ಹಿಂದುತ್ವಕ್ಕೆ ಪ್ರತಿಯೊಬ್ಬ ಹಿಂದೂ ಕೇವಲ ಒಂದು ದಾಳ: ಪಂಕುರಿ ಪಾಠಕ್

0
2387

ಅಲಿಘರ್-ರಾಜಕೀಯ ಕಾರ್ಯಕರ್ತೆ ಮತ್ತು ಸಮಾಜವಾದಿ ಪಕ್ಷದ ಮಾಜಿ ವಕ್ತಾರೆಯಾಗಿದ್ದ ಪಂಕುರಿ ಪಾಠಕ್ ಇತ್ತೀಚೆಗೆ ಇನ್ನಿತರ ಕಾರ್ಯಕರ್ತರ ಜೊತೆಗೂಡಿ ಬಡ ಮುಸ್ಲಿಂ ಕುಟುಂಬವನ್ನು ಸಂದರ್ಶಿಸಲೆಂದು ಅಲೀಘರ್ ಗೆ ಹೋದರು. ಈ ಕುಟುಂಬದ ಇಬ್ಬರು ಪುತ್ರರನ್ನು (ನೌಷಾದ್ ಮತ್ತು ಮುಸ್ತಖೀಮ್) ಕಳೆದ ತಿಂಗಳು ಸ್ಥಳೀಯ ಪೊಲೀಸರು ‘ಎನ್ಕೌಂಟರ್’ ನಲ್ಲಿ ಕೊಂದಿದ್ದರು.ಆದರೆ ಈ ವೇಳೆ ಪಂಕುರಿ ಮತ್ತಿತರರ ಮೇಲೆ ಕೇಸರಿ ಪಡೆಗಳು ತೀವ್ರ ರೀತಿಯಲ್ಲಿ ದಾಳಿ ನಡೆಸಿವೆ ಎಂದವರು ಹೇಳಿದ್ದಾರೆ.

ಇಂದು ನಾನು ‘ಹಿಂದೂತ್ವ’ವನ್ನು ಬಹಳ ಸಮೀಪದಿಂದ ನೋಡಿದೆ. ಅವರ ಹಿಂದೂತ್ವವು ಕೇವಲ ರಾಜಕೀಯಕ್ಕೆ ಸೀಮಿತವಾಗಿದೆ. ಅದಲ್ಲದೆ, ಪ್ರತಿ ಹಿಂದೂ ಅವರಿಗೆ ಕೇವಲ ದಾಳವಾಗಿದ್ದಾರೆ ಮತ್ತು ಅವರು ತಮ್ಮ ರಾಜಕೀಯ ಪ್ರಯೋಜನಕ್ಕಾಗಿ ಅವರನ್ನು/ಅವಳನ್ನು ಕೊಲ್ಲಲೂಬಹುದು ಎಂದವರು ಹೇಳಿದ್ದಾರೆ.

ಅವರ ಕೆಲವು ಸ್ನೇಹಿತರನ್ನು ಸಹ ಗುಂಪೊಂದು ಆಕ್ರಮಣ ಮಾಡಿತು. ಆ ಜನಸಮೂಹವು ಅವರನ್ನು ಹಿಡಿದು ಅವರ ಬಟ್ಟೆಗಳನ್ನು ಹರಿದು ಹಾಕಿದೆಯೆಂದು ಕೆಲವು ವೀಡಿಯೋಗಳು ಮತ್ತು ಮಾಧ್ಯಮ ವರದಿಗಳು ಹೇಳುತ್ತವೆ.

ಪಂಕುರಿ ಮತ್ತು ಇನ್ನಿತರ ಕಾರ್ಯಕರ್ತರು ನೌಶಾದ್ (17) ಮತ್ತು ಮುಸ್ತಾಕೀಮ್ (22) ರವರ ಕುಟುಂಬವನ್ನು ಭೇಟಿಯಾಗಲು ಹೋಗಿದ್ದರು. ಇವರು ಸೆಪ್ಟೆಂಬರ್ 20 ರಂದು ಎನ್ಕೌಂಟರ್ ನಲ್ಲಿ ಪೊಲೀಸರಿಂದ ಕೊಲ್ಲಲ್ಪಟ್ಟರು. ಗುಂಡು ಹಾರಿಸಿದ ಕೆಲವೇ ಗಂಟೆಗಳ ನಂತರ, ಅವರ ಕುಟುಂಬ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಗುಂಡು ಹಾರಿಸಿದ ನಾಲ್ಕು ದಿನಗಳ ಮೊದಲು ಈ ಇಬ್ಬರನ್ನೂ ಮನೆಯಿಂದ ಕರೆದುಕೊಂಡು ಹೋಗಲಾಗಿದೆ ಎಂದು ಹೇಳಿದರು.

