ಬ್ರೇಕಿಂಗ್ ನ್ಯೂಸ್: ರಫೇಲ್‍ನಲ್ಲಿ ಮೋದಿಗಿಂತ ಮೊದಲೇ ಫ್ರೆಂಚ್ ರಕ್ಷಣಾ ಇಲಾಖೆ ಅಧಿಕಾರಿಗಳನ್ನು ಭೇಟಿಯಾಗಿದ್ದ ಅನಿಲ್ ಅಂಬಾನಿ!

0
1755

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ರಫೇಲ್ ಒಪ್ಪಂದ ಘೋಷಿಸುವ ಮೊದಲು ರಿಯಲನ್ಸ್ ಡಿಫೆನ್ಸ್ ಕಂಪೆನಿ ಮಾಲಕ ಅನಿಲ್ ಅಂಬಾನಿ ಫ್ರೆಂಚ್ ರಕ್ಷಣಾ ಇಲಾಖೆಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿರುವುದು ಬಟಾಬಯಲಾಗಿದೆ. ಫ್ರೆಂಚ್ ರಕ್ಷಣಾ ಸಚಿವ ಜೀನ್ ವೆಸ್ಲೆ ಡ್ರಿಯಾನ್‍ರ ಕಚೇರಿಯ ಹಿರಿಯ ಅಧಿಕಾರಿಗಳು ಮತ್ತು ಸಲಹೆಗಾರರೊಂದಿಗೆ ಪ್ಯಾರಿಸ್ನ ಕಚೇರಿಯಲ್ಲಿ ಭೇಟಿ ನಡೆದಿದೆ ಎಂದು ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

2015 ರ ಮಾರ್ಚ್ ನಲ್ಲಿ, ಪ್ರಧಾನಿ ನರೇಂದ್ರ ಮೋದಿ ಹೊಸ ರಫೇಲ್ ಒಪ್ಪಂದ ಘೋಷಿಸುವುದಕ್ಕಿಂತ ಎರಡು ವಾರ ಮೊದಲು ಅನಿಲ್ ಅಂಬಾನಿ ಜೀನ್ ವೆಸ್ ಲೆಡ್ರಿಯಾನ್‍ರ ಕಚೇರಿಯ ಅಧಿಕಾರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಸಭೆಯಲ್ಲಿ ವಿಶೇಷ ರಕ್ಷಣಾ ಸ¯ಹೆಗಾರ ಜೀನ್ ಕ್ಲೌಡ್ ಮಾಲೆಟ್, ಔದ್ಯಮಿಕ ಸಲಹೆಗಾರ ಕ್ರಿಸ್ಟೊಫೆ ಸಲೊಮನ್, ತಂತ್ರಜ್ಞಾನ ಸಲಹೆಗಾರ ಜೆಫ್ರಿ ಬಕ್ವೆಟ್ ಭಾಗವಹಿಸಿದ್ದರು.

ಅಂಬಾನಿಯೊಂದಿಗೆ ತೀರ ಅನೀರೀಕ್ಷಿತವಾಗ ಭೇಟಿ ನಡೆದಿತ್ತು ಮತ್ತು ರಹಸ್ಯ ಸ್ವಭಾವದಲ್ಲಾಗಿತ್ತು ಎಂದು ಯುರೋಪಿಯನ್ ರಕ್ಷಣಾ ಕಂಪೆನಿ ಅಧಿಕಾರಿಯೊಂದಿಗೆ ಕ್ರಿಸ್ಟೊಫೆ ಸಲೊಮನ್ ಹೇಳಿರುವುದು ವರದಿಯಲ್ಲಿದೆ. ಸಭೆಯಲ್ಲಿ ಅಂಬಾನಿ ಏರ್‍ಬೆಸ್ ಹೆಲಿಕಾಪ್ಟರ್ ಸಹಿತ ರಕ್ಷಣಾ ಹೆಲಿಕಾಪ್ಟರ್, ಕಮರ್ಶಿಯಲ್ ಹೆಲಿಕಾಪ್ಟರ್ ನಿರ್ಮಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದರು.

