ಅಮೆರಿಕ, ಯುರೋಪ್ ಮಧ್ಯಪ್ರಾಚ್ಯದ ಮಕ್ಕಳನ್ನು ಕೊಲ್ಲಲು ಆಯುಧ ನೀಡುತ್ತಿದೆ- ಪೋಪ್

0
886

ವ್ಯಾಟಿಕನ್ ಸಿಟಿ,ಎ.9: ಸಿರಿಯ, ಯಮನ್, ಅಫ್ಘಾನಿಸ್ತಾನದ ಯುದ್ಧದಲ್ಲಿ ನಡೆಯುತ್ತಿರುವ ಮಕ್ಕಳ ಹತ್ಯೆಗಳಿಗೆ ಯುರೋಪಿಯನ್ ದೇಶಗಳು ಮತ್ತು ಅಮೆರಿಕ ಹೊಣೆಯಾಗಿದೆ ಎಂದು ಪೋಪ್ ಫ್ರಾನ್ಸಿಸ್ ಹೇಳಿದರು. ಆಯುಧ ಮಾರಾಟದ ಮೂಲಕ ಈ ದೇಶಗಳಲ್ಲಿ ಘರ್ಷಣೆಯನ್ನು ಶ್ರೀಮಂತ ದೇಶಗಳು ಹೆಚ್ಚಿಸುತ್ತಿವೆ. ಇದು ಪ್ರಶ್ನಿಸಲೇ ಬೇಕಾದ ವಿಚಾರವಾಗಿದ್ದು ಆಯುಧಗಳು ಸಿಗದಿರುತ್ತಿದ್ದರೆ ಇಲ್ಲೆಲ್ಲ ಘರ್ಷಣೆಯ ಪ್ರಮಾಣ ಕಡಿಮೆಯಾಗಿರುತ್ತಿತ್ತು. ಪ್ರತಿಯೊಂದು ಮಕ್ಕಳ ಸಾವು ಮತ್ತು ಕುಟುಂಬಗಳ ಪತನಗಳೆಲ್ಲವೂ ಆಯುಧಗಳನ್ನು ನಿರ್ಮಿಸಿ ಮಾರಾಟ ಮಾಡುವ ಈ ದೇಶಗಳ ಮನಃ ಸಾಕ್ಷಿಯಾನ್ನು ಖಂಡಿತಾ ಬೇಟೆಯಾಡಲಿದೆ ಎಂದು ಪೋಪ್ ಹೇಳಿದರು. ಇಟಲಿಯ ಅಪರಾಧ ಕೃತ್ಯಗಳ ಹಿಂದೆ ವಿದೇಶಿ ಪ್ರಜೆಗಳಿಲ್ಲ. ಯಾಕೆಂದರೆ ನಾವು ಹಲವಾರು ವಿದೇಶಿ ಪ್ರಜೆಗಳನ್ನು ಆಶ್ರಯ ನೀಡುತ್ತಿದ್ದೇವೆ. ಕ್ರಿಮಿನಲ್ ಆರೋಪ ಹೊರಿಸಿ ನಿರಾಶ್ರಿತರಿಗೆ ಆಶ್ರಯ ನಿರಾಕರಿಸುವ ಸರಕಾರಗಳ ಕ್ರಮವನ್ನು ಪೋಪ್ ಆಕ್ಷೇಪಿಸಿದರು.