ಸಾವಿರಾರು ಮಂದಿಗೆ ಆಧ್ಯಾತ್ಮಿಕ ಶಿಕ್ಷಣ ಧಾರೆ ಎರೆದ ಸಂಚಾರಿ ಶಿಕ್ಷಕಿ-ಝೈನಬಾ

0
938

ಹರಿಪ್ಪಾಡ್,ಮಾ.13: ಝೈನಬಾ(71) ಬೆಳಗ್ಗಿನ ನಮಾಝ್ ಮಾಡಿದ ಬಳಿಕ ಹೊರಟು, ಕಲಿಯುವವರ ಮನೆಗೆ ಹೋಗಿ ಅವರು ಕೊಟ್ಟ ಆಹಾರ ಸೇವಿಸಿ ಆರರಿಂದ ಹನ್ನೆರಡು ವರ್ಷದವರೆಗಿನ ಗಂಡು ಮತ್ತು ಹೆಣ್ಣುಮಕ್ಕಳಿಗೆ ಕಲಿಸುವ ಸಂಚಾರಿ ಶಿಕ್ಷಕಿಯಾಗಿದ್ದಾರೆ.

ಪವಿತ್ರ ಕುರ್‍ಆನ್‍ನ್ನು ಕಲಿಸಿದ ಅವರು ಓದಿಸುವ ‘ಝೈನಬಾ ಉಮ್ಮ’ ಎಂದು ಊರಲ್ಲಿಯೇ ಪ್ರಸಿದ್ಧರಾಗಿದ್ದಾರೆ. ಕಳೆದ 20 ವರ್ಷಕ್ಕೂ ಹೆಚ್ಚು ಕಾಲದಿಂದ ಮನೆಮನೆಗೆ ತೆರಳಿ ಮಕ್ಕಳಿಗೆ ಮತ್ತು ಮಹಿಳೆಯರಿಗೆ ಪವಿತ್ರಕುರ್‍ಆನ್ ಕಲಿಸುತ್ತಾ ಬಂದಿದ್ದಾರೆ. ಕಾರ್ತಿಕ ಪಳ್ಳಿ ಎರಿಕಾವ್ ಕೆಯಕ್ ತೋಪ್ಪಿಲ್ ಮನೆಯ ದಿವಂಗತ ಇಸ್ಮಾಯಿಲ್ ಕುಟ್ಟಿಯವರ ಪತ್ನಿ . ತನ್ನ ಇಪ್ಪತ್ತೊಂದನೆಯ ವಯಸ್ಸಿನಲ್ಲಿಯೂ ಅವರು ತನ್ನ ಕಾಯಕವನ್ನು ಮುಂದುವರಿಸುತ್ತಿದ್ದಾರೆ ಡಾನಪ್ಪಡಿ ಎಂಬಲ್ಲಿ ಹೊರೆ ಕಾರ್ಮಿಕನಾಗಿದ್ದ ಅವರ ಪತಿ ನಿಧನರಾದಾಗ ಕುಟುಂಬ ಪೋಷಣೆಯ ನಿಮಿತ್ತ ಕುರ್‌ಆನ್ ಶಿಕ್ಷಿಕಿಯಾದರು.

ತಜ್ವೀದ್‍ನೊಂದಿಗೆ ಕುರ್‍ಆನ್ ಕಲಿಸುತ್ತಾರೆ. 30 ಅಧ್ಯಾಯವನ್ನು ಅವರು ಬಾಯಿಪಾಠವಾಗಿ ಕಲಿಸಲು ಸಮರ್ಥರು. ಕಾರ್ತಿಕ ಪ್ಪಳ್ಳಿ ಸಮೀಪದ ಮನೆಗಳಿಗೆ ನಡೆದು ಹೋಗಿ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ. ರೋಗಿಯಾದ ಬಳಿಕ ಸುತ್ತಾಡುವುದನ್ನು ಕಡಿಮೆ ಮಾಡಿದ್ದರು.ಆದರೆ ಕೆಲವರ ಒತ್ತಾಯಕ್ಕೆ ಮಣಿದು ಕೆಲವು ಮನೆಗಳಿಗೆ ಹೋಗಿ ಈಗಲು ಪವಿತ್ರಕುರ್‍ಆನ್ ಕಲಿಸುತ್ತಿದ್ದಾರೆ.

ಪುತ್ರ ಸಲೀಮ್‍ನ ಕುಟುಂಬದೊಂದಿಗೆ ಝೈನಬಾ ವಾಸವಾಗಿದ್ದಾರೆ. ಸಲೀಂ ವೆಲ್ಡಿಂಗ್ ಕೆಲಸ ಮಾಡುತ್ತಿದ್ದಾರೆ. ಏಳನೆ ತರಗತಿಯವರೆಗೆ ಶಾಲೆ ಕಲಿತಿರುವ ಝೈನಬಾರಿಗೆ ಸರಕಾರ ನೀಡುವ ವಿಧವಾ ಮಾಶಾಸನ ದೊರೆಯುತ್ತಿದೆ.