ಅಕ್ರಮ ವಸತಿ ನಿರ್ಮಾಣ: ಇಸ್ರೇಲನ್ನು ಖಂಡಿಸಿದ ಟರ್ಕಿ

0
766

ಆಕ್ರಮಿತ  ಪೂರ್ವ ಜೆರುಸಲೆಮ್ ನಲ್ಲಿ ಸುಮಾರು 800 ಹೊಸ ವಸತಿ ಘಟಕಗಳನ್ನು   ನಿರ್ಮಿಸಲು ಮುಂದಾಗಿರುವ  ಇಸ್ರೇಲಿನ ನಡೆಯನ್ನು ಟರ್ಕಿಯು ಟೀಕಿಸಿದೆ.

”ಪೂರ್ವ ಜೆರುಸಲೆಮ್ ನಲ್ಲಿರುವ ರಾಮತ್ ಶ್ಲೋಮೊ ಮತ್ತು ರಾಮೋತ್  ಅಕ್ರಮಿತ  ಪ್ರದೇಶದಲ್ಲಿ  792 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಅನುಮತಿಸುವ  ಮೂಲಕ ಇಸ್ರೇಲಿ ಅಧಿಕಾರಿಗಳು ಮತ್ತೊಮ್ಮೆ ಅಂತಾರಾಷ್ಟ್ರೀಯ ಕಾನೂನನ್ನು ಕಡೆಗಣಿಸಿದ್ದಾರೆ” ಎಂದು ಟರ್ಕಿಯ ವಿದೇಶಾಂಗ ಸಚಿವಾಲಯ ತನ್ನ ವೆಬ್ ಸೈಟ್ ನಲ್ಲಿ ತಿಳಿಸಿದೆ.

ಇಸ್ರೇಲಿ ಮಾಧ್ಯಮ ವರದಿಗಳ ಪ್ರಕಾರ, ಈ ವಾರ ಇಸ್ರೇಲ್ ಅಧಿಕಾರಿಗಳು ಆಕ್ರಮಿತ ಪೂರ್ವ ಜೆರುಸಲೆಮ್ ನಲ್ಲಿ ನೂರಾರು ಹೊಸ ಯಹೂದಿ ವಸತಿ ಘಟಕಗಳನ್ನು ನಿರ್ಮಾಣ ಮಾಡಲು ಅನುಮೋದನೆ ನೀಡಿದ್ದಾರೆ

1967 ರಿಂದ ನಿರ್ಮಿಸಲಾಗುತ್ತಿರುವ  100 ಕ್ಕಿಂತ ಹೆಚ್ಚು ನೆಲೆಗಳಲ್ಲಿ ಪ್ರಸ್ತುತ  ಸರಿಸುಮಾರು 650,000 ಇಸ್ರೇಲಿ ಯಹೂದಿಗಳು  ವಾಸಿಸುತ್ತಿದ್ದಾರೆ.

ಗಾಜಾ ಪಟ್ಟಿಯನ್ನೂ ಸೇರಿಸಿ ಭವಿಷ್ಯದ ಪ್ಯಾಲೇಸ್ಟಿನಿಯನ್ ರಾಜ್ಯ ಸ್ಥಾಪಿಸಲು ಫೆಲೆಸ್ತೀನಿಯರಿಗೆ ಈ ಭೂಮಿ ಅಗತ್ಯವಾಗಿದೆ. .

ಅಂತರರಾಷ್ಟ್ರೀಯ ಕಾನೂನು ವೆಸ್ಟ್ ಬ್ಯಾಂಕ್ ಮತ್ತು ಪೂರ್ವ ಜೆರುಸಲೆಮ್ ಗಳನ್ನು “ಆಕ್ರಮಿತ  ಪ್ರದೇಶಗಳು” ಎಂದು ಪರಿಗಣಿಸುತ್ತದೆ ಮತ್ತು ಅಲ್ಲಿ  ಎಲ್ಲಾ ಯೆಹೂದಿ  ನೆಲೆಸುವಿಕೆ-  ನಿರ್ಮಾಣ  ಚಟುವಟಿಕೆಗಳನ್ನು  ಅಕ್ರಮವೆಂದು ಪರಿಗಣಿಸುತ್ತದೆ.