ಹಿಂದುತ್ವದ ಬಗ್ಗೆ ಪಂಕುರಿಯ ಟ್ವೀಟ್ ವೈರಲ್ ಆಗಿ 6.9 ಸಾವಿರ ಲೈಕ್ ಗಳು ಮತ್ತು 2.4 ಸಾವಿರ ಮರು ಟ್ವೀಟ್ ಗಳನ್ನೂ ಪಡೆದುಕೊಂಡಿದೆ.

ತಪ್ಪಿಸಿಕೊಂಡ ನಂತರ, ಅವರು ಗ್ರಾಮಕ್ಕೆ ಹೊರಡುವ ಬದಲಾಗಿ ತನ್ನ ಕಾರಿನಲ್ಲಿ ಆಶ್ರಯ ಪಡೆದು, ಫೇಸ್ಬುಕ್ ಲೈವ್ ನಡೆಸಿ ಬಜರಂಗ ದಳದ ಕಾರ್ಯಕರ್ತರು ಆಕ್ರಮಣ ಮಾಡುತ್ತಿದ್ದಾಗ ಪೊಲೀಸರು ಮೂಕ ಪ್ರೇಕ್ಷಕರಾಗಿದ್ದರು ಎಂದು ಆರೋಪಿಸಿದ್ದಾರೆ.

”ಅಟ್ರಾಲಿಯಲ್ಲಿ ನಾವು ತೀವ್ರವಾಗಿ ಆಕ್ರಮಣಕ್ಕೊಳಗಾಗಿದ್ದೇವೆ. ನಮ್ಮ ಕೆಲವು ಸ್ನೇಹಿತರು ಗಾಯಗೊಂಡಿದ್ದಾರೆ. ಪೊಲೀಸರ ಸಹಾಯದಿಂದ ಬಜರಂಗ ದಳದವರು ನಮ್ಮ ಮೇಲೆ ದಾಳಿ ಮಾಡಿದ್ದಾರೆ. ಪೊಲೀಸ್ ನಮ್ಮನ್ನು ಉಳಿಸಲು ಪ್ರಯತ್ನಿಸಲಿಲ್ಲ. ನಮ್ಮ ಸ್ನೇಹಿತರು ತೀವ್ರವಾಗಿ ಗಾಯಗೊಂಡರು ಮತ್ತು ರಕ್ತಸ್ರಾವಕ್ಕೊಳಗಾಗಿದ್ದಾರೆ. ನಾವು ಅವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದೇವೆ. ನಮ್ಮ ಕೆಲವು ಸ್ನೇಹಿತರು ಕಣ್ಮರೆಯಾಗಿದ್ದಾರೆ, ಅವರು ಎಲ್ಲಿದ್ದಾರೆಂದು ನಮಗೆ ಗೊತ್ತಿಲ್ಲ. ನಾವು ತಪ್ಪಿಸಿಕೊಂಡಿದ್ದೇವೆ. ನಾವು ಇನ್ನೂ ಸ್ವಲ್ಪ ಹೊತ್ತು ಅಲ್ಲಿಯೇ ಇದ್ದಿದ್ದರೆ, ನಾವು ಜೀವಂತವಾಗುತ್ತಿರಲಿಲ್ಲ. ನನ್ನ ಕಾರಿನ ಮೇಲೆ ಕಲ್ಲುಗಳು ಬಿದ್ದು ಹಾನಿಗೊಳಗಾಗಿದೆ. ನಮ್ಮ ಮೇಲೆ ಇಟ್ಟಿಗೆಗಳನ್ನು ಎಸೆದ ಕಾರಣ ನಾವು ಗಾಯಗೊಂಡಿದ್ದೇವೆ. ನನ್ನ ಚಾಲಕ ಕಾಣಿಸುತ್ತಿಲ್ಲ . ಆಲಿಘರ್ ನ ಪರಿಸರವು ತುಂಬಾ ಭಯಾನಕವಾಗಿದೆ. ಬಿಜೆಪಿ ಆಳ್ವಿಕೆಯಲ್ಲಿ ಸಂಪೂರ್ಣ ಜಂಗಲ್ ರಾಜ್ ಇದೆ” ಎಂದು ಪಂಕುರಿ ಅವರು ವಿವರಿಸಿದ್ದಾರೆ.

ಮೂಲ: ಕಾರವಾನ್
ಕನ್ನಡಕ್ಕೆ: ಆಯಿಶತುಲ್ ಅಫೀಫ