ಮೋದಿ ಫ್ರಾನ್ಸ್ ಗೆ ಭೇಟಿ ನೀಡುವಾಗ ಒಪ್ಪಂದ ಪತ್ರ (ಎಂಒಯು)ಕ್ಕೆ ಸಹಿಹಾಕುವ ಸಾಧ್ಯತೆಯ ಕುರಿತು ಅನಿಲ್ ಅಂಬಾನಿ ಫ್ರೆಂಚ್ ಅಧಿಕಾರಿಗಳಿಗೆ ಹೇಳಿದ್ದರು. ಒಪ್ಪಂದ ಪತ್ರ ಸಿದ್ಧಪಡಿಸಲಾಗುತ್ತಿದೆ ಎಂದು ಅಂಬಾನಿ ಹೇಳಿದ್ದರು.
2015 ಎಪ್ರಿಲ್ ಒಂಬತ್ತರಂದು ನರೇಂದ್ರ ಮೋದಿ ಅಧಿಕೃತ ಸಂದರ್ಶನಕ್ಕೆ ಫ್ರಾನ್ಸ್‍ಗೆ ಬಂದಿದ್ದರು. ಜೊತೆಯಲ್ಲಿ ಪ್ರಧಾನಿಯ ರಕ್ಷಣಾ ಪ್ರತಿನಿಧಿ ತಂಡದ ಲ್ಲಿ ಅಂಬಾನಿ ಇದ್ದರು. ಮೋದಿ ಮತ್ತು ಅಂದಿನ ಫ್ರೆಂಚ್ ಅಧ್ಯಕ್ಷ ಫ್ರಾನ್ಸ್ ವಾ ಒಲೆಂಡ್ ರೊಂದಿಗೆ 36 ರಫೇಲ್ ಯುದ್ಧ ವಿಮಾನ ಖರೀದಿಸುವ ಒಪ್ಪಂದಕ್ಕೆ ಸಂಬಂಧಿಸಿದ ಘೋಷಣೆ ಮತ್ತು ಜಂಟಿ ಹೇಳಿಕೆ ನೀಡಿದ್ದರು. 2015 ಮಾರ್ಚ್ 28 ಕ್ಕೆ ರಿಯಲನ್ಸ್ ಡಿಫೆನ್ಸ್ ಕಂಪೆನಿ ಅಸ್ತಿತ್ವಕ್ಕೆ ಬಂದಿತ್ತು. ಇದೇ ವಾರ ಅನಿಲ್ ಅಂಬಾನಿ ಮತ್ತು ಫ್ರೆಂಚ್ ಅಧಿಕಾರಿಗಳೊಂದಿಗೆ ಚರ್ಚಿಸಿದರು. ರಕ್ಷಣ ಸಚಿವ ವೆಸ್ಲೆ ಡ್ರಿಯಾನ್ ಕಚೇರಿ ರಿಲಯನ್ಸ್ ಡಿಫೆನ್ಸ್‍ಗೆ ಕಳುಹಿಸಿದ ಪ್ರಶ್ನೆಗಳಿಗೆ ಉತ್ತರ ಸಿಗಲಿಲ್ಲ ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ ಪತ್ರಿಕೆ ವರದಿ ಮಾಡಿದೆ.


2015 ಎಪ್ರಿಲ್ ಎಂಟಕ್ಕೆ ಅಂದಿನ ವಿದೇಶ ಕಾರ್ಯದರ್ಶಿ ಎಸ್. ಜಯಶಂಕರ್, ಪ್ರಧಾನಿಯ ಫ್ರಾನ್ಸ್ ಸಂದರ್ಶನಕ್ಕಿಂತ ಮೊದಲು ಪತ್ರಿಕಾಗೋಷ್ಠಿ ನಡೆಸಿ ಭಾರತ ರಕ್ಷಣಾ ಸಚಿವಾಲಯ ಮತುತ ಸಾರ್ವಜನಿಕ ಕ್ಷೇತ್ರದ ಸಂಸ್ಥೆ ಹಿಂದುಸ್ಥಾನ್ ಎರೊನಾಟಿಕಲ್ಸ್ ಲಿಮಿಟೆಡ್(ಎಚ್‍ಎಎಲ್) ಒಪ್ಪಂದ ಮಾಡಿಕೊಂಡಿದೆ ಎಂದು ಹೇಳಿದ್ದರು. ಒಪ್ಪಂದದಲ್ಲಿ ತಾಂತ್ರಿಕ ವಿಷಯಗಳಿರುವುದರಿಂದ ವಿವರವಾದ ಚರ್ಚೆ ನಡೆಯಬೇಕಾಗಿದೆ ಎಂದು ಜಯಶಂಕರ್ ಹೇಳಿದ್ದರು. ಪ್ರಧಾನಿಯ ಅಧಿಕೃತ ಸಂದರ್ಶನಕ್ಕೂ ಇದಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದರು.

ಸಾರ್ವಜನಿಕ ಕ್ಷೇತ್ರದ ಸಂಸ್ಥೆ ಎಚ್‍ಎಎಲ್ 108 ರಫೇಲ್ ವಿಮಾನಗಲನ್ನು ನಿರ್ಮಿಸುವ ಲೈಸನ್ಸ್ ಪಡೆದುಕೊಂಡಿದ್ದರೂ ಹೊಸ ಒಪ್ಪಂದಲ್ಲಿ ಕಂಪೆನಿಯನ್ನು ಕೈಬಿಡಲಾಗಿತ್ತು.