ಜಮಾಅತೆ ಇಸ್ಲಾಮೀ ಮಂಗಳೂರು ಸಮಾಜ ಸೇವಾ ಘಟಕದ ವತಿಯಿಂದ ಬಡ ಕುಟುಂಬಕ್ಕೆ ಮನೆ ಹಸ್ತಾಂತರ

0
439

ಮಂಗಳೂರು,ಎ,20: ಜಮಾಅತೆ ಇಸ್ಲಾಮೀ ಹಿಂದ್‌ ಮಂಗಳೂರು, ಸಮಾಜ ಸೇವಾ ಘಟಕದ ವತಿಯಿಂದ, ಅಸೈಗೋಳಿ ಸಮೀಪದ “ಅಸೈಮದಕ” ಎಂಬಲ್ಲಿ ಅತ್ಯಂತ ಬಡ ಕುಟುಂಬವೊಂದಕ್ಕೆ ಚೆಂದದ ಮನೆಯೊಂದನ್ನು ಉದ್ಘಾಟಿಸಿ ಹಾಜಿ ಅಸ್ಗರಲಿಯವರು ಹಸ್ತಾಂತರಿಸಿದರು. ಜಮಾಅತೆ ಇಸ್ಲಾಮೀ ಹಿಂದ್‌ ಮಂಗಳೂರು ನಗರಾಧ್ಯಕ್ಷರಾದ ಜ| ಮುಹಮ್ಮದ್ ಕುಂಞಿಯವರು ಸಮಾಜ ಸೇವೆಯ ಅಗತ್ಯ ಮತ್ತು ಮಹತ್ವಗಳ ಕುರಿತು ಮಾತನಾಡಿದರು. ಬೋಳಂಗಡಿ ಹವ್ವಾ ಜುಮ್ಮಾ ಮಸೀದಿಯ ಖತೀಬರಾದ ಮೌಲಾನಾ ಯಹ್ಯಾ ತಂಙಳ್‌ ಮದನಿಯವರು ಸಂದರ್ಭೋಚಿತ ಹಿತವಚನಗಳನ್ನು ನೀಡಿ, ಸಹಕರಿಸಿದ ಸರ್ವರಿಗೂ ಪ್ರಾರ್ಥಿಸಿದರು. ವೇದಿಕೆಯಲ್ಲಿ ಉದ್ಯಮಿಗಳಾದ ಬಶೀರ್ ಅಹಮ್ಮದ್, ಮುಹಮ್ಮದ್ ಇಸ್‌ಹಾಕ್ ಫರಂಗಿಪೇಟೆ, ಜಮಾಅತೆ ಇಸ್ಲಾಮೀ ಹಿಂದ್‌ ಜಿಲ್ಲಾ ಸಂಚಾಲಕ ಅಮೀನ್‌ ಅಹ್ಸನ್‌, ಉಳ್ಳಾಲ ಸಮಾಜ ಸೇವಾ ಘಟಕದ ಸಂಚಾಲಕರಾದ ಅಬ್ದುಸ್ಸಲಾಮ್‌ ಸಿ.ಹೆಚ್‌. ಮತ್ತು ಶಂಶೀರ್ ಪಿಲಾರ್‌ ಉಪಸ್ಥಿತರಿದ್ದರು.