6ನೇ ಸಾಲಿನಲ್ಲಿ ಕುಳಿತದ್ದು ಗಾಂಧಿಯಲ್ಲ, ಅಸಹಾಯಕ ಸಂವಿಧಾನ

0
573

ಸುಪ್ರೀಂ ಕೋರ್ಟು ದೇಶದ ಪರಮೋನ್ನತ ನ್ಯಾಯ ಸ್ಥಾನ. ಆದರೆ ಇತ್ತೀಚೆಗೆ ನಾಲ್ವರು ಜಡ್ಜ್ ಗಳು ಮುಖ್ಯ ನ್ಯಾಯಾಧೀಶರ ತಾರತಮ್ಯವನ್ನು ದೇಶದ ಗಮನಕ್ಕೆ ತಂದು ಸುದ್ದಿಯಾಗಿದ್ದುಂಟು. ಈಗ ಈ ಉನ್ನತ ನ್ಯಾಯದಾನ ಸಂಸ್ಥೆಗೆ ಹೊರಗಿನಿಂದ ಸವಾಲುಗಳು ಎದುರಾಗಿವೆ. ಪದ್ಮಾವತ್ ಚಿತ್ರ ಪ್ರದರ್ಶನಕ್ಕೆ ರಕ್ಷಣೆ ಕೊಡುವ ಸುಪ್ರೀಮ್ ಕೋರ್ಟು ಆದೇಶಕ್ಕೆ ರಾಜಪೂತ ಸಂಘಟನೆ ಕರ್ಣಿ ಸೇನೆಯು ಸವಾಲೆಸೆದಿದ್ದು ಜನರ ಕಫ್ರ್ಯೂ ಮುಂದುವರಿಯಲಿದೆ ಎಂದಿದೆ. ಅವರ ಪ್ರಕಾರ ಉನ್ನತ ಕೋರ್ಟು ಮುಖ್ಯವಲ್ಲ. ತಾವು ಮೊರೆ ಹೋದ ಜನತಾ ಕೋರ್ಟು ಮುಖ್ಯ. ಆದ್ದರಿಂದ ಸುಪ್ರೀಂ ಕೋರ್ಟು ಏನೇ ತೀರ್ಪು ನೀಡಿದರೂ ಜನರ ಕಫ್ರ್ಯೂ ಮುಂದು ವರಿಯಲಿದೆ. ಅಂದರೆ ಕರ್ಣಿ ಸೇನೆಯವರ ಗೂಂಡಾಗಿರಿ ಮುಂದುವರಿಯುತ್ತಿದೆ ಎಂದರ್ಥ.

ನ್ಯಾಯಾಲಯದ ಬಗ್ಗೆ ಪ್ರಜಾಪ್ರಭುತ್ವದಲ್ಲಿ ಇಷ್ಟು ಲಘುವಾಗಿ ಪ್ರತಿಕ್ರಿಯಿಸಬಹುದೇ?. ಮುಖ್ಯ ನ್ಯಾಯಾಧೀಶರ ಕುರಿತು ಹಿರಿಯ ನ್ಯಾಯಾದೀ ಶರೇ ಅಪಸ್ವರ ಎತ್ತಿದ್ದು ಯಾವುದನ್ನು ವಿಶ್ಲೇಷಿಸುತ್ತದೆ? ಪ್ರಜಾಪ್ರಭುತ್ವ ನೆಟ್ಟಗಿಲ್ಲ ಅಂತಾನಾ ಅಥವಾ ನ್ಯಾಯಾಂಗ ವ್ಯವಸ್ಥೆ ನೆಟ್ಟಗಿಲ್ಲ ಅಂತಾನಾ? ಇವೆರಡರ ನಡುವೆ ಕರ್ಣಿ ಸೇನೆ ಮುಖ್ಯಸ್ಥ ಲೋಕೇಂದ್ರ ಸಿಂಗ್ ಹಾಕಿದ ಸವಾಲು ಇನ್ನೊಂದು ಸಿನಿಕತನ ಅನಿಸುತ್ತದೆ.
