ಗೆಳೆಯರಿಂದ ಹತ್ಯೆಗೀಡಾದ ಅಖಿಲ್‍ಗೆ ಎಸ್‌ಎಸ್‌ಎಲ್‌ಸಿ‌ಯಲ್ಲಿ ಶೇ.60 ಅಂಕ

0
651

ಸನ್ಮಾರ್ಗ ವಾರ್ತೆ

ಕೇರಳ,ಜು.1: ಲಾಕ್‍ಡೌನ್ ಕಾಲದಲ್ಲಿ ಸಹಪಾಠಿಗಳಿಂದ ಹತ್ಯೆಗೀಡಾದ ಹತ್ತನೆ ತರಗತಿಯ ವಿದ್ಯಾರ್ಥಿ ಅಖಿಲ್‍ಗೆ(16) ಎಸೆಸೆಲ್ಸಿಯಲ್ಲಿ ಶೇ.60 ಅಂಕಗಳು ಬಂದಿವೆ. ಲಾಕ್‍ಡೌನ್ ಕಾಲದಲ್ಲಿ ಅಖಲ್‌ನ ಕೊಲೆಯು ನಡೆದಿತ್ತು. ಕೊಲೆ ಮಾಡಿದ ಆರೋಪಿಗಳೂ ಪಾಸಾಗಿದ್ದಾರೆ. ಏಳು ಪರೀಕ್ಷೆ ಬರೆದು ಮುಗಿದ ಮೇಲೆ ಕೊಲೆಪಾತಕ ನಡೆದಿತ್ತು. ನಂತರ ನಡೆದ ಗಣಿತ, ಕೆಮಸ್ಟ್ರೀ, ಫಿಸಿಕ್ಸ್ ಪರೀಕ್ಷೆಗಳನ್ನು ಅಖಿಲ್‍ಗೆ ಬರೆಯಲು ಆಗಿಲ್ಲ. ಅಖಿಲ್, ಕೈಪಟ್ಟೂರ್ ಸೇಂಟ್ ಜಾರ್ಜ್ ಮೌಂಟ್ ಹೈಸ್ಕೂಲಿನ ವಿದ್ಯಾರ್ಥಿ.

ಇಬ್ಬರು ಕೊಲೆ ಆರೋಪಿಗಳು ಕೂಡ ಪಾಸಾಗಿದ್ದಾರೆ. ಅಂಗಡಿಕ್ಕಲ್ ತೆಕ್ ಎಸ್‌.ಎಲ್.ವಿ.ಎಚ್‍.ಎಸ್ ಶಾಲೆಯ ಸಮೀಪ ಕದಳಿವನಂ ಮನೆಯ ಬಳಿ ಇದ್ದ ರಬರ್ ತೋಟದಲ್ಲಿ ಎಪ್ರಿಲ್ 21ಕ್ಕೆ ಘಟನೆ ನಡೆದಿದೆ. ಪೂರ್ವ ದ್ವೇಷ ಕೊಲೆಗೆ ಕಾರಣವಾಗಿತ್ತು. ಅಪ್ರಾಪ್ತ ಬಾಲಕರು ಆರೋಪಿಗಳಾದ್ದರಿಂದ ಆರೋಪಿಗಳಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಕೋರ್ಟು ಅನುಮತಿ ನೀಡಿತ್ತು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.