ಇಸ್ರೇಲನ್ನು ಒಪ್ಪಿಕೊಳ್ಳುವ ಸಮಯ ಬಂದಿದೆ: ಒಮನ್

0
1855

ಮಸ್ಕತ್: ಇಸ್ರೇಲನ್ನು ಒಪ್ಪಿಕೊಳ್ಳುವ ಸಮಯ ಸಂಜಾತವಾಗಿದೆ ಎಂದು ಒಮನ್ ಹೇಳಿಕೊಂಡಿದೆ. ಇಸ್ರೇಲ್ ಒಂದು ಮಧ್ಯಪ್ರಾಚ್ಯ ದೇಶ ಎಂದು ವರ್ಣಿಸಿದ ಒಮನ್, ವಾಶಿಂಗ್ಟನ್ ಮಧ್ಯಪ್ರಾಚ್ಯದ ಶಾಂತಿ ಪ್ರಯತ್ನಗಳಿಗೆ ಸಹಕಾರ ಮಾಡುತ್ತಿದೆ ಎಂದು ಹೇಳಿದೆ.

ಇಸ್ರೇಲ್ ಮತ್ತು ಫೆಲಸ್ತೀನಿಯರು ಜತೆ ಜತೆಗೆ ಕಾರ್ಯನಿರ್ವಹಿಸಲು ಸಹಾಯ ಮಾಡುವ ವಿಚಾರವನ್ನು ಒಮನ್ ಪ್ರಸ್ತಾಪಿಸಿದೆ. ಆದರೆ ಈ ವಿಷಯದಲ್ಲಿ ಮಧ್ಯಸ್ಥಿಕೆಯನ್ನು ತನ್ನ ದೇಶ ವಹಿಸಿಕೊಳ್ಳುವುದಿಲ್ಲ ಎಂದು ಒಮನ್ ಸಚಿವ ಯೂಸುಫ್ ಬಿನ್ ಅಲಾವಿ ಬಿನ್ ಅಬ್ದುಲ್ಲ ಬಹ್ರೈನ್‍ನ ಸಮ್ಮೇಳನವೊಂದರಲ್ಲಿ ಹೇಳಿದರು.

” ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಎಂಬ ಒಂದು ದೇಶ ಇದೆ- ಇದನ್ನು ನಾವೆಲ್ಲರೂ ತಿಳಿದಿದ್ದೇವೆ. ಜಗತ್ತು ಈ ವಾಸ್ತವಿಕತೆಯನ್ನು ಒಪ್ಪಿಕೊಂಡಿದೆ. ಇಸ್ರೇಲ್‍ನ ಜತೆ ವ್ಯವಹರಿಸಬೇಕಾಗಿದೆ. ಇತರ ದೇಶಗಳೊಂದಿಗೆ ವ್ಯವಹರಿಸುವ ರೀತಿಯಲ್ಲಿ. ಮತ್ತು ಅದರ ಪಾತ್ರವನ್ನು ಕೂಡ ಸಹಿಸಿಕೊಳ್ಳಬೇಕಾಗಿದೆ” ಎಂದು ಒಮನ್ ಸಚಿವರು ಹೇಳಿದರು.

ನಾವು ರಸ್ತೆ ಬದಿಯಲ್ಲಿ ಹೂ ಸುಲಭವಾಗಿ ಅರಳುತ್ತದೆ ಎಂದು ಹೇಳುತ್ತಿಲ್ಲ. ಆದರೆ ನಾವು ಸಂಘರ್ಷವನ್ನು ಕೊನೆಗೊಳಿಸುವುದಕ್ಕೆ ಆದ್ಯತೆ ನೀಡುತ್ತೇವೆ ಎಂದು ಸಚಿವರು ಸಮ್ಮೇಳನದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು. ಮಧ್ಯಪ್ರಾಚ್ಯದಲ್ಲಿ ಶಾಂತಿ ನೆಲೆಸಲಿಕ್ಕಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು. ಫೆಲೆಸ್ತೀನಿನ ಅಧ್ಯಕ್ಷ ಮಹಮೂದ್ ಅಬ್ಬಾಸ್‍ರ ಮೂರು ದಿವಸಗಳ ಕೊಲ್ಲಿ ದೇಶಗಳ ಭೇಟಿಯ ನಂತರ ಒಮನ್ ಸಚಿವರಿಂದ ಇಂಥ ಹೇಳಿಕೆ ಹೊರ ಬಂದಿದೆ.