ಬಹುಶಃ ಪ್ರಜಾಪ್ರಭುತ್ವದಲ್ಲಿ ಅದರ ಅಂಗಸಂಸ್ಥೆ ಗಳು ಇಷ್ಟೊಂದು ಗೊಂದಲದ ಗೂಡಾದ ಕಾಲ ಈ ಹಿಂದೆಂದೂ ನಡೆದಿಲ್ಲವೇನೋ? 2014ರ ನಂತರ ಪ್ರಜಾಪ್ರಭುತ್ವ, ನ್ಯಾಯವ್ಯವಸ್ಥೆ, ಪ್ರಜೆಗಳು ಇವೆಲ್ಲವೂ ಪದೇ ಪದೇ ಪ್ರಶ್ನಿಸಲ್ಪಡುತ್ತಿವೆ. ಅಥವಾ ಸವಾಲು ಎದುರಿಸುತ್ತಿವೆ ಎನ್ನುವ ಮಾತು ತಿರಸ್ಕರಿಸುವಂಥದ್ದಲ್ಲ.

ಪ್ರಜಾಪ್ರಭುತ್ವ ಎಂದರೇನು ಎನ್ನುವುದನ್ನು ಸರಕಾರ ಗಣರಾಜ್ಯೋತ್ಸವ ಪೆರೇಡ್ ಮೂಲಕ ದೇಶಕ್ಕೆ ವರ್ಷವರ್ಷವೂ ಸಾರಿ ಹೇಳುತ್ತದೆ. ಒಂದು ಕಾಲದಲ್ಲಿ ದೇಶವನ್ನಾಳುತ್ತ ಬಂದ ಪಾರ್ಟಿಯೊಂದರ ಮುಖ್ಯಸ್ಥನನ್ನು ಈ ಪೆರೇಡ್ ವೇಳೆ ಆರನೆ ಸಾಲಿನಲ್ಲಿ ಕೂರಿಸಿದ ಸರ್ವಾದೀಕಾರಿ ಮನಸ್ಸುಗಳಿದೆಯಲ್ಲ ಅದುವೇ ಇಂದು ಗಣರಾಜ್ಯೋತ್ಸವದಂಥ ದೇಶದ ಮಹತ್ವದ ದಿನಗಳಲ್ಲಿನ ಪ್ರಜಾಪ್ರಭುತ್ವವನ್ನು ಬಹಳ ಸ್ಪಷ್ಟವಾಗಿ ವ್ಯಾಖ್ಯಾನಿಸಿಬಿಡುತ್ತಿದೆ. ಅಂದರೆ, ತಮ್ಮಂಥವರಿಗೆ ಪ್ರಥಮ ಸಾಲು, ಈ ದೇಶದಲ್ಲಿ ನಾವು ಮಾಡುವುದನ್ನೆಲ್ಲವನ್ನು ಬೇರೆಯವರು ಆರನೆಯವರಂತೆ ಸುಮ್ಮನೆ ಕೂತು ನೋಡುತ್ತಿರ ಬೇಕು. ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿಗಾದ ಅನುಭವ ಬಹುಶಃ ಈ ದೇಶದ ಪರಮೋಚ್ಚ ನ್ಯಾಯ ಸ್ಥಾನ ಸುಪ್ರೀಮ್ ಕೋರ್ಟಿನ ಕುರಿತು ಕೆಲವರು ವ್ಯಕ್ತಪಡಿಸುತ್ತಿರುವ ಹೇಳಿಕೆಗಳನ್ನೂ ಹೋಲಿಸಿ ಅರ್ಥೈಸಬಹುದು ಅ ನಿಸುತ್ತದೆ.
