ದೆಹಲಿಯ ಜಾಮಾ ಮಸೀದಿಯ ಒಂದೇ ಒಂದು ಇಟ್ಟಿಗೆ ಸರಿಸಲೂ ನಾವು ಬಿಡಲಾರೆವು- ಕೇಂದ್ರ ಸಚಿವ ರವಿಶಂಕರ್ ಪ್ರಸಾದ್

0
114

ನವದೆಹಲಿ (ಪಿಟಿಐ): ದೆಹಲಿಯ ಜಾಮಾ ಮಸೀದಿಯ ಒಂದು ಇಟ್ಟಿಗೆ ಸರಿಸಲೂ ನಾವು ಬಿಡಲಾರೆವು ಎಂದು ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಹೇಳಿದ್ದಾರೆ. ಡಿಸೆಂಬರ್ 7 ರ ರಾಜಸ್ತಾನ್ ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ  ಎಬಿಪಿ ನ್ಯೂಸ್ ನ ಆಯೋಜಿಸಿದ್ದ ಶಿಖರ್ ಸಮ್ಮೇಳನದಲ್ಲಿ   ಮಾತನಾಡುತ್ತಾ, “ನಾವು ರಾಮ ಮಂದಿರ ನಿರ್ಮಾಣಕ್ಕೆ  ಸಿದ್ಧರಾಗಿದ್ದೇವೆ ಮತ್ತು ಅದರ ಜೊತೆಗೆ ನಾವು ಇತರ ಧಾರ್ಮಿಕ ಚಿಹ್ನೆಗಳನ್ನೂ ಸಮನಾಗಿ ಗೌರವಿಸುತ್ತೇವೆ ಎಂದು ಹೇಳಿದ್ದಾರೆ. ರಾಮ ಮಂದಿರವನ್ನು ಅಯೋಧ್ಯೆಯಲಲ್ಲದೇ ಬೇರೆ  ಎಲ್ಲಿ ನಿರ್ಮಿಸಬೇಕು? ನ್ಯಾಯಾಲಯದ ಹೊರಗಡೆ ಈ ವಿವಾದವನ್ನು ಬಗೆಹರಿಸಲು  ನಾವು ಬಯಸಿದ್ದೇವೆ. ಅಂತೆಯೇ, ಜಾಮಾ ಮಸೀದಿಯಿಂದ ಒಂದು ಇಟ್ಟಿಗೆ ಕಿತ್ತುಹಾಕಿದರೂ ನಾವು ಅದನ್ನು ಪ್ರತಿಭಟಿಸುತ್ತೇವೆ” ಎಂದಿದ್ದಾರೆ.