51 ದೇವಾಲಯಗಳಿಗೆ ಭೂಮಿ ಹಾಗೂ ಧನ ಸಹಾಯ ಮಾಡಿದ ಉತ್ತರ ಪ್ರದೇಶದ ಮುಸ್ಲಿಂ ಉದ್ಯಮಿ.

0
94

ಸಮಾಜದಲ್ಲಿ ಧರ್ಮ ಮತ್ತು ಜಾತಿ ಆಧಾರಿತ ವಿಭಜನೆಯು ವ್ಯಾಪಕವಾಗಿರುವ ಸಂದರ್ಭದಲ್ಲಿ ಸಹೋದರತ್ವ ಮತ್ತು ಐಕ್ಯತೆಯನ್ನು ಸಾರುವ ನಿಟ್ಟಿನಲ್ಲಿ ಉತ್ತರ ಪ್ರದೇಶದ ಉದ್ಯಮಿಯೋರ್ವರು 51 ದೇವಾಲಯಗಳನ್ನು ಕಟ್ಟಲು ಭೂಮಿ ಮತ್ತು ಹಣವನ್ನು ದಾನ ಮಾಡಲು ನಿರ್ಧರಿಸಿದ್ದಾರೆ.
ಲಕ್ನೋ ಮೂಲದ ಉದ್ಯಮಿ ರಷೀದ್ ನಸೀಮ್ ನ ಈ ವಿಶಿಷ್ಟ ಪ್ರಯತ್ನವು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಶೈನ್ ಗ್ರೂಪ್ ಆಫ್ ಕಂಪನಿಗಳ ಅಧ್ಯಕ್ಷರಾಗಿರುವ ರಶೀದ್ ನಸೀಮ್ ಅವರು ಉತ್ತರಪ್ರದೇಶ ಮತ್ತು ಬಿಹಾರದ ವಿವಿಧ ಸ್ಥಳಗಳಲ್ಲಿ 21 ದೇವಾಲಯಗಳನ್ನು ನಿರ್ಮಾಣ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ನ್ಯೂಸ್ 18 ನೊಂದಿಗೆ ಮಾತನಾಡಿದ ರಶೀದ್ ನಸೀಮ್, “ಮುಸ್ಲಿಮರಾಗಿರುವುದರಿಂದ ಇತರ ಧರ್ಮಗಳ ಸುಧಾರಣೆಗೆ ನಾನು ಕೆಲಸ ಮಾಡುವುದನ್ನು ತಡೆಯುವುದಿಲ್ಲ. ನನ್ನ ಹೆಜ್ಜೆ ಕೋಮು ಸೌಹಾರ್ದತೆಗೆ ಒಂದು ಹೆಜ್ಜೆ ಮತ್ತು ಸಮಾಜಕ್ಕೆ ಸಹೋದರತ್ವ ಮತ್ತು ಶಾಂತಿಯ ಸಂದೇಶವನ್ನು ನೀಡುವ ಪ್ರಯತ್ನವಾಗಿದೆ ಎಂದು ನಾನು ಭಾವಿಸುತ್ತೇನೆ. “ಎಂದರು.
ರಶೀದ್ ನಸೀಮ್ ನಿರ್ಮಿಸಿದ ಮೊದಲ ದೇವಾಲಯ ಅಲಹಾಬಾದ್-ವಾರಣಾಸಿ ಹೆದ್ದಾರಿಯಲ್ಲಿ ಬಹುತೇಕ ಸಿದ್ಧವಾಗಿದೆ ಮತ್ತು ಸಧ್ಯದಲ್ಲೇ ಉದ್ಘಾಟನೆಗೊಳ್ಳಲಿದೆ.