ಪ್ರಥಮ ಹಂತದ ಚುನಾವಣೆಯಲ್ಲಿ ಭಾರೀ ಅಕ್ರಮ ನಡೆದಿದೆ- ಸೀತರಾಂ ಯೆಚೂರಿ

0
242

ಹೊಸದಿಲ್ಲಿ,ಎ.15: ಲೋಕಸಭಾ ಚುನಾವಣೆಯ ಮೊದಲ ಹಂತದ ಚುನಾವಣೆಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಹೇಳಿದರು. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದ ಅವರು ಪಶ್ಚಿಮ ಬಂಗಾಳ, ತ್ರಿಪುರದಲ್ಲಿ ಭಾರೀ ಅಕ್ರಮ ನಡೆಯಿತು ಎಂದರು.

ತ್ರಿಪುರದಲ್ಲಿ ಮತಗಟ್ಟೆಗೆ ಬಂದವರನ್ನು ಬೆದರಿಸಿ ಹಿಂದಕ್ಕೆ ಕಳುಹಿಸಲಾಗಿದೆ. ಬೇರೆ ಪಾರ್ಟಿಯ ಸದಸ್ಯರಾದರೆ ಅವರಿಗೆ ಹಲ್ಲೆ ಎಸಗಲಾಯಿತು. ಚುನಾವಣಾ ಆಯೋಗ ಇದರ ವಿರುದ್ಧ ಕ್ರಮ ಜರಗಿಸಬೇಕು ಎಂದು ಯಚೂರಿ ಹೇಳಿದರು. ಆಂಧ್ರ ಪ್ರದೇಶದಲ್ಲಿ ಮಧ್ಯಾಹ್ನ ಎರಡು, ಮೂರು ಗಂಟೆಯ ನಂತರ ಮತದಾನ ಆರಂಭವಾಯಿತು. ಇದು ಬೆಳಗ್ಗಿನವರೆಗೆ ಮುಂದುವರಿಯಿತು. ಅಲ್ಲಿ ಮತಯಂತ್ರ ಅನಿರೀಕ್ಷಿತವಾಗಿ ಹಾನಿಯಾಯಿತು ಎಂದು ಯಚೂರಿ ಹೇಳಿದರು. ಹೀಗೆ ಅಕ್ರಮಗಳು ಮುಂದುವರಿದರೆ ಚುನಾವಣಾ ಆಯೋಗದಲ್ಲಿ ನಂಬಿಕೆ ಕಳಕೊಳ್ಳುವ ಸ್ಥಿತಿ ಬರುತ್ತದೆ. ಈ ವಿಷಯದಲ್ಲಿ ಎಡಪಕ್ಷಗಳು ಚುನಾವಣಾ ಆಯೋಗಕ್ಕೆ ದೂರು ನೀಡಲಿದೆ ಎಂದು ಯೆಚೂರಿ ತಿಳಿಸಿದರು.

LEAVE A REPLY

Please enter your comment!
Please enter your name here