ಟಿಕ್ ಟಾಕ್ ವೀಡಿಯೊ ಚಿತ್ರೀಕರಣದ ವೇಳೆ ಗುಂಡೇಟಿಗೀಡಾಗಿ ಯುವಕನ ಸಾವು

0
574

ಹೊಸದಿಲ್ಲಿ,ಎ.15: ಟಿಕ್-ಟಾಕ್ ವೀಡಿಯೊ ಚಿತ್ರೀಕರಣದ ಸಮಯದಲ್ಲಿ ದಿಲ್ಲಿಯಲ್ಲಿ 19 ವರ್ಷದ ಯುವಕ ಸಲ್ಮಾನ್ ಎಂಬಾತ ಗೆಳೆಯನ ಕೈಯಲ್ಲಿದ್ದ ಫಿಸ್ತೂಲಿನಿಂದ ಗುಂಡು ಹಾರಿ ಮೃತಪಟ್ಟಿದ್ದಾನೆ. ನಿನ್ನೆ ರಾತ್ರೆ ಘಟನೆ ನಡೆದಿದ್ದು ಸಲ್ಮಾನ್ ತನ್ನ ಗೆಳೆಯರಾದ ಸುಹೈಲ್, ಆಮಿರ್‍ರೊಂದಿಗೆ ಕಾರಿನಲ್ಲಿ ಇಂಡಿಯಾ ಗೇಟ್ಗೆ ಹೋಗುತ್ತಿದ್ದರು. ಮರುಳುವಾಗ ಮುಂದಿನ ಸೀಟಿನಲ್ಲಿ ಕಾರು ಚಲಾಯಿಸುತ್ತಿದ್ದ ಸಲ್ಮಾನ್ ಮೇಲೆ ಫಿಸ್ತೂಲು ತೋರಿಸಿದ್ದಾನೆ. ಟಿಕ್‍ಟಾಕ್ ವೀಡಿಯೊ ಚಿತ್ರೀಕರಣ ಅವರ ಉದ್ದೇಶವಾಗಿತ್ತು.

ಆದರೆ ಫಿಸ್ತೂಲ್‍ನಿಂದ ಪ್ರಮಾದ್ ವಶಾತ್ ಗುಂಡು ಸಿಡಿದು ಕಪಾಳ ಸೀಳಿದೆ. ಮಧ್ಯ ದಿಲ್ಲಿಯ ರಂಜಿತ್ ಸಿಂಗ್ ಫ್ಲೈ ಓವರಿನ ಸಮೀಪ ದಾರುಣ ಘಟನೆ ನಡೆಯಿತು. ಕೂಡಲೇ ಸುಹೈಲ್‍ನ ಸಂಬಂಧಿಕರ ಮನೆಗೆ ಹೋಗಿ ಸ್ನಾನ ಮಾಡಿ ಬಟ್ಟೆ ಬದಾಯಿಸಿ ಆಸ್ಪತ್ರೆಗೆ ಸಲ್ಮಾನ್ ಹೋಗಿದ್ದಾನೆ. ಆದರೆ ಅಲ್ಲಿ ಸಲ್ಮಾನ್ ಮೃತಪಟ್ಟನು. ಸಲ್ಮಾನ್‍ನನ್ನು ಆಸ್ಪತ್ರೆಗೆ ದಾಖಲಿಸಿದ ಕೂಡಲೇ ಗೆಳೆಯನಾದ ಸುಹೈಲ್ ಮತ್ತು ಆತನ ಸಂಬಂಧಿಕ ಅಲ್ಲಿಂದ ತಪ್ಪಿಸಿಕೊಂಡಿದ್ದರು. ಆಸ್ಪತ್ರೆಯಿಂದ ಪೊಲೀಸರಿಗೆ ದೂರು ನೀಡಲಾಗಿತ್ತು. ನಂತರ ಪೊಲೀಸರು ಸುಹೈಲ್, ಆಮಿರ್, ಸಂಬಂಧಿಕನಾದ ಶರೀಫ್ ಎಂಬವರನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.