ಕರ್ಣಿಸೇನೆ ಪ್ರಕಾರ ಜನತಾ ಕೋರ್ಟು ಸುಪ್ರೀಂಕೋರ್ಟಿಗಿಂತ ಹಿರಿದು. ಅಂದರೆ ಆ ಹಿರಿದು ಎನ್ನುವುದಿದೆಯಲ್ಲ ಜನರಿಂದ ಆಯ್ಕೆ ಯಾದವರು ಮತ್ತು ಅಂಥ ಜನರು ತಮಗೆ ತೋಚಿದಂತೆ ಮಾಡುವುದನ್ನೆಲ್ಲ ಕೋರ್ಟಿಗೂ ಇಲ್ಲಿ ಪ್ರಶ್ನಿಸುವ ಹಕ್ಕಿಲ್ಲ ಎಂಬುದೇ ಲೋಕೇಂದ್ರ ಸಿಂಗ್ ಕಾಲ್ವಿಯಂತಹವರ ಪ್ರತಿಪಾದನೆಯಲ್ಲವೇ?
ಹೀಗೆ ಪ್ರಜಾಪ್ರಭುತ್ವ, ಪ್ರಜೆಗಳು ಎಂಬುದೆಲ್ಲವೂ ಬರೇ ಬೂಟಾಟಿಕೆ ಪದಗಳಾಗಿದ್ದು ಮೂರು ನಾಲ್ಕು ವರ್ಷದಿಂದೀಚೆಗಿನ ಘಟನೆಗಳಲ್ಲಿ ಹೆಚ್ಚು ಹೆಚ್ಚು ಕಾಣಿಸುತ್ತಿದೆ.

ಮನುಷ್ಯರ ಕಡಿದು ಕೊಲ್ಲುವ, ಬೆಂಕಿ ಹಚ್ಚಿ ಸಾಯಿಸುವುದಕ್ಕೆ ಇಲ್ಲಿ ಗೋ ರಕ್ಷಕರಿಗೆ ಪ್ರೇರಣೆ ಸಿಗತೊಡಗಿದಲ್ಲಿಂದ ಪ್ರಜಾಪ್ರಭುತ್ವ ಎನ್ನುವ ಒಟ್ಟು ಪರಿಕಲ್ಪನೆಗೆ ಹೊಸ ಆಯಾಮ ಬಂತು. ಅವರು ಮುಸ್ಲಿಮರನ್ನು ಕೊಂದು ಹಾಕಿದಾಗ, ದಲಿತರನ್ನು ಜೀವಂತ ಸುಟ್ಟು ಹಾಕಿದಾಗ ¸ ಸುಮ್ಮನೆ ಮಾತಾಡದೆ ಕೂತ ನಮ್ಮಿಂದ ಇನ್ನು ಸುಮ್ಮನಿರಲು ಸಾಧ್ಯವಿಲ್ಲ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದರು. ಅದು ರಿಪಬ್ಲಿಕ್ ದಿನದ ಕಾರ್ಯಕ್ರಮದಲ್ಲಿ. ದೇಶದ ಪರಿಸ್ಥಿತಿ ಹೀಗಿರುವಾಗ ಕರ್ಣಿ ಸೇನೆಯಂಥವು ನ್ಯಾಯಾಲಯದ ವಿರುದ್ಧವು ನಿ ರಾತಂಕವಾಗಿ ಗುಟುರು ಹಾಕದಿರುತ್ತದೆಯೇ? ಇನ್ನು ಸುಮ್ಮನಿರಲು ಸಾಧ್ಯವಿಲ್ಲ ಫ್ಯಾಶಿಸ್ಟರು ಮನೆಗೆ ನುಗ್ಗಿ ನಮ್ಮನ್ನು ಕೊಲ್ಲಲು ತೊಡಗಿದ್ದಾರೆ ಎಂದು ಕೇಜ್ರಿವಾಲ್ ಅಲವತ್ತು ಕೊಂಡರು. ಹಾಗಿದ್ದರೆ ನಾವೇನು ಮಾಡಬೇಕಾಗಿತ್ತು, ಇನ್ನು ಅವರೇನು ಮಾಡುತ್ತಾರೆ ಎನ್ನುವುದು ಮುಖ್ಯವಾಗುತ್ತದೆ.
