ಮೋದಿ ಸಿನೆಮಾವನ್ನು ಚುನಾವಣಾ ಆಯೋಗ ವೀಕ್ಷಸಬೇಕು- ಸುಪ್ರೀಂ ಆದೇಶ

0
240

ಹೊಸದಿಲ್ಲಿ,ಎ.15: ಪ್ರಧಾನಿ ನರೇಂದ್ರ ಮೋದಿ ಕುರಿತ ಸಿನೆಮಾ ಪಿಎಂ ನರೇಂದ್ರ ಮೋದಿಯನ್ನು ಚುನಾವಣಾ ಆಯೋಗ ವೀಕ್ಷಿಸಬೇಕೆಂದು ಸುಪ್ರೀಂಕೋರ್ಟು ತಿಳಿಸಿದೆ. ಸಿನೆಮಾ ಬಿಡುಗಡೆಗೊಳಿಸಬೇಕೇ? ತಡೆಯಬೇಕೆ ಎನ್ನುವ ವಿಷಯದಲ್ಲಿ ಸಿನೆಮಾ ನೋಡಿದ ಬಳಿಕ ತೀರ್ಮಾನಿಸಿದರೆ ಸಾಕೆಂದು ಕೋರ್ಟು ತಿಳಿಸಿತು. ಸಿನೆಮಾದಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗುವ ವಿಷಯಗಳಿವೆಯೇ ಎಂದು ಪರಿಶೀಲಿಸಲು ಅದು ಸೂಚಿಸಿದೆ.

ಚುನಾವಣೆಯ ಮೊದಲು ಸಿನೆಮಾ ರಿಲೀಸ್ ಮಾಡುವುದನ್ನು ತಡೆದಿರುವ ಆಯೋಗದ ಕ್ರಮ ರದ್ದುಪಡಿಸಬೇಕೆಂದು ನಿರ್ಮಾಪಕರು ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಆಯೋಗದ ಕ್ರಮ ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ ಎಂದು ನಿರ್ಮಾಪಕರು ವಾದಿಸಿದ್ದಾರೆ. ಚೀಫ್ ಜಸ್ಟಿಸ್ ಅಧ್ಯಕ್ಷತೆಯ ಪೀಠ ನಿರ್ಮಾಪಕರ ಅರ್ಜಿಯಲ್ಲಿ ವಿಚಾರಣೆ ನಡೆಸಿತು.