ಬಿಹಾರ ಸಚಿವ ಸಂಪುಟದಲ್ಲಿ ಶೇ.57 ಕ್ರಿಮಿನಲ್ ಆರೋಪಿಗಳು; 13 ಕೋಟ್ಯಾಧಿಪತಿಗಳು

0
410

ಸನ್ಮಾರ್ಗ ವಾರ್ತೆ

ಪಾಟ್ನ,ನ.19: ಬಿಹಾರದಲ್ಲಿ ಹೊಸದಾಗಿ ಪ್ರಮಾಣ ವಚನ ಸ್ವೀಕರಿಸಿ ಅಧಿಕಾರಕ್ಕೆ ಬಂದ ನಿತೀಶ್ ಕುಮಾರ್‌ರ ಸಚಿವ ಸಂಪುಟದಲ್ಲಿ 14 ಸಚಿವರಲ್ಲಿ 8 ಮಂದಿ ಕ್ರಿಮಿನಲ್ ಕೇಸಿನ ಆರೋಪಿಗಳಿದ್ದಾರೆ. ಸಚಿವ ಸಂಪುಟದ ಶೇ.57ರಷ್ಟು ಕ್ರಿಮಿನಲ್ ಕೇಸು ಹೊಂದಿರುವವರು ಎಂದು ಅಸೋಸಿಯೇಶನ್ ಫಾರ್ ಡೆಮಕ್ರಾಟಿಕ್ ರಿಫಾಮ್ರ್ಸ್ ತಿಳಿಸಿದೆ. ಸಚಿವರಲ್ಲಿ ಆರು ಮಂದಿ ಗಂಭೀರ ಕ್ರಿಮಿನಲ್ ಪ್ರಕರಣ ಹಿನ್ನೆಲೆಯ ಆರೋಪಿಗಳಾಗಿದ್ದು, ಇವರಲ್ಲಿ ಜಾಮೀನು ರಹಿತವಾಗಿ ಐದು ವರ್ಷ ಜೈಲುಶಿಕ್ಷೆ ಅನುಭವಿಸಬೇಕಾದ ಸೆಕ್ಷನ್‍ಗಳನ್ನು ಹೊರಿಸಲಾಗಿದೆ. ಸಚಿವರು ತಮ್ಮ ಅಫಿದಾವಿತ್‍ನಲ್ಲಿ ತಿಳಿಸಿದ್ದಾರೆ.

ಜೆಡಿಯುನ ಇಬ್ಬರು ಸಚಿವರು. ಬಿಜೆಪಿಯ ನಾಲ್ವರು, ಹಿಂದೂಸ್ಥಾನಿ ಅವಾಮ್ ಮೋರ್ಚಾ ಸೆಕ್ಯುಲರ್ ಮತ್ತು ವಿಕಾಸಶೀಲ ಪಾರ್ಟಿಯ ಒಬ್ಬರ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ. ಸಚಿವ ಸಂಪುಟದಲ್ಲಿ ಹದಿಮೂರು ಮಂದಿ ಕೋಟ್ಯಧಿಪತಿಗಳಾಗಿದ್ದಾರೆ. ಇವರ ಸರಾಸರಿ ಆಸ್ತಿ 3.93 ಕೋಟಿ ರೂಪಾಯಿಯಾಗಿದೆ.

ತಾರಾಪುರ ಕ್ಷೇತ್ರದ ಮೇವಾಲಾ ಚೌಧರಿ ಅತ್ಯಂತ ದೊಡ್ಡ ಕೋಟ್ಯಧಿಪತಿ, 12.31 ಕೋಟಿ ಇವರ ಆಸ್ತಿಯಾಗಿದ್ದು ಅತ್ಯಂತ ಕಡಿಮೆ ಆಸ್ತಿ ಅಶೋಕ್ ಚೌಧರಿ ಹೊಂದಿದ್ದಾರೆ. ಇವರ ಆಸ್ತಿ 72.89 ಲಕ್ಷರೂಪಾಯಿ ಆಗಿದೆ.

ಸಚಿವ ಸಂಪುಟದ ನಾಲ್ವರ ಶಿಕ್ಷಣ ಅರ್ಹತೆ 8ನೇ ತರಗತಿಯಿಂದ 12ನೇ ತರಗತಿ ಆಗಿದೆ. ಹತ್ತು ಮಂದಿ ಪದವೀಧರರು ಎಂದು ಹೇಳುತ್ತಿದ್ದಾರೆ.