ಕರ್ಣಿ ಸೇನೆಯವರು ಕಲ್ಲೆಸೆದಾಗ ಬೆಚ್ಚಿ ಬೊಬ್ಬೆ ಹೊಡೆದು ಅಳುವ ಮಕ್ಕಳನ್ನು ಸೀಟಿನಡಿಯಲ್ಲಿ ಅಡಗಿಸಿ ರಕ್ಷಿಸಲು ಅಧ್ಯಾಪಕಿಯರು ಪಾಡು ಪಡುತ್ತಿರುವ ವೀಡಿಯೊ ದೇಶಾದ್ಯಂತ ವೈರಲ್ ಆಗಿದೆ. ಅಂದರೆ ಹೊಸ ಪ್ರಜಾಪ್ರಭುತ್ವ ಪರಿಕಲ್ಪನೆ ಮಕ್ಕಳಿಗೂ ಬೆಲೆಯಿಲ್ಲದಷ್ಟು ಹೃದಯಹೀನವಾಗಿದೆ. ಹೀಗಾಗಿ ಈಗ ಕರ್ಣಿ ಸೇನೆಯ ಮುಖ್ಯಸ್ಥ ಲೋಕೇಂದ್ರ ಸಿಂಗ್ ನೀಡುತ್ತಿರುವ ಸ್ಷಷ್ಟನೆಗಳು ಪದ್ಮಾವತ್ ಸಿನೆಮಾ ಕ್ಕಿಂತಲೂ ಸಿನಿಕವಾಗುತ್ತದೆ.
ಅಲ್ಲದೆ ಮತ್ತಿನ್ನೇನು? ಮಧ್ಯಪ್ರದೇಶದಲ್ಲಿ ಅಫ್ರಾಝುಲ್ ನನ್ನು, ಹರಿಯಾಣದಲ್ಲಿ ಜುನೈದ್‍ನನ್ನು ಹೀಗೆ, ಝಾರ್ಖಂಡ್, ಉತ್ತರಪ್ರದೇಶ ಎಲ್ಲಾ ಮುಸ್ಲಿಮ್ ಹೆಸರಿನ ವ್ಯಕ್ತಿಗಳನ್ನು ಜೀವಂತ ಸುಟ್ಟು ಕೊಲ್ಲುತ್ತಿರುವಾಗ ಪ್ರಜಾಪ್ರಭುತ್ವದ ರಕ್ಷಕರು ಒಂದು ಮಾತೂ ಆಡುವುದಿಲ್ಲ. ದೇಶದ ಪ್ರಧಾನಿಗೆ ಇದ್ಯಾವುದು ಮುಖ್ಯವಾಗುವುದಿಲ್ಲ. ಅಮೆರಿಕದ ಟ್ರಂಪ್, ಇಸ್ರೇಲಿನ ನೆತನ್ಯಾಹುರೊಂದಿಗೆ ಮಾತಾಡುವ ಧಾವಂತದಲ್ಲಿ ಲೆಕ್ಕಕ್ಕೂ ಒಂದು ಮಾತಾಡಲು ಮೋದಿ ಎನ್ನುವ ಶಕ್ತಿಗೆ ಪುರುಸೊತ್ತಿರುವು ದಿಲ್ಲ. ಗಣರಾಜ್ಯೋತ್ಸವವು ಅರ್ಥವನ್ನೇ ಕಳಕೊಳ್ಳವಂತೆ ಮಾಡು ವಷ್ಟು ನಿರ್ದಯಿತ್ವ ಇಂದು ಬೆಳೆದಿದೆ ಎನ್ನಬಹುದು.