ಕನ್ಯತ್ವ ಪರೀಕ್ಷೆಗೆ ಲೈಂಗಿಕ ದೌರ್ಜನ್ಯ ಅಪರಾಧಡಿಯಲ್ಲಿ ಶಿಕ್ಷೆ ನೀಡಲು ಮಹಾರಾಷ್ಟ್ರ ಸರಕಾರದಿಂದ ಸಿದ್ಧತೆ

0
216

ಮುಂಬೈ: ವಧುವನ್ನು ಕನ್ಯತ್ವ ಪರೀಕ್ಷೆಗೆ ಗುರಿಪಡಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲು ಮಹಾರಾಷ್ಟ್ರ ಸರಕಾರ ನಿರ್ಧರಿಸಿದೆ. ಕೆಲವು ಸಾಮಾಜಿಕ ಸಂಘಟನೆಗಳೊಂದಿಗೆ ಈ ಕುರಿತು ಚರ್ಚಿಸಲಾಗಿದ್ದು ಅಂತಿಮವಾಗಿ ಕಾನೂನು ಬದ್ಧ ಅಪರಾಧವಾಗಿ ಕನ್ಯತ್ವ ತಪಾಸಣೆ ಪರೀಕ್ಷೆಯನ್ನು ಪರಿಗಣಿಸಲು ನಿರ್ಧರಿಸಲಾಯಿತೆಂದು ಮಹಾರಾಷ್ಟ್ರದ ಗೃಹ ಸಹ ಸಚಿವ ರಂಜಿತ್ ಪಾಟೀಲ್ ತಿಳಿಸಿದ್ದಾರೆ.

ಇನ್ನು ಮುಂದೆ ಮಹಾರಾಷ್ಟ್ರದಲ್ಲಿ ಮದುಮಗಳನ್ನು ಕನ್ವತ್ವ ಪರೀಕ್ಷೆಗೆ ಗುರಿಪಡಿಸುವುದು ಲೈಂಗಿಕ ದೌರ್ಜನ್ಯ ಅಪರಾಧವಾಗಲಿದೆ. ಮಹಾರಾಷ್ಟ್ರದ ಕಾಂಚರ್‍ಭಡ್ ಮತ್ತಿತ್ತರ ಸಮುದಾಯಗಳಲ್ಲಿ ಈಗಲೂ ಕನ್ಯತ್ವ ಪರೀಕ್ಷೆ ನಡೆಸುವ ಸಂಪ್ರದಾಯವು ಚಾಲ್ತಿಯಲ್ಲಿದೆ.ಇದೇ ವೇಳೆ ಈ ಸಮುದಾಯದ ಯುವತಲೆಮಾರು ಇದರ ವಿರುದ್ಧ ಆನ್‍ಲೈನ್ ಪ್ರಚಾರ ನಡೆಸುತ್ತಿದೆ.

ಮಹಾರಾಷ್ಟ್ರದಲ್ಲಿ ಕನ್ಯತ್ವ ಪರೀಕ್ಷೆಗೆ ಗುರಿಪಡಿಸುವುದನ್ನು ನಿಷೇಧಿಸಲು ಪ್ರತಿಭಟನಾ ನಿರತರ ಒಂದು ಚಿತ್ರ

ಮಹಾರಾಷ್ಟ್ರ ಸರಕಾರ ಈ ಅನಿಷ್ಟ ಪದ್ಧತಿಯ ಸಮಾಪ್ತಿಗಾಗಿ ಮಹಾರಾಷ್ಟ್ರದ ಸಾಮಾಜಿಕ ಕಾರ್ಯಕರ್ತರು ಮತ್ತು ಶಿವಸೇನೆ ನಾಯಕರಾದ ನೀಲಂ ಗೋರೆಯೊಂದಿಗೆ ಚರ್ಚಿಸಿ ಕನ್ಯತ್ವ ಪರೀಕ್ಷೆಯನ್ನು ಲೈಂಗಿಕ ದೌರ್ಜನ್ಯ ಅಪರಾಧಡಿಯಲ್ಲಿ ಸೇರಿಸಿ ಶಿಕ್ಷೆ ವಿಧಿಸಲಾಗುವುದು ನಿರ್ಧರಿಸಲಾಯಿತೆಂದು ಸಚಿವ ರಂಜಿತ್ ಪಾಟಿಲ್ ತಿಳಿಸಿದ್ದಾರೆ. ಮಹಾರಾಷ್ಟ್ರಕಾನೂನು ಇಲಾಖೆಯೊಂದಿಗೆ ಚರ್ಚಿಸಿ ಕನ್ವತ್ವ ಪರೀಕ್ಷೆಯ ವಿರುದ್ಧ ಯಾವ ರೀತಿ ಕ್ರಮ ಜರಗಿಸಬಹುದು ಎಂದು ನಿರ್ಧರಿಸುವುದಾಗಿ ಸಚಿವರ ಮಾಧ್ಯಮಗಳಿಗೆ ತಿಳಿಸಿದ್ದಾರೆ.