ಎಂ.ಜಿ. ರಸ್ತೆಯಲ್ಲಿ ನಿಜಕ್ಕೂ ನಡೆದದ್ದೇನು?

0
1983

ಖುದ್ಸಿಯಾ ಬಾನು ಬೆಂಗಳೂರು

ಒಂದಾದರೂ ಅಹಿತಕರ ಘಟನೆ ನಡೆಯದಿದ್ದರೆ, ಯುವತಿಯರನ್ನು ಚುಡಾಯಿಸುವ ಒಂದೆರಡು ಪ್ರಕರಣಗಳು ಜರುಗದೇ ಇದ್ದರೆ, ಪೋಲೀಸರು ಲಘು ಲಾಠಿ ಪ್ರಹಾರ ಮಾಡದೇ ಇದ್ದರೆ ರಾಜಧಾನಿ ಬೆಂಗಳೂರಿನ ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆಯ ಹೊಸ ವರ್ಷದ ಸಂಭ್ರಮಾಚರನೆ `ಸಪ್ಪೆ’ ಎನ್ನುಂತಾಗಿದೆ.

ಹೊಸ ವರ್ಷದ ಸಂಭ್ರಮ ಅಹಿತಕರ ಘಟನೆ ಇಲ್ಲದೇ ಮುಗಿದು ಹೋದರೆ ಪೆÇಲೀಸರು ಮತ್ತು ನಗರದ ಸುಸಂಸ್ಕೃತ, ಶಾಂತಿಪ್ರೀಯ ನಾಗರಿಕರು ನಿಟ್ಟಿಸುರು ಬಿಡುತ್ತಾರೆ. ಆದರೆ, ಕೆಲವು ಮಾಧ್ಯಮಗಳು ಇದನ್ನು ಅರಗಿಸಿಕೊಳ್ಳಲು ಸಿದ್ಧರಿರುವುದಿಲ್ಲ. ಹೊಸ ವರ್ಷದ ಸಂಭ್ರಮಾಚರಣೆಯ ಅತಿರಂಜಿತ, ಮಸಾಲ ಸುದ್ದಿಗಳು ಸಿಗದಿದ್ದರೆ ಸ್ಥಳದಲ್ಲಿರುವ ವರದಿಗಾರರಿಗೆ ಅವರು ಕೊಡುವ ಸುದ್ದಿ ರೂಪದ `ಸಾಂಬಾರು’ ರುಚಿಸುವುದಿಲ್ಲ. ಸುದ್ದಿಮನೆಗಳಲ್ಲಿ ಕೂತಿರುವ ಬಾಸ್‍ಗಳಿಗೆ ಅದು ಮಸಾಲಾ ಇಲ್ಲದ ಸಾಂಬಾರು ಜೀರ್ಣವಾಗುವುದಿಲ್ಲ.
ಮೊನ್ನೆ ಡಿ.31ರಂದು ರಾತ್ರಿ 12 ಗಂಟೆಗೆ ಎಂ.ಜಿ. ರಸ್ತೆ, ಬ್ರಿಗೇಡ್ ರಸ್ರೆಯಲ್ಲಿ ಆದದ್ದು ಇದೇನೆ.
ಎಲ್ಲವೂ ಸರಿಯಾಗಿ ನಡೆದಿತ್ತು. ಹೊಸ ವರ್ಷದ ಆಗಮನಕ್ಕೆ ಇನ್ನೂ 8 ನಿಮಿಷ ಬಾಕಿ ಇರುವಾಗ ಎಂ.ಜಿ ರಸ್ತೆಯಲ್ಲಿ ನಾಲ್ಕೈದು ಯುವತಿಯರನ್ನು ಕೆಲವು ಪುಂಡರು ಸುತ್ತವರಿದು ಅಸಭ್ಯವಾಗಿ ವರ್ತಿಸಲಾರಂಭಿಸಿದರು. ಇದನ್ನು ಗಮನಿಸಿದ ಪೆÇಲೀಸರು ಹಾಗೂ ನಾಗರಿಕ ರಕ್ಷಣಾ ಸಿಬ್ಬಂದಿ ಪರಿಸ್ಥಿತಿ ನಿಭಾಯಿಸಲು ಮುಂದಾದರು. ಈ ಸುದ್ದಿ ಸಿಕ್ಕಿದ್ದೆ ತಡ ಮಾಧ್ಯಮಗಳ ಸಂಭ್ರಮ ರಂಗೇರಿತು. ಎಕ್ಸ್‍ಕ್ಲೂಸಿವ್, ಬ್ರೇಕಿಂಗ್ ನ್ಯೂಸ್‍ಗಳು ಪ್ರಾರಂಭವಾದವು. ಪೋಲೀಸರ ವೈಫಲ್ಯದಿಂದ ಈ ಘಟನೆ ನಡೆದಿದೆ. ಇದಕ್ಕೆ ನೇರವಾಗಿ ರಾಜ್ಯ ಸರ್ಕಾರವೇ ಹೊಣೆ. ಮಹಿಳೆಯರಿಗೆ ಬೆಂಗಳೂರು ಸುರಕ್ಷಿತವಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಮಾಧ್ಯಮಗಳು ತೀರ್ಪು ನೀಡಲಾರಂಭಿಸಿದವು.
