ಫೆಲಸ್ತೀನ್ ಅಧ್ಯಕ್ಷರಿಗೆ ಕೊಲೆ ಬೆದರಿಕೆ: ಫತಹ್ ಖಂಡನೆ

0
187

ಜೆರುಸಲೇಮ್: ಫೆಲಸ್ತೀನ್ ಅಧ್ಯಕ್ಷ ಮಹ್ಮೂದ್ ಅಬ್ಬಾಸ್ ರಿಗೆ ಕೊಲೆ ಬೆದರಿಕೆಯನ್ನು ಹಾಕಿದ ಇಸ್ರೇಲ್‍ನ ಅಕ್ರಮ ವಲಸಿಗರ ವಿರುದ್ಧ ಫೆಲಸ್ತೀನ್ ಫತಹ್ ಆಂದೋಲನ ಪ್ರತಿಭಟನೆ ವ್ಯಕ್ತಪಡಿಸಿದೆ.

ಇಸ್ರೇಲಿನ ಸರಕಾರ ಫೆಲಸ್ತೀನಿಯರ ವಿರುದ್ಧ ಕೈಗೊಂಡ ನಿಲುವುಗಳೇ ಇಂತಹ ಹೇಳಿಕೆ ಮತ್ತು ಕೊಲೆ ಪಾತಕಕ್ಕೆ ಕರೆನೀಡಲು ಆಸ್ಪದವಾಗಿದೆ ಎಂದು ಫತಹ್ ಆಂದೋಲನದ ವಕ್ತಾರ ಒಸಾಮಾ ಅಲ್ ಖವಾಸ್ಮಿ ಹೇಳಿದರು.

ಇಸ್ರೇಲ್ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದೆ. ಅಬ್ಬಾಸ್‍ರ ವಿರುದ್ಧ ಇರುವ ಬೆದರಿಕೆ ಮಾತ್ರ ಇದಲ್ಲ. ಅಂತಾರಾಷ್ಟ್ರೀಯ ಕಾನೂನುಗಳನ್ನು ಗಾಳಿಗೆ ತೂರಿ ಫೆಲಸ್ತೀನಿ ಜನರ ವಿರುದ್ಧ ನಡೆಯುತ್ತಿರುವ ನಿರಂತರ ಬೆದರಿಕೆಯಿದೆಂದು ಅಲ್ ಖವಾಸ್ಮಿ ಹೇಳಿದರು.