ವಯನಾಡ್ ಪಾಕಿಸ್ತಾನದಲ್ಲಿ ಎಂದ ಅಮಿತ್ ಶಾ ವಿರುದ್ಧ ಲೀಗ್‍ನಿಂದ ದೂರು

0
336

ಹೊಸದಿಲ್ಲಿ,ಎ.15: ವಯನಾಡನ್ನು ಪಾಕಿಸ್ತಾನಕ್ಕೆ ತುಲನೆ ಮಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಿರುದ್ಧ ಕೇರಳ ಮುಸ್ಲಿಂ ಲೀಗ್ ಚುನಾವಣಾ ಆಯೋಗಕ್ಕೆ ದೂರು ನೀಡಲಿದೆ. ಅಮಿತ್ ಶಾ ವಿರುದ್ಧ ಎಫ್‍ಐಆರ್ ದಾಖಲಿಸಬೇಕೆಂದು ಲೀಗ್ ರಾಷ್ಟ್ರೀಯ ಕಾರ್ಯದರ್ಶಿ ಖುರಂ ಉಮರ್,  ಅಡ್ವೊಕೇಟ್ ಹಾರಿಸ್ ಬೀರಾನ್ ದಿಲ್ಲಿಯಲ್ಲಿ ಚುನಾವಣಾ ಆಯೋಗಕ್ಕೆ ಆಗ್ರಹಿಸಿದ್ದಾರೆ. ಹಸಿರು ವೈರಸ್ ಹೇಳಿಕೆಯ ವಿರುದ್ಧ ಯೋಗಿ ಆದಿತ್ಯನಾಥ್ ವಿರುದ್ಧ ಕೇಸು ದಾಖಲಿಸಬೇಕು. ಇಲ್ಲದಿದ್ದರೆ ಕೋರ್ಟಿನ ಮೊರೆ ಹೋಗುತ್ತೇವೆ ಎಂದು ಲೀಗ್ ನಾಯಕರು ತಿಳಿಸಿದರು.