ಬ್ರೇಕಿಂಗ್ ನ್ಯೂಸ್: “ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ” ಎಂದ ಪ್ರಿಯಾಂಕಾ ಗಾಂಧಿ

0
208

ಲಕ್ನೊ: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಪ್ರಿಯಾಂಕಾ ಗಾಂಧಿ ತಿಳಿಸಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ಅವರು “ಪಾರ್ಟಿಯನ್ನು ಬಲಪಡಿಸುವುದು ತನ್ನ ಕರ್ತವ್ಯ”ವೆಂದು ಹೇಳಿದರು. “ಚುನಾವಣಾ ರಾಜಕೀಯ ತನ್ನ ಗುರಿಯಲ್ಲ. ಬದಲಾಗಿ ಪಕ್ಷದ ಬಲವರ್ಧನೆ ನನ್ನ ಗುರಿ. ಅದನ್ನು ಸರಿಯಾಗಿ ಮಾಡುವತ್ತ ಗಮನ ಹರಿಸುತ್ತೇನೆ” ಎಂದು ತಿಳಿಸಿದರು.

ಸೋನಿಯಾ ಗಾಂಧಿ ಕ್ಷೇತ್ರವಾದ ರಾಯ್‍ ಬರೇಲಿಯಿಂದ ಪ್ರಿಯಾಂಕ ಗಾಂಧಿ ಸ್ಪರ್ಧಿಸಲಿದ್ದಾರೆ ಎಂದು ಈ ಹಿಂದೆ ವರದಿಯಾಗಿತ್ತು.

ಆದರೆ ಅವರ ಆ ಎಲ್ಲ ಸಾಧ್ಯತೆಗಳಿಗೆ ತಮ್ಮ ಹೇಳಿಕೆಯ ಮೂಲಕ ಸದ್ಯ ಪೂರ್ಣ ವಿರಾಮ ಹಾಕಿದ್ದಾರೆ. ಈಗ ಸೋತರೆ ಅದು ರಾಜಕೀಯ ಭವಿಷ್ಯಕ್ಕೆ ಹಾನಿಕರವೆಂಬ ಹೆದರಿಕೆಯಿಂದ ಅವರು ಚುನಾವಣಾ ಕಣದಿಂದ ದೂರ ನಿಲ್ಲಲು ಕಾರಣ ಎನ್ನಲಾಗುತ್ತಿದೆ. ಉತ್ತರಪ್ರದೇಶದಲ್ಲಿ ಪಾರ್ಟಿ ಅಧಿಕಾರಕ್ಕೆ ಮರಳುವಂತೆ ಮಾಡಲು ಕಠಿಣ ಪರಿಶ್ರಮ ನಡೆಸಲು ಅವರು ಬಯಸಿದ್ದಾರೆಂದು ಕಾಂಗ್ರೆಸ್ ಮೂಲಗಳು ಹೇಳುತ್ತಿವೆ.

ಈ ನಡುವೆ ಪೂರ್ವ ಉತ್ತರ ಪ್ರದೇಶದ ಹೊಣೆಯನ್ನು ಹೊಂದಿರುವ ಪ್ರಿಯಾಂಕಾ ಗಾಂಧಿ ಲೋಕಸಭಾ ಚುನಾವಣೆಯಲ್ಲಿ ಕೇಶ್ನವ್ ದೇವ್ ಮೌರ್ಯರ ಮಹಾನ್ ದಳ ಪಾರ್ಟಿಯೊಂದಿಗೆ ಸಖ್ಯವನ್ನು ಘೋಷಿಸಿದ್ದಾರೆ. ಒಬಿಸಿ ವಿಭಾಗದವರಲ್ಲಿ ಈ ಪಾರ್ಟಿ ಪ್ರಬಲವಾಗಿದೆ. ಲಕ್ನೊದ ಪಾರ್ಟಿ ಕಚೇರಿಯಲ್ಲಿ ಪ್ರಿಯಾಂಕ ಮಹಾನ್ ದಳದೊಂದಿಗಿನ ಸಖ್ಯವನ್ನು ಘೋಷಿಸಿದ್ದಾರೆ.