ಹಾಗಂತ, ನಡೆದ ಘಟನೆ ಗಂಭೀರವಾದುದಲ್ಲ ಎಂಬರ್ಥವಲ್ಲ. ಕಿರುಕುಳ ಮತ್ತು ಶೋಚಣೆಗೊಳಗಾದ ಯುವತಿಯರ ಬಗ್ಗೆ ಸಹಾನುಭೂತಿ ಇದೆ. ಇದೇ ವೇಳೆ ದುಷ್ಕೃತ್ಯವೆಸಗಿದ ಪುಂಡರಿಗೆ ಕಠಿಣ ಶಿಕ್ಷೆ ಆಗಬೇಕು ಅನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ನಡೆದ ವೃತ್ತಾಂತದ ಬಗ್ಗೆ ಮಾತನಾಡಬೇಕಿದೆ. ಈ ರೀತಿಯ ಹೊಸ ವರ್ಷದ ಆಚರಣೆಯ ಔಚಿತ್ಯ ಇತ್ತಾ. ಅಷ್ಟಕ್ಕೂ ಜನೆವರಿಂದ ಒಂದರ ಹೊಸ ವರ್ಷ ನಮ್ಮ ಸಂಸ್ಕ್ರತಿನಾ? ಸಂಪ್ರದಾಯನಾ? `ಯತ್ರ ನಾರ್ಯಂತು ಪೂಜ್ಯಂತೆ ರಮಂತೆ ತತ್ರ ದೇವತ` ಎಂಬ ಸಂಸ್ಕøತಿ ನಮ್ಮದು. ಆದರೆ, ಹೆಣ್ಣನ್ನು `ಮನರಂಜನೆಯ ಸರಕು’ ಎಂದು ನೋಡುವ ಸಾವಿರಾರು ಕಣ್ಣುಗಳು, ವಿಕೃತ ಮನಸ್ಸುಗಳು ಸೇರಿರುವ ಜಾಗದಲ್ಲಿ ಹಣ್ಣಿಗೆ ಗೌರವ, ರಕ್ಷಣೆ ನಿರೀಕ್ಷಿಸಲು ಸಾಧ್ಯವೆ?, ಇಂತಹ ಕಡೆಗಳಲ್ಲಿ ಹೆಣ್ಣುಮಕ್ಕಳು ಹೋಗುವುದನ್ನು ಮಹಿಳಾ ಸ್ವಾತಂತ್ರ ಎಂದು ವ್ಯಾಖ್ಯಾನಿಸಬಹುದೇ ಎಂದು ನಮ್ಮಲ್ಲಿ ಪ್ರತಿಯೊಬ್ಬರು ಪ್ರಶ್ನಿಸಿಕೊಳ್ಳಬೇಕಾಗಿದೆ.
ಹೊಸ ವರ್ಷದ ಸಂಭ್ರಮಾಚರಣೆಗೆ ಬೆಂಗಳೂರು ನಗರಾದ್ಯಂತ ಒಟ್ಟು 15 ಸಾವಿರ ಪೋಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ನಗರದಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಲಕ್ಷಾಂತರ ಸಿಸಿಟಿವಿ ಕ್ಯಾಮರಾಗಳ ಜೊತೆಗೆ ಒಂದು ದಿನದ ಮಟ್ಟಿಗೆ ಹೆಚ್ಚುವರಿಯಾಗಿ 5 ಸಾವಿರ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್‍ಸ್ಟ್ರೀಟ್‍ನಲ್ಲಿ ನಡೆಯುವ `ಮೋಜಿನ’ ಮೇಲೆ ಕಣ್ಣಿಡಲು 300 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸುವುದರ ಜೊತೆಗೆ 6ರಿಂದ 7 ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಇಷ್ಟೊಂದು ಕಟ್ಟೆಚ್ಚರ, ಆತಂಕಗಳ ನಡುವೆ ನಮ್ಮದಲ್ಲದ ಹೊಸ ವರ್ಷ ಆಚರಿಸುವುದರಲ್ಲಿ ಅರ್ಥವಿದೆಯೇ ಈಗಂತೂ ಆಗಿದ್ದು ಆಯಿತು, ಮುಂದಿನ ಬಾರಿಯಾದರೂ ಇದರ ಬಗ್ಗೆ ಜಾಗೃತರಾಗೋಣ.