಳ್ಳಿಯೂರ್ ಕಾವಿಲ್‍ನಿಂದ ಹೊರಟ ಅವರು ಮುಟ್ಟಿಲ್ ಡಬ್ಲ್ಯುಎಂಒ ಕಾಲೇಜು ಮೈದಾನದಲ್ಲಿ ತಾತ್ಕಾಲಿಕ ಹೆಲಿಪ್ಯಾಡಿನಲ್ಲಿ ಇಳಿಯುವರು. ಪುಲ್ವಾಮ ಭಯೋತ್ಪಾದನ ದಾಳಿಯಲ್ಲಿ ವೀರ ಮೃತ್ಯುವನ್ನಪ್ಪಿದ ಸಿಆರ್‍ಪಿಎಫ್ ಯೋಧ ವಸಂತಕುಮಾರ್ ಕುಟುಂಬವನ್ನು ಸಂದರ್ಶಿಸಲಿದ್ದಾರೆ. ಮಧ್ಯಾಹ್ನ 1:30ಕ್ಕೆ ಪುಲ್‍ಪಳ್ಳಿಯಲ್ಲಿ ರೈತರ ಸಂಗಮದಲ್ಲಿ ಪಾಲ್ಗೊಳ್ಳಲಿದ್ದಾರೆ. 2:15ಕ್ಕೆ ಪುಲ್‍ಪ್ಪಳ್ಳಿಯಿಂದ ನಿಲಂಬೂರಿಗೆ ತೆರಳಲಿದ್ದು ಅಲ್ಲಿ ಮೂರು ಗಂಟೆಗೆ ಜನರೊಂದಿಗೆ ಸಂವಾದ ನಡೆಸಲಿದ್ದಾರೆ. 4:05ರಿಂದ 4:45ರವರೆಗೆ ಅರಿಕ್ಕೋಡ್‍ನಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ರಾತ್ರೆ ವೈತ್ತಿರಿಯಲ್ಲಿ ತಂಗಲಿದ್ದು 21ನೆ ತಾರೀಕು ಸೋಮವಾರ ಪ್ರಿಯಾಂಕಾ ದಿಲ್ಲಿಗೆ ಮರಳಲಿದ್ದಾರೆ.