ಸುಪ್ರೀಂಕೋರ್ಟ್ ಚೀಫ್ ಜಸ್ಟಿಸ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ; ಸುಪ್ರೀಂಕೋರ್ಟಿನಲ್ಲಿ ತುರ್ತು ಸಿಟ್ಟಿಂಗ್

0
1137

ಹೊಸದಿಲ್ಲಿ,ಎ.20: ಸುಪ್ರೀಂಕೋರ್ಟಿನ ಚೀಫ್ ಜಸ್ಟಿಸ್ ರಂಜಿತ್ ಗೊಗೊಯಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಲಾಗಿದೆ. ಕೋರ್ಟಿನ ನೌಕರಳಾದ ಮಹಿಳೆ ಚೀಫ್ ಜಸ್ಟಿಸ್ ಗೊಗೊಯಿ ತನಗೆ ಕಿರುಕುಳ ನೀಡಿದ್ದಾರೆ ಎಂದು ದೇಶದ 22 ಜಡ್ಜ್‌ಗಳಿಗೆ ಪತ್ರ ಬರೆದಿದ್ದಾರೆ. ನಂತರ ಸುಪ್ರೀಂಕೋರ್ಟಿನಲ್ಲಿ ತುರ್ತು ಸಿಟ್ಟಿಂಗ್ ನಡೆಯಿತು.

ಚೀಫ್ ಜಸ್ಟಿಸ್ ಅವರ ಮನೆಯಲ್ಲಿ ತನ್ನನ್ನು ಅಪಮಾನಿಸಿದರೆಂದು ಮಹಿಳೆ ದೂರಿದರು. ರಂಜನ್ ಗೊಗೊಯಿ ಆರೋಪವನ್ನು ನಿರಾಕರಿಸಿದ್ದು ಇದು ಬ್ಲಾಕ್ ಮೈಲ್ ತಂತ್ರ. ಹಣಕ್ಕೆ ಬಗ್ಗದ್ದರಿಂದ ಹೊಸ ತಂತ್ರ ಹೆಣೆಯಲಾಗಿದೆ. ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಎರಡು ಕ್ರಿಮಿನಲ್ ಪ್ರಕರಣ ಇರುವ ಮಹಿಳೆ ಹೇಗೆ ಕೋರ್ಟಿನ ಸೇವೆಗೆ ಸೇರ್ಪಡೆಯಾದರು ಎಂದು ಗೊಗೊಯಿ ಪ್ರಶ್ನಿಸಿದ್ದಾರೆ.

ನ್ಯಾಯಾಂಗವನ್ನು ಅಸ್ಥಿರಗೊಳಿಸುವ ಪ್ರಯತ್ನವಿದು ಎಂದು ಗೊಗೊಯಿ ಹೇಳಿದರು. ಚೀಫ್ ಜಸ್ಟಿಸ್ ಅಧ್ಯಕ್ಷತೆಯ ಪೀಠ ತುರ್ತು ಸಿಟ್ಟಿಂಗ್ ನಡೆಸಿದ್ದು ಗೊಗೊಯಿ ಹೊರತಾಗಿ ಅರುಣ್ ಮಿಶ್ರ, ಸಂಜೀವ್ ಖನ್ನರ ಪೀಠ ಪ್ರಕರಣವನ್ನು ಪರಿಗಣಿಸಿದೆ. ಸಾಲಿಸಿಟ್ ಜನರಲ್ ತುಷಾರ್ ಮೆಹ್ತಾರ ಆಗ್ರಹದಡಿಯಲ್ಲಿ ಇದನ್ನು ಸಾರ್ವಜನಿಕ ಹಿತಾಸಕ್ತಿಯ ಪ್ರಕರಣವಾಗಿ ಪರಿಗಣಿಸಲಾಗಿದೆ.