ಶಬರಿಮಲೆ ವಿಷಯದಲ್ಲಿ ಪ್ರಧಾನಿ ಸುಳ್ಳು ಹೇಳುತ್ತಿದ್ದಾರೆ- ಪಿಣರಾಯಿ ವಿಜಯನ್

0
403

ಕೊಲ್ಲಂ,ಅ.14: ಶಬರಿ ಮಲೆ ವಿಷಯದಲ್ಲಿ ಪ್ರಧಾನಿ ಸುಳ್ಳು ಹೇಳುತ್ತಿದ್ದಾರೆಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಶಬರಿಮಲೆ ವಿಷಯದಲ್ಲಿ ಕೇರಳದಲ್ಲಿ ಹೇಳದ್ದನ್ನು ಮಂಗಳೂರಿನಲ್ಲಿ ಹೇಳಿದ್ದು ಸರಿಯಲ್ಲ. ಚುನಾವಣಾ ನೀತಿ ಸಂಹಿತೆ ಮೋದಿಗೆ ಅನ್ವಯಿಸುತ್ತದೆ ಎಂದರು. ಚುನಾವಣಾ ಆಯೋಗದ ಮೇಲೆ ದಾಳಿ ಮಾಡುತ್ತೇವೆ ಎಂದು ಬಿಜೆಪಿ ಬೆದರಿಕೆ ಹಾಕುತ್ತಿದೆ. ಶಬರಿಮಲೆಯಲ್ಲಿ ಸರಕಾರ ಸಂವಿಧಾನಾತ್ಮಕ ಹೊಣೆಯನ್ನು ನಿರ್ವಹಿಸಿತು. ಭಕ್ತರಿಗೆ ಹಲ್ಲೆ ನಡೆಸಲು ಬಿಜೆಪಿ ತಮ್ಮ ಬೆಂಬಲಿಗರನ್ನು ಶಬರಿಮಲೆಗೆ ಕಳುಹಿಸಿದರು. ಇದನ್ನು ಪ್ರಧಾನಿ ನರೇಂದ್ರ ಮೋದಿಯ ಆಶೀರ್ವಾದವಿತ್ತು ಎಂದು ಪಿಣರಾಯಿ ವಿಜಯನ್ ಆರೋಪಿಸಿದರು. ಅಯ್ಯಪ್ಪನ ಹೆಸರನ್ನು ಕೂಡ ಹೇಳಲಾಗದ ಸ್ಥಿತಿ ಕೇರಳದಲ್ಲಿದೆ ಎಂದು ನರೇಂದ್ರ ಮೋದಿ ಮಂಗಳೂರಿನಲ್ಲಿ ಹೇಳಿದ್ದಾರೆ. ಇದಕ್ಕೆ ಕೇರಳ ಮುಖ್ಯಮಂತ್ರಿ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ.