ಬಾಲಕೋಟೆಯಲ್ಲಿ ಸತ್ತವರ ಲೆಕ್ಕ ಸ್ಪಷ್ಟತೆ ನೀಡಬೇಕಾದುದು ಸೇನೆಯ ಕೆಲಸವಲ್ಲ ಸರಕಾರದ ಕೆಲಸ- ಭಾರತದ ವಾಯುಸೇನೆ

0
540

ಕೋಯಮತ್ತೂರ್,ಮಾ.4: ಬಾಲಕೋಟೆಯಲ್ಲಿ ವಾಯುದಾಳಿಯಲ್ಲಿ ಎಷ್ಟು ಮಂದಿಮೃತಪಟ್ಟಿದ್ದಾರೆಂದು ಲೆಕ್ಕ ತೆಗೆದಿಲ್ಲ ಎಂದು ಏರ್ ಚೀಫ್ ಮಾರ್ಶಲ್ ಬಿ.ಎಸ್. ಧನೋವ ಹೇಳಿದರು. ನಾವು ಗುರಿಗೆ ದಾಳಿಯಿಟ್ಟೆವು. ಆದರೆ ಸತ್ತವರ ಲೆಕ್ಕವನ್ನು ತೆಗೆದಿಲ್ಲ. ಕೊಲ್ಲವಲ್ಪಟ್ಟರ ಸಂಖ್ಯೆಯಲ್ಲಿ ಸ್ಪಷ್ಟತೆ ಸಿಗಬೇಕಾಗಿದೆ. ಈ ಲೆಕ್ಕದಲ್ಲಿ ಸ್ಪಷ್ಟತೆಯನ್ನು ನೀಡುವುದು ವಾಯುಸೇನೆಯ ಕೆಲಸವಲ್ಲ ಬದಲಾಗಿ ಸರಕಾರದ ಕೆಲಸವಾಗಿದೆ. ಎಷ್ಟು ಮಂದಿ ಕೊಲ್ಲಲ್ಪಟ್ಟರೆಂದು ಎಂದು ಸೇನೆ ನೋಡುವುದಿಲ್ಲ. ದಾಳಿಯಲ್ಲಿ ಗುರಿ ತಲುಪುವುದು ಮುಖ್ಯ. ಇದು ಆಗಿದೆಯೇ ಎನ್ನುವುದನ್ನು ಏರ್ ಚೀಫ್ ಮಾರ್ಶಲ್ ವಿವರಿಸಿದ್ದಾರೆ.