ಚೌಕಿದಾರ್ ಚೋರ್ ಹೇಳಿಕೆ; ರಾಹುಲ್‍ಗೆ ಸುಪ್ರೀಂಕೋರ್ಟ್ ನೋಟಿಸು

0
161

ಹೊಸದಿಲ್ಲಿ,ಎ.15: ರಫೇಲ್ ತೀರ್ಪಿನ ನಂತರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೀಡಿದ ಹೇಳಿಕೆಯಲ್ಲಿ ಸುಪ್ರೀಂಕೋರ್ಟು ನೋಟಿಸು ಜಾರಿಗೊಳಿಸಿದೆ. ರಫೇಲ್ ತೀರ್ಪು ಬಂದ ಮೇಲೆ ರಾಹುಲ್ ಗಾಂಧಿ ಚೌಕಿದಾರ್ ಚೋರ್ ಎಂದಿದ್ದರು. ಈ ಕುರಿತು ಸ್ಪಷ್ಟೀಕರಣ ಕೇಳಿ ಸುಪ್ರೀಂಕೋರ್ಟು ನೋಟಿಸು ಕಳುಹಿಸಿದೆ.

ಬಿಜೆಪಿ ನಾಯಕಿ ಮೀನಾಕ್ಷಿ ಲೇಖಿ ರಾಹುಲ್ ಹೇಳಿಕೆ ವಿರುದ್ಧ ಸುಪ್ರೀಂಕೋರ್ಟಿನ ಮೆಟ್ಟಲೇರಿದ್ದರು. ಸುಪ್ರೀಂಕೋರ್ಟು ಮೋದಿಯನ್ನು ಕಳ್ಳನೆಂದು ತೀರ್ಪಿನಲ್ಲಿ ಸೂಚಿಸಿದೆ ಎಂದು ರಾಹುಲ್ ಹೇಳಿದ್ದಾರೆ ಎಂದು ಲೇಖಿ ಅರ್ಜಿಯಲ್ಲಿ ಆಕ್ಷೇಪ ಸಲ್ಲಿಸಿದ್ದರು. ರಾಹುಲ್ ವೈಯಕ್ತಿಕ ಲಾಭಕ್ಕಾಗಿ ತೀರ್ಪನ್ನು ತಿರುಚಿದರೆಂದು ಕೋರ್ಟಿನಲ್ಲಿ ಮೀನಾಕ್ಷಿ ಲೇಖಿ ದೂರು ಸಲ್ಲಿಸಿದ್ದಾರೆ.