ಒಮನ್‍ನಲ್ಲಿ ಮುಂದಿನ ಐದು ವರ್ಷಗಳ ಕಾಲ ಇಸ್ಲಾಮಿಕ್ ವಸ್ತು ಪ್ರದರ್ಶನ

0
148

ಮಸ್ಕತ್: ಇಸ್ಲಾಮಿಕ್ ವಸ್ತು ಪ್ರದರ್ಶನ ಮುಂದಿನ ಐದು ವರ್ಷಗಳ ಕಾಲ ಒಮನ್‍ನ ವಿವಿಧ ಪ್ರದೇಶಗಳಲ್ಲಿ ನಡೆಯಲಿದೆ. ಜಗತ್ತಿನ ವಿವಿಧ ಕಡೆಗಳಿಂದ 35 ದೇಶಗಳಲ್ಲಿ ಸಾಗಿ ಈಗ ಎಕ್ಸಿಬಿಶನ್ ಒಮನ್‍ಗೆ ಬಂದಿದೆ. ಒಮನ್‍ನ ವಿವಿಧ ಕೋಟೆಗಳಲ್ಲಿ ವಸ್ತುಪ್ರದರ್ಶನ ನಡೆಯಲಿದೆ. ಮೊದಲ ಪ್ರದರ್ಶನ ಮಾರ್ಚ್ ನಾಲ್ಕರಿಂದ ಆರು ದಿವಸಗಳವರೆಗೆ ದಕ್ಷಿಣ ಬಾತಿನದ ನಕ್ಲಾದಲ್ಲಿ ನಡೆಯಿತು. ವಕ್ಫ್ ಮತ್ತು ಧಾರ್ಮಿಕ ವಿಷಯಗಳ ಸಚಿವಾಲಯ ಫಖರ್ ಅಲ್ಲ ವತನ್ ಸ್ವಯಂಸೇವಾ ಸಂಘಟನೆಯ ಸಹಾಯದಲ್ಲಿ ವಸ್ತು ಪ್ರದರ್ಶನ ಆಯೋಜಿಸುತ್ತಿದೆ.

ಶಾಂತಿಯು ಸಹಬಾಳ್ವೆ ಎಂಬ ಆಶಯದಲ್ಲಿ ನಡೆದ ಎಕ್ಸಿಬಿಶನ್‍ನಲ್ಲಿ ವಿವಿಧ ದೇಶಗಳ ಏಳು ಸಾವಿರಕ್ಕೂಹೆಚ್ಚು ಬಂದಿ ಬಂದು ನೋಡಿ ಹೋಗಿದ್ದಾರೆ ಎಂದು ವಸ್ತು ಪ್ರದರ್ಶನದ ಒಮನ್‍ನ ನಿರ್ದೇಶಕರು ಮತ್ತು ಫಖರ್ ಅಲ್ ವತನ್ ಉಪಾಧ್ಯಕ್ಷ ಇಂಜಿನಿಯರ್ ಮರಿಯಂ ಝೈದ್ ಅಲ್ ಅಮ್ರಿ ಹೇಳಿದರು. ಕಲೆ, ಕಾರ್ಯಕ್ರಮ, ಇಸ್ಲಾಮೀ ಸಂದೇಶ, ಕ್ಯಾಲಿಗ್ರಫಿ ಕಲಾರೂಪಗಳು ಸಹಿತ ಪ್ರದರ್ಶನದಲ್ಲಿದ್ದವು. ಹ್ಯಾಶ್‍ಟ್ಯಾಗ್ ಪ್ರಚಾರ ಕೂಡ ನಡೆದಿದೆ. ವಿವಿಧ ಗರ್ವನರೇಟ್‍ಗಳ್ಲಿ ಪ್ರತಿವರ್ಷ ನಾಲ್ಕರಂತೆ ಎಕ್ಸಿಬಿಶನ್ ಆಯೋಜಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ.