ಸೆಪ್ಟಂಬರ್ ತಿಂಗಳೊಂದರಲ್ಲೇ 26 ಫೆಲೆಸ್ತೀನಿಯರ ಹತ್ಯೆ ಮಾಡಿ 2300 ಮಂದಿಯನ್ನು ಗಾಯಗೊಳಿಸಿದ ಇಸ್ರೇಲ್

0
694

ಇಸ್ರೇಲ್ ಆಕ್ರಮಿತ ಫೆಲಸ್ತೀನ್ ಪ್ರಾಂತ್ಯಗಳಲ್ಲಿ ಸೇನೆಯು ಸೆಪ್ಟೆಂಬರ್ ತಿಂಗಳೊಂದರಲ್ಲಿಯೇ 26 ಫೆಲಸ್ತೀನಿಯರನ್ನು ಹತ್ಯಗೈದಿದ್ದು, 2300 ಜನರನ್ನು ಗಾಯಾಳುಗೊಳಿಸಿದೆ. ಇದಲ್ಲದೇ ಇಸ್ರೇಲ್ ಸೇನೆಯು ಒಟ್ಟು 450 ಫೆಲಸ್ತೀನಿಯರನ್ನು ಬಂಧಿಸಿರುವುದಾಗಿ ಅಬ್ದುಲ್ಲಾ ಅಲ್- ಹೌರಾನೀ ಸೆಂಟರ್ ಫಾರ್ ಸ್ಟಡೀಸ್ ವರದಿಯೊಂದನ್ನು ಬಿಡುಗಡೆಗೊಳಿಸಿದೆ.

ಈ ವರದಿಯ ಪ್ರಕಾರ ಇಸ್ರೇಲ್ ಸೇನೆಯು ಗಾಜಾ ಪ್ರದೇಶದಲ್ಲಿ ಏಳು ಮಕ್ಕಳು ಸೇರಿದಂತೆ 23 ಫೇಲಸ್ರೀನಿಯನ್ನು ಹತ್ಯೆಗೈದಿದೆ. ವೆಸ್ಟ್ ಬ್ಯಾಂಕ್ ಪ್ರದೇಶದಲ್ಲಿ ಮೂವರನ್ನು ಸೇನೆಯು ಹತ್ಯೆಗೈದಿದ್ದು ಇಸ್ರೇಲ್ ಸೇನೆಯಿಂದ ಥಳಿತಕ್ಕೊಳಗಾಗಿ ಮರಣ ಹೊಂದಿದವರಲ್ಲಿ ಮುಹಮ್ಮದ್ ಅಲ್- ರಿಮ್ವೀ ಕೂಡ ಒಬ್ಬರು.

ಗಾಜಾ ಪಟ್ಟಿ , ವೆಸ್ಟ್ ಬ್ಯಾಂಕ್ ಹಾಗೂ ಜೆರುಸಲೇಮ್ ನ ಪ್ರದೇಶಗಳಲ್ಲಿ ಇಸ್ರೇಲ್ ಸೇನೆಯು ನಡೆಸಿದ ದಾಳಿಗಳಿಂದಾಗಿ ಸುಮಾರು2300 ಜನರು ಗಾಯಗೊಂಡಿದ್ದಾರೆ. ಈ ಅಂಕಿ ಅಂಶಗಳಲ್ಲಿ ಕೇವಲ ಗಾಜಾ ಪಟ್ಟಿಯ ಮೇಲೆ ನಡೆದ ದಾಳಿಯಲ್ಲಿಯೇ 2016 ಜನರು ಗಾಯಗೊಂಡಿರುವುದಾಗಿ ವರದಿಯು ತಿಳಿಸಿದೆ.

ಇಸ್ರೇಲ್ ಸೇನೆಯು ಈ ಪ್ರದೇಶಗಳಲ್ಲಿ ಆಕ್ರಮಣಕಾರಿ ನಡೆಯನ್ನು ಮುಂದುವರೆಸಿದ್ದು 16 ಮನೆಗಳನ್ನು ಮತ್ತು 18 ಆಶ್ರಯ ತಾಣಗಳನ್ನು ಕೆಡವಿಹಾಕಿದೆ.

ಇದಲ್ಲದೇ ಸೇನೆಯು ಅಕ್ರಮವಾಗಿ ಫೆಲಸ್ತೀನಿಯರ ನಿವಾಸಗಳನ್ನು ವಶಪಡಿಸಿಕೊಳ್ಳುತ್ತಿದ್ದು ಕಾನೂನು ಬಾಹಿರ ಕಟ್ಟಡ ನಿರ್ಮಾಣ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಅಲ್- ವಲಾಜಾ ಹಳ್ಳಿಯಲ್ಲಿ ಫೆಲಸ್ತೀನಿಯರಿಗೆ ಸೇರಿದ 208 ಎಕರೆ ಭೂಮಿಯನ್ನು ಇಸ್ರೇಲ್ ಸೇನೆಯು ಆಕ್ರಮಿಸಿಕೊಂಡಿದ್ದು 4700 ಸೆಟಲ್ಮೆಂಟ್ ಗಳನ್ನು ನಿರ್ಮಿಸಲು ಮುಂದಾಗಿದೆ.