ನೋಬೆಲ್ ಶಾಂತಿ ಪ್ರಶಸ್ತಿಗೆ ಹದಿನಾರರ ಸ್ವೀಡಿಶ್ ಬಾಲಕಿ ಗ್ರೇಟಾ ಹೆಸರು ಶಿಫಾರಸು

0
517

ಸ್ವೀಡನ್: ಹವಾಮಾನ ಏರುಪೇರಿನ ವಿರುದ್ಧ ಜಾಗೃತಿ ಮೂಡಿಸಲು ಅಭಿಯಾನ ನಡೆಸಿದ ಕಾರ್ಯಕರ್ತೆಯಾದ ಸ್ವೀಡಿಶ್ ಬಾಲಕಿಯನ್ನು ನೋಬೆಲ್ ಶಾಂತಿ ಪ್ರಶಸ್ತಿಗೆ ಶಿಫಾರಸ್ಸು ಮಾಡಲಾಗಿದೆ. ಗ್ರೇಟಾ ತುನ್‍ಬರ್ಗ್ ಎಂಬ ಬಾಲಕಿ ಹವಾಮಾನ ಬದಲಾವಣೆಯ ವಿರುದ್ಧ ಜಾಗೃತಿಗಾಗಿ ನಡೆಸಿದ ಅಭಿಯಾನ ಅತ್ಯಂತ ಪ್ರಮುಖ ಶಾಂತಿ ಕೊಡುಗೆ ಎಂದು ನಾರ್ವೆಯ ರಾಜಕಾರಿಣಿಗಳು ಹೇಳಿದ್ದಾರೆ. ಹದಿನಾರು ವರ್ಷದ ಬಾಲಕಿ ಗ್ರೇಟಾ ಶಾಲೆಗೆ ರಜೆ ಹಾಕಿ  ಹವಾಮಾನ ಬದಲಾವಣೆಯ ವಿರುದ್ಧ  ಕ್ರಮಕೈಗೊಳ್ಳಲು ಒತ್ತಾಯಿಸಿ ಪ್ರತಿಭಟನೆ ನಡೆಸಲು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದ್ದಳು. ನಂತರ ಈ ಹೋರಾಟವು ಸ್ವೀಡನ್ ಹಾಗೂ ಇತರೆ ಯುರೋಪಿಯನ್ ದೇಶಗಳಲ್ಲಿ ವ್ಯಾಪಿಸಿತ್ತು.

ಹವಾಮಾನ ಬೆದರಿಕೆಗಳು ಯುದ್ಧ ಮತ್ತು ಸಂಘರ್ಷಗಳಿಗೆ ಕಾರಣವಾಗಬಹುದು ಎಂದು ನಾರ್ವೇಯ ರಾಜಕಾರಣಿ ಫ್ರೆಡ್ರಿ ಒವಿಸಿಟಿಗಾರ್ಡೊಲ್ಡ್ ಹೇಳಿದರು. ಯಾವುದೇ ದೇಶದ ರಾಜಕಾರಣಿಗಳು ಯಾರನ್ನಾದರೂ ನೋಬೆಲ್ ಶಾಂತಿ ಪ್ರಶಸ್ತಿಗೆ ಶಿಫಾರಸ್ಸು ಮಾಡಬಹುದಾಗಿದೆ. ನೋಬೆಲ್ ಪ್ರೈಝ್ ಸಮಿತಿಗೆ ಫೆಬ್ರುವರಿ ಒಂದರೊಳಗೆ ಮಾತ್ರ ನೊಬೆಲ್‍ ಪಾರಿತೋಷಕಕ್ಕೆ ಶಿಫಾರಸ್ಸು ಮಾಡಬಹುದಾಗಿದೆ. ತನಗೆ ಶಿಫಾರಸು ಮಾಡಲಾದ ಹೆಸರುಗಳನ್ನು ನೋಬೆಲ್ ಪಾರಿತೋಷಕ ಸಮಿತಿಯು ಗೌಪ್ಯವಾಗಿರಿಸುತ್ತದೆ.